ಬಿಡದಿ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಬಿಡದಿ ಪುರಸಭೆ ಹಾಲಿ ಸದಸ್ಯ ರಾಮಚಂದ್ರಪ್ಪ(78) ಅವರು ಭಾನುವಾರ ನಿಧನರಾದ ಹಿನ್ನೆಲೆಯಲ್ಲಿ ಸೋಮವಾರ ಇಟ್ಟಮಡು ಗ್ರಾಮದ ನಿವಾಸಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನಿಕಟವರ್ತಿಯಾಗಿದ್ದ ರಾಮಚಂದ್ರಪ್ಪ ಸಮಾಜ ಸೇವೆ ಹಾಗೂ ಜನಪರ ಕಾಳಜಿ ಹೊಂದಿದ್ದರು. ಅವರ ನಿಧನ ದು@ಖ ತಂದಿದ್ದು, ಅವರ ಆತ್ಮಕ್ಕೆ ದೇವರು ಚಿರಶಾಂತಿ ದಯಪಾಲಿಸಲಿ ಹಾಗೂ ಕುಟುಂಬಸ್ಥರಿಗೆ, ಬೆಂಬಲಿಗರಿಗೆ ದು@ಖ ಭರಿಸುವ ಶಕ್ತಿ ನೀಡಲಿ ಎಂದು ಡಿಸಿಎಂ ಪ್ರಾರ್ಥಿಸಿದರು.
ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಜಿಬಿಡಿಎ ಅಧ್ಯ ಗಾಣಕಲ್ ನಟರಾಜ್, ಕೆಪಿಸಿಸಿ ಸದಸ್ಯ ಬ್ಯಾಟಪ್ಪ, ಜಿಲ್ಲಾ ಕಾಂಗ್ರೆಸ್ ಉಪಾಧ್ಯ ಎಲ್.ಚಂದ್ರಶೇಖರ್, ಮುಖಂಡರಾದ ಸತೀಶ್ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದರು. ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಿತು.