ಕೆಂಪೇಗೌಡರ ಕೋಟೆ ಅಭಿವೃದ್ಧಿ

ಮಾಗಡಿಯ ಕೆಂಪೇಗೌಡ ಕೋಟೆಯ ಒಳ ಕೋಟೆಯ ಮರು ಜಿಣೋರ್ದ್ಧಾರ ಕಾಮಗಾರಿಗೆ ಬಮುಲ್​ ನಿರ್ದೆಶಕ ಎಚ್​.ಎನ್​.ಆಶೋಕ್​ ಭೂಮಿಪೂಜೆ ನೆರವೇರಿಸದರು. ಬಮುಲ್​ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಬಿಎಂಆರ್​ಡಿಎ ಅಧ್ಯಕ್ಷ ಪ್ರಕಾಶ್​, ಟಿಎಪಿಸಿಎಂಎಸ್​ ಅಧ್ಯಕ್ಷ ಶಿವಪ್ರಸಾದ್​ ಇದ್ದರು.
ಮಾಗಡಿಯ ಕೆಂಪೇಗೌಡ ಕೋಟೆಯ ಒಳ ಕೋಟೆಯ ಮರು ಜಿಣೋರ್ದ್ಧಾರ ಕಾಮಗಾರಿಗೆ ಬಮುಲ್​ ನಿರ್ದೆಶಕ ಎಚ್​.ಎನ್​.ಆಶೋಕ್​ ಭೂಮಿಪೂಜೆ ನೆರವೇರಿಸದರು. ಬಮುಲ್​ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಬಿಎಂಆರ್​ಡಿಎ ಅಧ್ಯಕ್ಷ ಪ್ರಕಾಶ್​, ಟಿಎಪಿಸಿಎಂಎಸ್​ ಅಧ್ಯಕ್ಷ ಶಿವಪ್ರಸಾದ್​ ಇದ್ದರು.
Published on
ಮಾಗಡಿ: ಕೆಂಪೇಗೌಡರ ಕೋಟೆ, ಕೆರೆ, ಕಟ್ಟೆ, ಕಲ್ಯಾಣಿ ಕೊತ್ತಲುಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಬಮುಲ್​ ಅಧ್ಯಕ್ಷ ಎಚ್​.ಎನ್​. ಅಶೋಕ್​ ಹೇಳಿದರು.
ಪಟ್ಟಣದ ಕೆಂಪೇಗೌಡರ ಕೋಟೆಯ ಒಳ ಕೋಟೆ ಮರು ಜಿಣೋರ್ದ್ಧಾರ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಐತಿಹಾಸಿಕ ಮಾಗಡಿ ಕೋಟೆಯ ನವೀಕರಣ ಹಾಗೂ ಪುನರುಜ್ಜೀವನ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದಿಂದ ಒಟ್ಟು 103 ಕೋಟಿ ರೂ. ವೆಚ್ಚದ ಯೋಜನೆಗೆ ಮೊದಲನೇ ಹಂತದಲ್ಲಿ 62 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದರು.
ಕೋಟೆಯ ಹೊರಭಾಗದ ಕಲ್ಲಿನ ಗೋಡೆಯ ಮಾದರಿಯಲ್ಲೇ ಒಳಗಿನ ನಾಲ್ಕೂ ಕಡೆಗಳಲ್ಲಿ ಕಲ್ಲಿನ ಗೋಡೆಗಳ ಮರುನಿರ್ಮಾಣ ಹಾಗೂ ಸಾರ್ವಜನಿಕರು ಮತ್ತು ವಾಯುವಿಹಾರಿಗಳಿಗಾಗಿ ಕೋಟೆಯ ಸುತ್ತಲೂ ಸುಂದರವಾದ ವಾಕಿಂಗ್​ ಟ್ರಾ$್ಯಕ್​ ನಿರ್ಮಿಸಲಾಗುವುದು. ಸರ್ಕಾರ ನಿಗದಿಪಡಿಸಿರುವಂತೆ ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಮಳೆ ಅಥವಾ ಬಿಸಿಲಿನ ನೆಪವೊಡ್ಡಿ ಕಾಮಗಾರಿಯನ್ನು ವಿಳಂಬ ಮಾಡದಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ನಿಗದಿತ ಅವಧಿಯಲ್ಲಿ ಕೆಲಸ ಮುಗಿಸುವುದು ಮಾಗಡಿಯ ಜನತೆಯ ಹಕ್ಕೊತ್ತಾಯವಾಗಿದೆ ಎಂದರು.
ನಿರ್ದೆಶಕರಾದ ಸೋಮಶೇಖರ್​, ಎಂ.ಆರ್​.ಮಂಜುನಾಥ್​, ಪುರಸಭೆ ಮಾಜಿ ಅಧ್ಯಕ್ಷರಾದ ರಮ್ಯಾ ನರಸಿಂಹಮೂರ್ತಿ, ಶಿವರುದ್ರಮ್ಮ ವಿಜಯ್​ ಕುಮಾರ್​, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಲ್ಕೆರೆ ಶಿವಣ್ಣ, ಶೈಲಜಾ, ಜಯಮ್ಮ, ಮಹಂತೇಶ್​, ರಾಜಣ್ಣ, ಗೋಪಾಲ್​, ಅಗ್ರೋ ಪುರುಷೋತ್ತಮ್​, ಚಂದ್ರಶೇಖರ್​, ಆನಂದ್​ ಇದ್ದರು.
ನೀಲಿನೆ ಪ್ರದರ್ಶನ
ಐತಿಹಾಸಿಕ ಸ್ಮಾರಕಗಳ ರಕ್ಷಣೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಬೇಡ. ಇತಿಹಾಸವನ್ನು ಉಳಿಸುವುದರ ಜತೆಗೆ ಸಂಚಾರಕ್ಕೆ ಅಡ್ಡಿಯಾಗದಂತೆ ಅಭಿವೃದ್ಧಿ ಪಡಿಸಲಾಗುವುದು. ಕೋಟೆ ಹಾಗೂ ಕಂದಕಗಳ ರಕ್ಷಣೆ ಮತ್ತು ಮೊದಲ ಹಂತದ ಅಭಿವೃದ್ಧಿ ಯೋಜನೆಗಳಿಗೆ ಪ್ರಾಚ್ಯವಸ್ತು ಇಲಾಖೆ ಹಾಗೂ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದಿಂದ ಈಗಾಗಲೇ ಅನುಮೋದನೆ ದೊರೆತಿದ್ದು, ಶ್ರೀದಲ್ಲೇ 20 ಅಡಿಯ ದೊಡ್ಡ ಫ್ಲೆಕ್ಸ್​ ಮುಖಾಂತರ ಯೋಜನೆಯ ನೆ ಮತ್ತು ನೀಲಿನೆಯನ್ನು ಪ್ರದರ್ಶಿಸಲಾಗುವುದು ಎಂದು ಅಶೋಕ್​ ತಿಳಿಸಿದರು.
ಕಂದಕ ಅಭಿವೃದ್ಧಿ
ಕೆಂಪೇಗೌಡರು ಕೋಟೆಯ ರಕ್ಷಣೆಗಾಗಿ ನಿರ್ಮಿಸಿದ್ದ ಕಂದಕಗಳ ತಾಂತ್ರಿಕ ಹಿನ್ನೆಲೆ ಹಾಗೂ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ 2ನೇ ಹಂತದಲ್ಲಿ ಕಂದಕಗಳ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು. ಬೆಂಗಳೂರು&ಸೋಮವಾರಪೇಟೆ ಮುಖ್ಯ ರಸ್ತೆ ಪೂರ್ಣಗೊಂಡ ಬಳಿಕ ಕೆಂಪೇಗೌಡರ ಬೃಹತ್​ ಪ್ರತಿಮೆ, ಆಕರ್ಷಕ ಉದ್ಯಾನವನ ಮತ್ತು ಸಾಲು ಮಂಟಪಗಳನ್ನು ನಿರ್ಮಿಸುವ ಮೂಲಕ ಕೋಟೆಗೆ ಐತಿಹಾಸಿಕ ಕಳೆಯನ್ನು ನೀಡಲು ಯೋಜಿಸಲಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net