ಗ್ರಾಮದ ಹನುಮಯ್ಯ ಹಳೇ ಮನೆ ಕೆಡವಿ ಹೊಸ ಕಟ್ಟಡ ನಿರ್ಮಿಸುತ್ತಿದ್ದರು. ಅದಕ್ಕಾಗಿ ಹಂಚಿಕುಪ್ಪೆ ಗ್ರಾಮ ಪಂಚಾಯಿತಿಯಿಂದ ನಿವೇಶನದ ಇ&ಖಾತೆ ಪಡೆದಿದ್ದರು. ಆದರೆ, ಹನುಮಯ್ಯ ಸಂಬಂಧಿ ಕಾಳೇಗೌಡ ಹಾಗೂ ಪುತ್ರ ಜಯರಾಮು, ಗ್ರಾಮದ ಗಂಗರಾಜು, ಕರಲುಮಂಗಲದ ವಿಶ್ವನಾಥ್ ಇತರರು ನ.12ರ ರಾತ್ರಿ ಕಟ್ಟಡವನ್ನು ಕೆಡವಿದ್ದಾರೆೆ. ಈ ವೇಳೆ ಗಲಾಟೆಯಾಗಿದ್ದು, ಪತ್ನಿ ಚಂದ್ರಕಲಾ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ವಿಶ್ವನಾಥ್ ದೋಚಿದ್ದಾನೆ. ಪುತ್ರ ರು ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಾಗಡಿ ಠಾಣೆಯಲ್ಲಿ ಹನುಮಯ್ಯ ದೂರು ನೀಡಿದ್ದಾರೆ.