ಹೆಚ್ಚಿನ ಅನುದಾನಕ್ಕೆ ಸರ್ಕಾರಕ್ಕೆ ಬೇಡಿಕೆ

Demand to the government for additional funds
Demand to the government for additional funds
Published on
ರಾಮನಗರ: ನಗರದ ಎಲ್ಲ ವಾರ್ಡ್‌ಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಯಾಗಬೇಕಿದ್ದು, ಹೆಚ್ಚಿನ ಅನುದಾನಕ್ಕೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳು ನಮ್ಮ ಜಿಲ್ಲೆಯವರೇ ಆಗಿದ್ದು, ಅನುದಾನ ಬಿಡುಗಡೆ ಮಾಡುವ ಭರವಸೆ ಇದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ತಿಳಿಸಿದರು.
ರಾಮನಗರದ 27ನೇ ವಾರ್ಡ್‌ನಲ್ಲಿ ವಿವಿಧ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ವಿವೇಕಾನಂದನಗರ ಸೇರಿ ಎಲ್ಲ ವಾರ್ಡ್‌ನ ಜನರ ಬವಣೆ ಅರಿತು ಮುಖ್ಯಮಂತ್ರಿಗಳು ಅನುದಾನ ಬಿಡುಗಡೆ ಮಾಡುತ್ತಾರೆಂಬ ನಿರೀಕ್ಷೆ ಇದೆ. ಅನುದಾನ ಲಭ್ಯವಾದರೆ ಮೂಲಸೌಕರ್ಯಗಳನ್ನು ಪೂರೈಸಬಹುದು ಎಂದು ಅಭಿಪ್ರಾಯಪಟ್ಟರು.
ವಿವೇಕಾನಂದನಗರದ 27ನೇ ವಾರ್ಡ್ ಸದಸ್ಯೆ ಪವಿತ್ರಾ ಲಕ್ಷ್ಮೀಕಾಂತ್ ಸಮಸ್ಯೆ ಬಗ್ಗೆ ನಗರಸಭೆಗೆ ಒತ್ತಡ ಹೇರುತ್ತಿದ್ದರು. ಈ ಭಾಗ ದೊಡ್ಡ ಪ್ರದೇಶವಾಗಿದ್ದು, ಇಲ್ಲಿ ರಸ್ತೆ, ಯುಜಿಡಿ ಕಾಮಗಾರಿ ಆಗಬೇಕಾಗಿದೆ. ಈಗಾಗಲೇ ವಿವಿಧ ಯೋಜನೆಯಡಿ 3ರಿಂದ 4 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳು ಜಾರಿಯಲ್ಲಿವೆ. ನಗರಸಭೆಯ ಹಣಕಾಸಿನ ಇತಿಮಿತಿಯಲ್ಲಿ ಆದ್ಯತೆ ಮೇರೆಗೆ ಕೆಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
27ನೇ ವಾರ್ಡ್‌ನಲ್ಲಿ ಅಪ್ರೂವ್ಡ್ ಲೇಔಟ್‌ಗಳ ಪ್ರಮಾಣ ಕೇವಲ ಶೇ.25 ಇದ್ದು, ಉಳಿದೆಡೆ ರಸ್ತೆ, ಒಳಚರಂಡಿ ವ್ಯವಸ್ಥೆ ಇಲ್ಲದಿದ್ದರೂ ಅನೇಕರು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಹಿಂದೆ ಯಾರೋ ಮಾಡಿದ ತಪ್ಪಿಗೆ ನಾಗರಿಕರನ್ನು ಸಮಸ್ಯೆಗೆ ದೂಡುವುದು ಸರಿಯಲ್ಲ. ನಗರಸಭೆಯ ಹಣಕಾಸಿನ ಪರಿಸ್ಥಿತಿ ಆಧರಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕಿದೆ. ಈಗಾಗಲೇ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಗಳನ್ನು ನಗರಸಭೆಯ ನಿಧಿಯಿಂದ ಪೂರೈಸಲಾಗುತ್ತಿದೆ ಎಂದು ತಿಳಿಸಿದರು.
ಸದಸ್ಯರಾದ ಪವಿತ್ರಾ, ಪಾರ್ವತಮ್ಮ, ವಿಜಯಕುಮಾರಿ, ಅಜ್ಮತ್, ನಿಜಾಂ, ನರಸಿಂಹ, ಸೋಮಶೇಖರ್ ಮಣಿ, ನಾಗಮ್ಮ, ಸಮದ್, ಇಂಜಿನಿಯರ್‌ಗಳಾದ ವಿಶ್ವನಾಥ್, ನಿರ್ಮಲಾ, ಮಧು, ಪವಿತ್ರಾ, ಕವಿತಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net