ಪ್ರಜಾಪ್ರಭುತ್ವೇ ದೇಶದ ಬುನಾದಿ

ರಾಮನಗರದಲ್ಲಿ ನಡೆದ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಯುವಮತದಾರರಿಗೆ ಗುರುತಿನ ಚೀಟಿ ನೀಡಿದ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್
ರಾಮನಗರದಲ್ಲಿ ನಡೆದ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಯುವಮತದಾರರಿಗೆ ಗುರುತಿನ ಚೀಟಿ ನೀಡಿದ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಢಳಿತದಿಂದ ಮತದಾರರ ದಿನಾಚರಣೆ
  • ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್
  • ತಪ್ಪದೇ ಮತಚಲಾವಣೆಗೆ ಕರೆ
ರಾಮನಗರ: ದೇಶದ ಬುನಾದಿ ಪ್ರಜಾಪ್ರಭುತ್ವ. ಅದು ಬಲಿಷ್ಠವಾಗಬೇಕೆಂದರೆ ಪ್ರತಿಯೊಬ್ಬ ಅರ್ಹ ಮತದಾರರು ಚುನಾವಣೆಗಳಲ್ಲಿ ಮತ ಚಲಾಯಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಯಶವಂತ್​ ವಿ ಗುರುಕರ್​ ಕರೆ ನೀಡಿದರು.
ಗರದ ಜಿಲ್ಲಾ ಪಂಚಾಯತ್​ ಸಭಾಂಗಣದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಸ್ವೀಪ್​ ಸಮಿತಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮಕ್ಕೆ ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ಚಾಲನೆ ಕೊಡಿಸಿ ಮಾತನಾಡಿದರು.
ರಾಷ್ಟ್ರೀಯ ಮತದಾರರ ದಿನಾಚರಣೆ ಎಂಬುದು ಅತ್ಯಂತ ಪ್ರಮುಖವಾದ ಕಾರ್ಯಕ್ರಮ. ಅದರ ಮಹತ್ವವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು, ಚುನಾವಣಾ ಆಯೋಗ ಸ್ವತಂತ್ರ ಹಾಗೂ ಸ್ವಾಯತ್ತ ಸಂಸ್ಥೆಯಾಗಿದೆ. ಇದರ ಕೆಲಸವು ವಿಭಿನ್ನವಾಗಿರುತ್ತದೆ, ಚುನಾವಣಾ ಸಂದರ್ಭದಲ್ಲಿ ಆಯೋಗ ಹೊರಡಿಸುವ ಮಾರ್ಗಸೂಚಿಗಳು, ನೀತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಚುನಾವಣೆಗೆ ನಿಯೋಜಿತರಾದ ಅಧಿಕಾರಿ ಮತ್ತು ಸಿಬ್ಬಂದಿ ಮುಕ್ತ ಹಾಗೂ ಪಾರದರ್ಶಕವಾಗಿ ಚುನಾವಣಾ ಪ್ರಕ್ರಿಯೆ ನಡೆಸಿದರೆ ಚುನಾವಣೆಗಳು ಯಶಸ್ವಿಯಾಗುತ್ತವೆ.
ಬಿ ಎಲ್​ ಓಗಳು ಶೇಕಡ ನೂರರಷ್ಟು ಕೆಲಸವನ್ನು ವೃತ್ತಿಪರತೆಯಿಂದ ಮಾಡಿದರೆ ಜಿಲ್ಲಾ ಚುನಾವಣಾಧಿಕಾರಿಗೆ ಯಾವುದೇ ದೂರುಗಳು ಬರುವುದಿಲ್ಲ ಎಂದು ಹೇಳಿದರು. ಚುನಾವಣಾ ಆಯೋಗ ಕಾಲ ಕಾಲಕ್ಕೆ ಹೊರಡಿಸುವ ಕಾಯ್ದೆ ಕಾನೂನುಗಳನ್ನು ಸರಿಯಾಗಿ ಅರ್ಥೈಸಿಕೊಂಡು ಕೆಲಸ ಮಾಡಬೇಕು. ದೇಶ ಇರುವವರೆಗೂ ಚುನಾವಣಾ ಆಯೋಗ ಅಸ್ತಿತ್ವದಲ್ಲಿರುತ್ತದೆ, ಅದರ ಮಹತ್ವದ ಬಗ್ಗೆ ಅರಿವಿರಬೇಕು. ಚುನಾವಣೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಸಿಬ್ಬಂದಿಗೆ ಚುನಾವಣಾ ಆಯೋಗ ಸಾಕಷ್ಟು ಅಧಿಕಾರ ಹಾಗೂ ಅವಕಾಶಗಳನ್ನು ನೀಡುತ್ತದೆ ಅದನ್ನು ನಿರ್ಲಕ್ಷ್ಯ ಮಾಡದೆ ಶಿಸ್ತು ಹಾಗೂ ಶ್ರದ್ಧೆಯಿಂದ ಕೆಲಸ ಮಾಡಿದರೆ ದೇಶ ಹಾಗೂ ಸಮಾಜಕ್ಕೆ ಒಳಿತಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲೆಯಲ್ಲಿ ಇ-ರೋಲ್​ ಮ್ಯಾಪಿಂಗ್​ ಹಾಗೂ ಪ್ರೋಜಿನಿ ಮ್ಯಾಪಿಂಗ್​ ಕಾರ್ಯವನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಬಿಎಲ್​ಓಗಳ ಕಾರ್ಯ ಶ್ಲಾನೀಯ ಎಂದರು. ಕಾರ್ಯಕ್ರಮದಲ್ಲಿ ಭಾಷಣಕಾರರಾಗಿ ಆಗಮಿಸಿದ್ದ ಕನಕಪುರದ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ. ದೊಡ್ಡಬೋರಯ್ಯ ಮಾತನಾಡಿ, ಪ್ರಪಂಚದ ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಭಾರತ ಮಾದರಿಯಾಗಿದೆ. ಅದಕ್ಕೆ ಕಾರಣ ಇಲ್ಲಿನ ಮತದಾನ ಪ್ರಕ್ರಿಯೆ. ಇತರೆ ದೇಶಗಳು ಕೂಡ ಈ ಚುನಾವಣಾ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತವೆ. ಅದಕ್ಕೆ ನಮ್ಮ ಸಂವಿಧಾನ ರಚನಾಕಾರರೇ ಕಾರಣ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಮತಕ್ಕೂ ಅತ್ಯಂತ ಮಹತ್ವವಿರುತ್ತದೆ ಇದಕ್ಕೆ ರಾಜ್ಯದಲ್ಲಿ ಜರುಗಿದ 2004 ರ ವಿಧಾನಸಭಾ ಚುನಾವಣೆ ಒಂದು ಉತ್ತಮ ಉದಾಹರಣೆಯಾಗಿದೆ. ಅಂದು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎ. ಆರ್​. ಕೃಷ್ಣಮೂರ್ತಿ ಹಾಗೂ ಧ್ರುವನಾರಾಯಣ್​ ನಡುವೆ ಕೇವಲ ಒಂದೇ ಒಂದು ಮತ ನಿರ್ಣಾಯಕವಾಗಿತ್ತು. 40,752 ಮತಗಳನ್ನು ಧ್ರುವನಾರಾಯಣ ಅವರು ಪಡೆದರೆ, ಕೃಷ್ಣಮೂರ್ತಿ 40,751 ಮತ ಪಡೆದರು. ಅದೇ ರೀತಿ 2008ರ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸ್ಥಾನದ ಆಕಾಂಯಾಗಿದ್ದ ಸಿ.ಪಿ. ಜೋಶಿ ಕೇವಲ ಒಂದು ಮತದಿಂದ ಶಾಸಕರಾಗುವ ಅರ್ಹತೆ ಕಳೆದುಕೊಂಡರು.
ನಾವು ಮತ ಚಲಾಯಿಸಬೇಕು ಹಾಗೂ ನಮ್ಮ ಪರಿಸರದಲ್ಲಿರುವವರಿಗೆ ತಮ್ಮ ಹಕ್ಕು ಚಲಾಯಿಸುವಂತೆ ಜಾಗೃತಿ ಮೂಡಿಸಬೇಕು. ಚುನಾವಣಾ ಸಂದರ್ಭದಲ್ಲಿ ನಮ್ಮ ಮತದಾನದ ಅಸವನ್ನು ತೋರಿಸುವ ಮೂಲಕ ಶೇಕಡವಾರು ಮತಪ್ರಮಾಣದಲ್ಲಿ ಏರಿಕೆಯಾಗುವಂತೆ ನೋಡಿಕೊಳ್ಳಬೇಕು. ಆ ಮೂಲಕ ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿ ಮಾಡೋಣ ಎಂದು ಕರೆ ನೀಡಿದರು.
ಬಿಎಲ್​ಓ ಶಾರದಾ ಇದೇ ಸಂದರ್ಭದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಚುನಾವಣಾ ಸೇವೆಗಳಲ್ಲಿ ಇ-ರೋಲ್​ ಮ್ಯಾಪಿಂಗ್​ ಹಾಗೂ ಪ್ರೋಜಿನಿ ಮ್ಯಾಪಿಂಗ್​ ಕಾರ್ಯವನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಬಿಎಲ್​ಓ ಗಳನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಿ ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ&ಕಾಲೇಜು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ, ಸನ್ಮಾನಿಸಲಾಯಿತು.
ಜಿಲ್ಲಾಧಿಕಾರಿ ಯಶವಂತ್​ ವಿ. ಗುರುಕರ್​ ಇದೇ ಸಂದರ್ಭದಲ್ಲಿ ಹೊಸ ಮತದಾರರಿಗೆ ಎಪಿಕ್​ ಕಾರ್ಡ್​ಗಳನ್ನು ವಿತರಿಸಿದರು. ಡಿಸಿ ಆರ್​.ಚಂದ್ರಯ್ಯ, ಮತದಾರರ ಪ್ರತಿಜ್ಞಾವಿಧಿ ಬೋಧಿಸಿದರು. ಜಿ ಪಂ ಸಿಇಓ ಅನ್ಮೋಲ್​ ಜೈನ್​ ಇದ್ದರು. ಪ್ರಾಂಶುಪಾಲರ ಸಂದ ಅಧ್ಯಕ್ಷರಾದ ಶಿವಣ್ಣ ನಿರೂಪಿಸಿದರು. ಕನ್ನಡ ಮತ್ತು ಸಂಸತಿ ಇಲಾಖೆಯ ಸಿಬ್ಬಂದಿ ಮಧುಮತಿ ಪ್ರಾರ್ಥಿಸಿದರು. ಬ್ಯಾಡ್ರಳ್ಳಿ ಶಿವಕುಮಾರ್​ ಹಾಗೂ ತಂಡದವರು ಗೀತ ಗಾಯನ ನಡೆಸಿಕೊಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net