ರೈತರ ಬದುಕಿಗೆ ಹೈನುಗಾರಿಕೆ ಆಸರೆ

ಮಾಗಡಿ ತಾಲೂಕಿನ ಜುಟ್ನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂದ ಹಾಲು ಉತ್ಪಾದಕರಿಗೆ ಉಚಿತವಾಗಿ ಹಾಲಿನ ಸ್ಟೀಲ್​ ಕ್ಯಾನ್​ಗಳನ್ನು ಜುಟ್ನಹಳ್ಳಿ ಡೇರಿ ಅಧ್ಯಕ್ಷ ಜೆಪಿ.ಚಂದ್ರೇಗೌಡ ವಿತರಿಸಿದರು. ಸಂದ ಉಪಾಧ್ಯಕ್ಷ ರಂಗಸ್ವಾಮಯ್ಯ, ನಿರ್ದೇಶಕರಾದ ಜಯಣ್ಣ, ಲೀಲಾವತಿ, ಸುಮಿತ್ರಾ, ಸರೋಜಮ್ಮ, ಹೊಂಬಮ್ಮ, ಕುಮಾರು, ಕಾರ್ಯದರ್ಶಿ ರವಿಕುಮಾರ್​, ಗಂಗಾಧರ್​ ಇತರರು ಇದ್ದರು.
ಮಾಗಡಿ ತಾಲೂಕಿನ ಜುಟ್ನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂದ ಹಾಲು ಉತ್ಪಾದಕರಿಗೆ ಉಚಿತವಾಗಿ ಹಾಲಿನ ಸ್ಟೀಲ್​ ಕ್ಯಾನ್​ಗಳನ್ನು ಜುಟ್ನಹಳ್ಳಿ ಡೇರಿ ಅಧ್ಯಕ್ಷ ಜೆಪಿ.ಚಂದ್ರೇಗೌಡ ವಿತರಿಸಿದರು. ಸಂದ ಉಪಾಧ್ಯಕ್ಷ ರಂಗಸ್ವಾಮಯ್ಯ, ನಿರ್ದೇಶಕರಾದ ಜಯಣ್ಣ, ಲೀಲಾವತಿ, ಸುಮಿತ್ರಾ, ಸರೋಜಮ್ಮ, ಹೊಂಬಮ್ಮ, ಕುಮಾರು, ಕಾರ್ಯದರ್ಶಿ ರವಿಕುಮಾರ್​, ಗಂಗಾಧರ್​ ಇತರರು ಇದ್ದರು.
Published on
ಮಾಗಡಿ: ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ಕೇವಲ ಉಪಕಸುಬಾಗಿ ಉಳಿಯದೆ, ಅದೊಂದು ಉದ್ಯಮವಾಗಿ ಬೆಳೆಯುತ್ತಿದೆ. ರೈತರ ಆರ್ಥಿಕ ಭದ್ರತೆಗೆ ದೊಡ್ಡ ಸಹಕಾರಿಯಾಗಿದೆ ಎಂದು ಜುಟ್ನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂದ ಅಧ್ಯಕ್ಷ ಜೆಪಿ.ಚಂದ್ರೇಗೌಡ ಹೇಳಿದರು.
ತಾಲೂಕಿನ ಜುಟ್ನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂದ 30 ಮಂದಿ ಹಾಲು ಉತ್ಪಾದಕರಿಗೆ ಉಚಿತವಾಗಿ ಹಾಲಿನ ಸ್ಟೀಲ್​ ಕ್ಯಾನ್​ಗಳನ್ನು ವಿತರಿಸಿ ಮಾತನಾಡಿದ ಅವರು, ರೈತರು ಸಂಪೂರ್ಣವಾಗಿ ಹೈನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿರುವುದರಿಂದ ಹಾಲಿನ ಉತ್ಪಾದನೆಯಲ್ಲಿ ಗಣನೀಯ ಏರಿಕೆಯಾಗಿದೆ. ಇದಕ್ಕೆ ಪೂರಕವಾಗಿ ಡೇರಿ ಹಾಗೂ ಬೆಂಗಳೂರು ಹಾಲು ಒಕ್ಕೂಟದಿಂದ ರೈತರಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ತಲುಪಿಸಲಾಗುತ್ತಿದೆ ಎಂದರು.
ಕಳೆದ 20 ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಡೇರಿಯಲ್ಲಿ ದಿನನಿತ್ಯ 250 ಲೀಟರ್​ ಹಾಲು ಸಂಗ್ರಹವಾಗುತ್ತಿದ್ದು, ಶ್ರೀದಲ್ಲೇ ಸ್ವಂತ ಕಟ್ಟಡ ನಿರ್ಮಿಸಲು ಕ್ರಮಕೈಗೊಳ್ಳಲಾಗಿದೆ. ಹಾಲು ಉತ್ಪಾದಕರ ಮಕ್ಕಳ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸಲು ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ತಿಳಿಸಿದರು.
ಹಾಲು ಉತ್ಪಾದಕರನ್ನು ಸ್ಥಳಿಯವಾಗಿ ಮತ್ತಷ್ಟು ಪೋತ್ಸಾಹಿಸುವ ನಿಟ್ಟಿನಲ್ಲಿ ಗುಣಮಟ್ಟದ ಸ್ಟೀಲ್​ ಹಾಲಿನ ಕ್ಯಾನ್​ ಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಉತ್ಪಾದಕರಿಗೆ ಅವಶ್ಯಕತೆಗೆ ತಕ್ಕಂತೆ ವಸ್ತುಗಳ ವಿತರಣೆಗೆ ಮುಂದಾಗುತ್ತೇನೆ ಎಂದರು.
ಕೆಂಪೇಗೌಡ ರೈತ ಸಂಟನೆಯ ಯುವ ರಾಜ್ಯ ಅಧ್ಯಕ್ಷ ಆರ್​.ದಿನೇಶ್​ ಮಾತನಾಡಿ, ಮಳೆಯಿಲ್ಲದೆ, ಬೆಳೆಯೂ ಇಲ್ಲದೆ ಕುಡಿಯುವ ನೀರಿಗೂ ತೀವ್ರ ಅಭಾವ ಎದುರಾಗಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಪಶು ಆಹಾರದ ಬೆಲೆ ಗಗನಕ್ಕೇರಿದ್ದು, ದನಕರುಗಳನ್ನು ಸಾಕುವುದು ರೈತರಿಗೆ ಶ್ರಮದಾಯಕವಾಗಿದೆ. ನೆರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ತೀರಾ ಕಡಿಮೆಯಿದೆ. ಆದ್ದರಿಂದ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ಡೇರಿ ಅಧ್ಯಕ್ಷರಾದ ಡಿ.ಕೆ. ಸುರೇಶ್​ ಸಹೋದರರು ತಕ್ಷಣವೇ ಹಾಲಿನ ದರ ಏರಿಕೆ ಮಾಡಲು ಮುಂದಾಗಬೇಕು. ಇಲ್ಲವಾದಲ್ಲಿ ರೈತರು ಹೈನುಗಾರಿಕೆಯಿಂದ ವಿಮುಖರಾಗುವ ಪರಿಸ್ಥಿತಿ ನಿರ್ಮಾಣವಾಗಿ, ಮುಂಬರುವ ದಿನಗಳಲ್ಲಿ ತೀವ್ರ ಹಾಲಿನ ಅಭಾವ ಸೃಷ್ಟಿಯಾಗಲಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net