ಕನಕಪುರ ತಾಲೂಕಿನ ಶಿವನಹಳ್ಳಿ ಸಮೀಪದ ಬಮುಲ್ ಮೆಗಾ ಡೇರಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಗಳ ಸದಸ್ಯರು ಮತ್ತು ಸಿಬ್ಬಂದಿ ಮಕ್ಕಳಿಗೆ ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಪ್ರತಿಭಾ ಪುರಸ್ಕಾರದ ಚೆಕ್ಗಳನ್ನು ವಿತರಿಸಿದರು. ಬಮುಲ್ ಉಪಾಧ್ಯಕ್ಷ ರಾಜಣ್ಣ, ಮಾಜಿ ಅಧ್ಯಕ್ಷರಾದ ಪಿ.ನಾಗರಾಜು, ಆರ್.ಕೆ.ರಮೇಶ್, ಮಾಜಿ ಉಪಾಧ್ಯಕ್ಷ ಮಂಜುನಾಥ್, ಹಿರಿಯ ನಿರ್ದೇಶಕರಾದ ಭೈರೇಗೌಡ, ಲಿಂಗೇಶ್ಕುಮಾರ್, ಎಚ್.ಎಸ್.ಹರೀಶ್ಕುಮಾರ್, ಕೃಷ್ಣಯ್ಯ, ಸತೀಶ್ಗೌಡ ಇದ್ದರು.
Published on:
Copied
Follow Us
ಕನಕಪುರ:ರೈತರು ಕೃಷಿಗಿಂತ ಹೈನುಗಾರಿಕೆಯನ್ನೇ ಹೆಚ್ಚಾಗಿ ಪೋತ್ಸಾಹಿಸುತ್ತಿದ್ದು, ಸತತವಾಗಿ ಕಂಗೆಟ್ಟಿದ್ದ ರೈತಾಪಿ ವರ್ಗಕ್ಕೆ ಸ್ವಾವಲಂಬಿ ಬದುಕು ನಡೆಸಲು ಸಹಕಾರಿಯಾಗಿದೆ ಎಂದು ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದರು.
ಶಿವನಹಳ್ಳಿ ಸಮೀಪದ ಬಮುಲ್ ಮೆಗಾ ಡೇರಿಯಲ್ಲಿ ಗುರುವಾರ ಹಾಲು ಉತ್ಪಾದಕರ ಸಹಕಾರ ಸಂಗಳ ಸದಸ್ಯರು ಮತ್ತು ಸಿಬ್ಬಂದಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರದ ಚೆಕ್ ಮತ್ತು ಹೊರಗುತ್ತಿಗೆ ಕಾರ್ಮಿಕರಿಗೆ ಉಡುಗೊರೆ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರಿಗೆ ಲಾಭ ದೊರಕಿಸಿಕೊಡುವ ಉದ್ದೇಶದಿಂದ ನಂದಿನಿ ಉತ್ಪನ್ನಗಳಿಗೆ ವಿಶೇಷ ಮರುಕಟ್ಟೆ ವಿಸ್ತರಣೆ, ಆಡಳಿತದಲ್ಲಿ ಅಮೂಲ್ಯಾಗ್ರ ಬದಲಾವಣೆ ಮೂಲಕ ರೈತರಿಗೆ ಶಕ್ತಿ ತುಂಬಲಾಗುತ್ತಿದೆ, ಬಡವರ ಕಾಮಧೇನು ಆಗಿರುವ ಹೈನುಗಾರಿಕೆಯನ್ನೇ ಹೆಚ್ಚು ಜನರು ಅವಲಂಭಿಸಿದ್ದು, ಇದರಿಂದ ಲಾಂತರ ಜನರು ಜೀವನ ಮಾಡುತ್ತಿದ್ದಾರೆ ಎಂದರು.
ಹೈನುಗಾರಿಕೆ ಫಲಪ್ರದವಾದ ಉದ್ದಿಮೆಯಾಗಿದೆ. ಈ ಉದ್ಯಮದಲ್ಲಿ ಸದಸ್ಯರಾಗಿರುವ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಪೋತ್ಸಾಹಿಸುವ ನಿಟ್ಟಿನಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪೋತ್ಸಾಹ ಧನ ನೀಡಲಾಗುತ್ತಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಉನ್ನತ ವ್ಯಾಸಂಗದವರೆಗೂ ಪೋತ್ಸಾಹ ನೀಡಲಾಗುತ್ತದೆ ಎಂದು ಹೇಳಿದರು. ಜಿಲ್ಲೆಯ ಹಾಲು ಉತ್ಪಾದನೆ ರಕ್ರಾಂತಿ ಉಂಟು ಮಾಡಿದೆ, ಬೆಂಗಳೂರು ದಣ ಜಿಲ್ಲೆಯಲ್ಲಿ ಮಿಲ್ಕ್ ಹಾಗೂ ಸಿಲ್ಕ್ ಹೆಸರು ಗಳಿಸಿದೆ, ಗ್ರಾಮೀಣ ರೈತರು ಹಾಲು ಉತ್ಪಾದನೆಯನ್ನು ದ್ವಿಗುಣಗೊಳಿಸುವ ಮೂಲಕ ಆರ್ಥಿಕವಾಗಿ ಬಲಿಷ್ಠ ಬದುಕು ಸಾಗಿಸುತ್ತಿದ್ದಾರೆ ಎಂದು ತಿಳಿಸಿದರು.
ತಾಲೂಕಿನ ಹಾಲು ಉತ್ಪಾದಕರ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಚೆಕ್ ವಿತರಿಸಲಾಯಿತು, ಕಾರ್ಮಿಕರಿಗೆ ಗಿಫ್ಟ್ ನೀಡಿ ಸನ್ಮಾನಿಸಲಾಯಿತು. ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಸುರೇಶ್, ಆರ್.ಇ.ಎಸ್ ಅಧ್ಯಕ್ಷ ಎಚ್.ಕೆ.ಶ್ರೀಕಂಠು, ಜಿ.ಪಂ ಮಾಜಿ ಅಧ್ಯಕ್ಷ ಬಸಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಎನ್.ದಿಲೀಪ್, ಜೆ.ಸಿ.ಬಿ ಅಶೋಕ್, ಬಮುಲ್ ಮಾಜಿ ಅಧ್ಯಕ್ಷ ರಾಜ್ಕುಮಾರ್ ಇದ್ದರು.
ಸಹಕಾರ ೇತ್ರದಿಂದಲೇ ಡೇರಿ ನಿರ್ಮಾಣ
ಶಿವನಹಳ್ಳಿ ಬಳಿ ಮೆಗಾ ಡೇರಿಯನ್ನು 1000 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸರ್ಕಾರದ ಯಾವುದೇ ಅನುದಾನವಿಲ್ಲದೆ ರೈತರಿಗೆ ಲಾಭ ದೊರಕಿಸಿಕೊಡಲು ಸಹಕಾರ ೇತ್ರದಿಂದಲೇ ಈ ಡೇರಿ ನಿರ್ಮಾಣ ಮಾಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ರವಿ ಹೇಳಿದರು. ಕರೋನಾ ಸಮಯದಲ್ಲಿ ಪೋಲಾದ ಲಾಂತರ ಲೀಟರ್ ಹಾಲನ್ನು ಶೇಖರಣೆ ಮಾಡಿ, ಜತೆಗೆ ಮಾರಾಟವಾಗದೆ ಇದ್ದ ಹಾಲನ್ನು ಜನರಿಗೆ ಉಚಿತವಾಗಿ ಆ ಸಮಯದಲ್ಲಿ ನೀಡುವ ಮೂಲಕ ನಷ್ಟದಲ್ಲಿದ್ದ ಡೇರಿಯನ್ನು ಡಿ.ಕೆ.ಸುರೇಶ್ ಅಧ್ಯಕ್ಷರಾದ ನಂತರ 20 ಕೋಟಿಯಷ್ಟು ಲಾಭ ಗಳಿಸಿದೆ, ನಷ್ಟದಲ್ಲಿದ್ದ 15 ಕೋಟಿ ರೂಪಾಯಿ ಸರಿದೂಗಿಸಲಾಗಿದೆ ಎಂದರು.