ವಾಹನ ಡಿಕ್ಕಿ ಸಾರಂಗಕ್ಕೆ ಗಂಭೀರ ಗಾಯ

ಮಾಗಡಿಯ ಸೋಲೂರು ಸಮೀಪ ಅಪಘಾತಕ್ಕೆ ಒಳಗಾದ ಸಾರಂಗ. (20&03&ಮಾಗಡಿ&ಸಾರಂಗ)
ಮಾಗಡಿಯ ಸೋಲೂರು ಸಮೀಪ ಅಪಘಾತಕ್ಕೆ ಒಳಗಾದ ಸಾರಂಗ. (20&03&ಮಾಗಡಿ&ಸಾರಂಗ)
Published on
ಮಾಗಡಿ: ಸೋಲೂರು ಬಮುಲ್​ ಶೀತಲೀಕರಣ ಕೇಂದ್ರದ ಬಳಿ ಹಾದುಹೋಗಿರುವ ಬೆಂಗಳೂರು&-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗಿನ ಜಾವ ಅಪರಿಚಿತ ವಾಹನ ಡಿಕ್ಕಿಯಾಗಿ 8 ವರ್ಷದ ಗಂಡು ಸಾರಂಗ ತೀವ್ರ ಗಾಯಗೊಂಡಿದೆ.
ಹೆದ್ದಾರಿ ದಾಟುತ್ತಿದ್ದ ಸಾರಂಗಕ್ಕೆ ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದ ದೃಶ್ಯಕಂಡು ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ್ದರು. ಜನದಟ್ಟಣೆ ಕಂಡು ಭಯಗೊಂಡ ಸಾರಂಗ ಕುಂಟುತ್ತಲೇ ಸಮೀಪದ ಪೊದೆಯೊಳಗೆ ಓಡಿ ಹೋಯಿತು.
ವಲಯ ಅರಣ್ಯ ಅಧಿಕಾರಿ ಚೈತ್ರಾ ಸಿಬ್ಬಂದಿಯೊಂದಿಗೆ ಸ್ಥಳ ಪರಿಶೀಲಿಸಿದರು. ಸಾರಂಗಕ್ಕೆ ವಾಹನ ಡಿಕ್ಕಿಯಾಗಿರುವುದು ದೃಢಪಟ್ಟಿದೆ. ಜನರನ್ನು ಕಂಡು ಓಡಿ ಹೋಗಿದೆ. ಅರಣ್ಯ ಇಲಾಖೆಯ ತಂಡವು ಸಾರಂಗವನ್ನು ಪತ್ತೆಹಚ್ಚಲು ಕಾರ್ಯಾಚರಣೆ ಕೈಗೊಂಡಿದೆ. ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಚೈತ್ರಾ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net