ಆಟೋ ಡಿಕ್ಕಿಯಾಗಿ ಸೈಕಲ್​ ಸವಾರ ಸಾವು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಕನಕಪುರ: ನಗರ ಹೊರವಲಯದ ಮಹಾರಾಜರ ಕಟ್ಟೆ ಸಮೀಪ ಆಟೋ ಡಿಕ್ಕಿಯಾಗಿ ಸೈಕಲ್​ ಸವಾರ, ಮಹಾರಾಜರ ಕಟ್ಟೆಯ ತಿಮ್ಮಯ್ಯ(65) ಮೃತಪಟ್ಟಿದ್ದು, ಆಟೋ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸೋಮವಾರ ಬೆಳಗ್ಗೆ ತಿಮ್ಮಯ್ಯ ಅವರು ಸೈಕಲ್​ನಲ್ಲಿ ನಗರಕ್ಕೆ ಬರುತ್ತಿದ್ದ ವೇಳೆ ಸಾತನೂರು ಕಡೆಯಿಂದ ಬಂದ ಆಟೋ ಡಿಕ್ಕಿಯಾಗಿ, ತಲೆ, ಕಾಲಿಗೆ ತೀವ್ರ ಗಾಯವಾಗಿದೆ. ಆಟೋ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರನ್ನೂ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ತಿಮ್ಮಯ್ಯ ಅವರನ್ನು ಬೆಂಗಳೂರಿನ ದಯಾನಂದ್​ ಸಾಗರ್​ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಸಂಚಾರ ಪೊಲೀಸ್​ ಠಾಣೆ ಸಬ್​ ಇನ್​ಸ್ಪೆಕ್ಟರ್​ ಪಾಂಡು ಹಾಗೂ ಸಿಬ್ಬಂದಿ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net