₹4.5 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ರಾಮನಗರ ತಾಲೂಕು ಕೈಲಾಂಚ ಹೋಬಳಿಯ ಜಕ್ಕನಹಳ್ಳಿಲ್ಲಿ ಕಾಂಕ್ರಿಟ್​ ರಸ್ತೆಗೆ ಶಾಸಕ ಎಚ್​.ಎ. ಇಕ್ಬಾಲ್​ ಹುಸೇನ್​ ಭೂಮಿ ಪೂಜೆ ನೆರವೇರಿಸಿದರು. ಮಾಜಿ ಶಾಸಕ ಕೆ. ರಾಜು, ಬನ್ನಿಕುಪ್ಪೆ ಗ್ರಾಪಂ ಅಧ್ಯಕ್ಷ ಆರ್​. ರವಿಕುಮಾರ್​, ಉಪಾಧ್ಯೆ ಜ್ಯೋತಿ, ಪ್ರಾಧಿಕಾರ ಅಧ್ಯಕ್ಷ ಚೇತನ್​ಕುಮಾರ್​, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ವಿ.ಎಚ್​. ರಾಜು, ಪಿಡಿಒ ಜೈಸಿಂಹ, ಕಾರ್ಯದರ್ಶಿ ಜಯರಾಮಯ್ಯ, ಸದಸ್ಯರಾದ ಬಿ.ಸಿ. ಹೇಮಂತ್​ಕುಮಾರ್​, ಚಂದ್ರಗಿರಿ, ಪೂರ್ಣಿಮಾ ಶಿವಮೂರ್ತಿ, ಕುಮಾರ್​ ಇದ್ದರು.

Published on
ಕೈಲಾಂಚ: ಬಿನ್ನಿಕುಪ್ಪೆ ಗ್ರಾಪಂನಲ್ಲಿ ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ವಿಶೇಷವಾಗಿ ರಸ್ತೆ, ಚರಂಡಿ, ಕುಡಿಯುವ ನೀರು, ಆಸ್ಪತ್ರೆ, ಶಾಲೆಗಳು ನಿರ್ಮಾಣವಾಗಬೇಕಿದೆ. 4.5 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಎಚ್​.ಎ.ಇಕ್ಬಾಲ್​ ಹುಸೇನ್​ ತಿಳಿಸಿದರು.
ರಾಮನಗರ ತಾಲೂಕು ಕೈಲಾಂಚ ಹೋಬಳಿಯ ಬನ್ನಿಕುಪ್ಪೆ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಶನಿವಾರ ಶಾಸಕ ಎಚ್​.ಎ. ಇಕ್ಬಾಲ್​ ಹುಸೇನ್​ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಕಾಂಕ್ರೀಟ್​ ರಸ್ತೆ ಉದ್ಘಾಟಿಸಿ ಮಾತನಾಡಿದರು.
20 ವರ್ಷಗಳಿಂದ ಬನ್ನಿಕುಪ್ಪೆ ಭಾಗದಲ್ಲಿ ಸುಸಜ್ಜಿತ ರಸ್ತೆ ಹಾಗೂ ಚರಂಡಿ ಕೆಲಸಕ್ಕೆ ಆದ್ಯತೆ ನೀಡಿರಲಿಲ್ಲ. ಹಾಗಾಗಿ ಇಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಗ್ಯಾರೆಂಟಿ ಯೋಜನೆ ಜತೆಗೆ ನಮ್ಮ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತಿದ್ದು, ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದೆ ಎಂದರು.
ಅರ್ಹರಿದ್ದವರಿಗೂ ರೇಷನ್​ ಕಾರ್ಡ್​ ಕಡಿತವಾಗಿರುವುದು ಗಮನಕ್ಕೆ ಬಂದಿದೆ. ಈ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ. ಬಗರ್​ ಹುಕುಂ ಸಾಗುವಳಿ ಚೀಟಿ ಬಾಕಿ ಇರುವ ಅರ್ಜಿಗಳನ್ನು ಶ್ರೀದಲ್ಲಿಯೇ ವಿಲೇ ಮಾಡಲಾಗುತ್ತದೆ. ಈ ಹಿಂದೆ ಬಗರ್​ಹುಕುಂ ಸಾಗುವಳಿಯಲ್ಲಿ ಸಾಕಷ್ಟು ರಾಜಕಾರಣ ನಡೆದಿದೆ. ಸರಿಯಾದ ರೀತಿಯಲ್ಲಿ ಅದರಲ್ಲೂ ಜಾತ್ಯಾತಿತವಾಗಿ ಹಾಗೂ ಪಾತೀತವಾಗಿ ಅರ್ಜಿಗಳನ್ನು ಈ ಹಿಂದೆ ವಿಲೇ ಮಾಡಲಾಗಿಲ್ಲ. ಅವರಿಗೆ ಬೇಕಾದವರಿಗೆ ವಿಲೇ ಮಾಡಿದ್ದಾರೆ. ಇನ್ನೂ ಕೆಲವನ್ನು ವಜಾಗೊಳಿಸಲಾಗಿದೆ. ಎಲ್ಲ ಅರ್ಜಿಯನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಕ್ಷೇತ್ರಕ್ಕೆ 5ರಿಂದ 6 ಹೈಟೆಕ್​ ಶಾಲೆ ಮಂಜೂರಾಗಿವೆ. ಇದಕ್ಕೂ ಮುನ್ನ ಡಿಸಿಎಂ ಡಿ.ಕೆ.ಶಿವಕುಮಾರ್​ ಸಿಎಸ್​ಆರ್​ ಅನುದಾನದಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್​ ಶಾಲೆ ನಿರ್ಮಿಸುತ್ತಿದ್ದಾರೆ ಎಂದರು. 50 ಕೋಟಿ ರೂ. ವೆಚ್ಚದಲ್ಲಿ ಹಾರೋಹಳ್ಳಿ ಹಾಗೂ ಮರಳವಾಡಿ ರಸ್ತೆ ನಿರ್ಮಿಸಲಾಗುತ್ತಿದೆ ಎಂದರು.
ಮುಖಂಡರಾದ ಜಯಣ್ಣ, ಶಿವಣ್ಣ, ಕೋಟಿ ಶಿವಣ್ಣ, ವಿಷಕಂಠಯ್ಯ, ಆನಂದಗಿರಿಯಪ್ಪ, ಶಂಕರ್​, ರಾಜು, ಪ್ರತಾಪ್​, ಶ್ರೀನಿವಾಸಮೂರ್ತಿ, ನಾಗೇಶ್​, ಕರಿಯಪ್ಪ, ಸ್ವಾಮಿ, ಪುಟ್ಟಸಿದ್ದಯ್ಯ, ಶಿವಲಿಂಗಯ್ಯ, ಸಿದ್ದರಾಜು, ಸದಾಶಿವಯ್ಯ, ಚಂದ್ರಯ್ಯ, ರವಿ, ಗುತ್ತಿಗೆದಾರ ಸುಂದರ್​, ಎಇಇ ಪಳನಿಸ್ವಾಮಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net