ಗರ್ಭಿಣಿ ಕೊಂದವರ ಶಿಕ್ಷಿಸಿ ದಲಿತ ಸಂಘಟನೆಗಳ ಆಗ್ರಹ

ಧಾರವಾಡದಲ್ಲಿ ಗರ್ಭಿಣಿಕೊಂದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿಗೆ ಮನವಿಸಲ್ಲಿಸಲಾಯಿತು.
ಧಾರವಾಡದಲ್ಲಿ ಗರ್ಭಿಣಿಕೊಂದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿಗೆ ಮನವಿಸಲ್ಲಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಧಾರವಾಡದ ಇನಾಂ ವೀರಾಪುರದಲ್ಲಿ ಘಟನೆ
  • ಅಂರ್ತಜಾತಿ ವಿವಾಹಕ್ಕೆ ವಿರೋಧ
  • ಗರ್ಭಿಣಿ ಮಗಳನ್ನು ಕೊಂದರು
  • ಕಠಿಣ ಕ್ರಮಕ್ಕೆ ದಲಿತ ಸಂಘಟನೆಗಳ ಆಗ್ರಹ
ರಾಮನಗರ: ಅಂರ್ತಜಾತಿ ವಿವಾಹವಾದ ಕಾರಣಕ್ಕೆ ಗರ್ಭಿಣಿಯನ್ನೇ ಕೊಲೆ ಮಾಡಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಸಂಟನೆಗಳ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಯಶವಂತ್​ ವಿ ಗುರುಕರ್​ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಸಮಾಜ ಎಷ್ಟೇ ಮುಂದುವರಿದಿದ್ದರೂ, ಇನ್ನೂ ಜಾತಿ ವ್ಯವಸ್ಥೆ ದೂರಾಗಿಲ್ಲ. ಒಂದೇ ಗ್ರಾಮದ ಅನ್ಯ ಜಾತಿ ಯುವಕ&ಯುವತಿ ಪ್ರೀತಿಸಿ ಮದುವೆ ಆದರು ಎನ್ನುವ ಕಾರಣಕ್ಕೆ ಸವರ್ಣೀಯ ವರ್ಗಕ್ಕೆ ಸೇರಿದ ಯುವತಿ ಕೆಡೆಯವರು ತನ್ನ ಮಗಳು ಎನ್ನುವ ಕನಿಕರವನ್ನೂ ತೋರದೆ ಧಾರವಾಡ ಜಿಲ್ಲೆಯ ಇನಾಂ ವೀರಾಪುರ ಗ್ರಾಮದಲ್ಲಿ ಹತ್ಯೆ ಮಾಡಿದ್ದಾರೆ. ಇಷ್ಟೇ ಅಲ್ಲದೆ, ದಲಿತ ಸಮೂದಾಯಕ್ಕೆ ಸೇರಿದ ಯುವಕನ ತಂದೆ ತಾಯಿಯ ಮೇಲೂ ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ.
ಜಾತಿ ವ್ಯವಸ್ಥೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕಾನೂನುಗಳು ದೇಶದಲ್ಲಿ ಜಾರಿಯಲ್ಲಿದ್ದರೂ, ಇಂತಹ ಅಮಾನವೀಯ ಪ್ರಕರಣಗಳಿಗೆ ಕಡಿವಾಣ ಬಿದ್ದಿಲ್ಲ. ಇಂತಹ ಘೋರ ವ್ಯವಸ್ಥೆ ವಿರುದ್ಧ ಹೋರಾಟ ನಡೆಸಿ ನ್ಯಾಯ ಪಡೆಯಲಾಗದ ಪರಿಸ್ಥಿತಿ ಸಮಾಜದಲ್ಲಿ ಇನ್ನೂ ಬೇರೂರಿದೆ.
ಇನಾಂ ವೀರಾಪುರದಲ್ಲಿ ನಡೆದ ಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು, ಗರ್ಭಿಣಿ ಸಾವಿಗೆ ಕಾರಣರಾದವರು ಮತ್ತು ಈಕೆಯ ಪತಿಯ ಕುಟಂಬದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕಾನೂನ ಕ್ರಮ ಕೈಗೊಳ್ಳುವ ಜತೆಗೆ, ಇಡೀ ಪ್ರಕರಣ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಬೇಕು. ಇಂತಹ ಪ್ರಕರಣದಲ್ಲಿ ನೀಡಲಾಗುವ ಮರಣದಂಡನಗೆ ಶಿೆ
ಮೃತಪಟ್ಟ ಗರ್ಭಿಣಿ ಹೆಸರಿನಲ್ಲೇ ಜಾರಿಗೆ ತರಬೇಕು ಎಂದು ಮುಖಂಡರು ಮನನಿ ಪತ್ರದಲ್ಲಿ ತಿಳಿಸಿದ್ದಾರೆ.
ಈ ವೇಳೆ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಕುಮಾರಸ್ವಾಮಿ, ಮುಖಂಡರಾದ ಹರೀಶ್​ ಬಾಲು, ಎಸ್​.ವೆಂಕಟೇಶ್​, ಗವಿಯಯ್ಯ, ಕಿರಣ್​.ಕೆ.ಎಲ್​, ಶಿವಶಂಕರ್​, ನವೀನ್​ ಸಾಕ್ಯ, ಕಿರಣ್​ ಸಾಗರ್​, ಕುಂಬಾಪುರ ಬಾಬು, ಪರಮೇಶ್​, ನಂಜುಂಡಯ್ಯ, ವಿನೋದ್​, ಸುರೇಶ್​, ಸಿದ್ದರಾಜು ಮುಂತಾದವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net