ರಣಹದ್ದು ಸಂತತಿ ಉಳಿವಿಗೆ ಸೈಕಲ್ ಜಾಥಾ!

ಉದ್ದ ಕೊಕ್ಕಿನ ರಣಹದ್ದು
ಉದ್ದ ಕೊಕ್ಕಿನ ರಣಹದ್ದು
Published on

ಪ್ರಮುಖ ಮುಖ್ಯಾಂಶಗಳು

  • ಬನ್ನೇರುಘಟ್ಟ ಉದ್ಯಾನದಲ್ಲಿನ ಸಂತಾನೋತ್ಪತ್ತಿ ಕೇಂದ್ರ ಕಾರ್ಯಾರಂಭಕ್ಕೆ ಒತ್ತಾಯ
  • 6 ವರ್ಷ ಕಳೆದರೂ ಕೇಂದ್ರ ಆರಂಭಕ್ಕೆ ಅಧಿಕಾರಿಗಳ ನಿರಾಸಕ್ತಿ
ರಾಮನಗರ
ಅಳಿವಿನಂಚಿನಲ್ಲಿರುವ ಉದ್ದ ಕೊಕ್ಕಿನ ರಣಹದ್ದುಗಳ ಸಂತತಿ ಅಭಿವೃದ್ಧಿಗಾಗಿ ಬನ್ನೇರುಘಟ್ಟ ರಾಷ್ಟಿçÃಯ ಉದ್ಯಾನದಲ್ಲಿ ನಿರ್ಮಾಣಗೊಂಡಿರುವ ಸಂತಾನೋತ್ಪತ್ತಿ ಕೇಂದ್ರ ಕಾರ್ಯಾರಂಭಕ್ಕೆ ಒತ್ತಾಯಿಸಿ ಸೈಕಲ್ ಜಾಥಾ ನಡೆಸಲು ಪರಿಸರ ಪ್ರಿಯರು ಮುಂದಾಗಿದ್ದಾರೆ.
ಈಗಾಗಲೇ ಕೇವಲ ಬೆರಳೆಣಿಕೆ ಸಂಖ್ಯೆಗೆ ಇಳಿದಿರುವ ಉದ್ದ ಕೊಕ್ಕಿನ ರಣಹದ್ದುಗಳ ಸಂತತಿ ಅಭಿವೃದ್ಧಿಗಾಗಿಯೇ ರಾಮನಗರದಲ್ಲಿಯೇ ನಿರ್ಮಾಣವಾಗಬೇಕಿದ್ದ, ಸಂತಾನೋತ್ಪತ್ತಿ ಕೇಂದ್ರವನ್ನು, ವೈದÀ್ಯರು, ಸಿಬ್ಬಂದಿ ಕೊರತೆ ಕಾರಣಗಳನ್ನು ನೀಡಿ ಬನ್ನೇರುಘಟ್ಟಕ್ಕೆ ಸ್ಥಳಾಂತರ ಮಾಡಲಾಗಿತ್ತು. ಆದರೆ, ಈವರೆಗೂ ಕೇಂದ್ರ ಕಾರ್ಯಾರಂಭ ಮಾಡದಿರುವ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಪರಿಸರ ಪ್ರಿಯರು ಬನ್ನೇರುಘಟ್ಟದಿಂದ ರಾಮನಗರಕ್ಕೆ ಸೈಕಲ್ ಜಾಥಾ ಹಮ್ಮಿಕೊಳ್ಳಲು ಮುಂದಾಗಿದ್ದಾರೆ. ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ಹಾಗೂ ಪರಿಸರ ಪ್ರಿಯರು ಇದರಲ್ಲಿ ಪಾಲ್ಗೊಳ್ಳಲಿದ್ದು, ಅತಿ ಶೀಘ್ರದಲ್ಲಿಯೇ ಜಾಥಾ ನಡೆಯಲಿದೆ.

ವರ್ಷಗಳು ಕಳೆಯುತ್ತಿವೆ...

ಪರಿಸರ ರಕ್ಷಕರೂ ಆಗಿರುವ ಉದ್ದ ಕೊಕ್ಕಿನ ರಣಹದ್ದುಗಳ ಸಂತತಿ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಇವುಗಳ ಸಂಖ್ಯೆ ಹೆಚ್ಚಳಕ್ಕೆ ರಾಮನಗರದ ರಾಮದೇವರ ಬೆಟ್ಟದಲ್ಲಿ ರಣಹದ್ದುಗಳ ಸಂತಾನೋತ್ಪತ್ತಿ ಕೇಂದ್ರವನ್ನು ಆರಂಭಿಸುವ ಸಂಬAಧ 2020ರ ಮಾರ್ಚ್ ನಲ್ಲಿ ಬಜೆಟ್ ಮಂಡಿಸಿದ್ದ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 2 ಕೋಟಿ ರೂ.ಗಳನ್ನು ಘೋಷಣೆ ಮಾಡಿದ್ದರು. ಆದರೆ, ರಾಮನಗರದಲ್ಲಿ ಆರಂಭಗೊಳ್ಳಬೇಕಿದ್ದ ಕೇಂದ್ರವನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರ ಮಾಡಿ ಅಲ್ಲಿಯೇ ಅಭಿವೃದ್ಧಿ ಕೇಂದ್ರ ನಿರ್ಮಾಣವೂ ಆಗಿದೆ. ಆದರೆ ಕಾರ್ಯಾರಂಭ ಇನ್ನೂ ಆಗಿಲ್ಲ.

ಅನುಮತಿ ಸಿಕ್ಕಿದೆಯೇ?

ಬ್ರೀಡಿಂಗ್ ಕೇಂದ್ರ ಸ್ಥಾಪನೆ ಮಾಡಬೇಕಾದರೆ ಒಂದಿಷ್ಟು ಕಟ್ಟು ನಿಯಮಗಳನ್ನು ಪಾಲನೆ ಮಾಡಲೇಬೇಕು. ಜೂ ಅಥಾರಿಟಿ ಆಫ್ ಇಂಡಿಯಾ ಮತ್ತು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (ಬಿಎನ್‌ಎಚ್‌ಎಸ್) ಈ ನಿಯಮಗಳನ್ನು ರೂಪಿಸಿದೆ. ಇದರಂತೆ ಇದರಂತೆ ರಣಹದ್ದು ಸಂತಾನೋತ್ಪತ್ತಿ ಕೇಂದ್ರ ಸ್ಥಾಪನೆ ಮಾಡಬೇಕಾದರೆ ಬ್ರೀಡಿಂಗ್ ಕೇಂದ್ರ ಪ್ರಾಣಿ ಸಂಗ್ರಹಾಲಯದ ಒಳಗೆ ಅಥವಾ ಅದರಿಂದ 5 ಕಿ.ಮೀ. ವ್ಯಾಪ್ತಿಯಿಂದ ದೂರವೇ ಇರಬೇಕು. ಇಲ್ಲವಾದರೆ ಕಾಡು ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಬರುವ ರೋಗಗಳಿಗೆ ಅತಿ ಸುಲಭವಾಗಿ ಬ್ರೀಡಿಂಗ್ ಕೇಂದ್ರದ ರಣಹದ್ದುಗಳು ತುತ್ತಾಗುತ್ತವೆ ಎನ್ನುವ ಆತಂಕ ಇದೆ. ಇದರ ಹೊರತಾಗಿಯೂ ಬನ್ನೇರುಘಟ್ಟದಲ್ಲಿಯೇ ಸಂತಾನೋತ್ಪತ್ತಿ ಕೇಂದ್ರ ನಿರ್ಮಾಣವಾಗಿದೆ, ಇದರ ಜತೆಗೆ, ರಾಷ್ಟಿçÃಯ ಉದ್ಯಾನದಲ್ಲಿ ಬ್ರೀಡಿಂಗ್ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಒಂದರ ತೀರ್ಪಿನಿಂತೆ ರಾಷ್ಟಿçÃಯ ವನ್ಯಜೀವಿ ಮಂಡಳಿಯಲ್ಲಿ ಅನುಮತಿ ಪಡೆದುಕೊಳ್ಳಬೇಕಿದೆ. ಇದಿಲ್ಲದೆ, ಸಂತಾನೋತ್ಪತ್ತಿ ಕೇಂದ್ರ ಕಾರ್ಯಾರಂಭ ಮಾಡುವಂತಿಲ್ಲ. ಈ ಸಂಬAಧ ಬನ್ನೇರುಘಟ್ಟ ರಾಷ್ಟಿçÃಯ ಉದ್ಯಾನವನದ ಅಧಿಕಾರಿಗಳು ರಾಜ್ಯ ಅರಣ್ಯ ಇಲಾಖೆಗೆ ಈ ಹಿಂದೆಯೇ ಪತ್ರ ಬರೆದಿದ್ದಾರೆ. ಆದರೆ, ಇದು ಏನಾಗಿದೆ ಎನ್ನುವುದು ಮಾತ್ರ ಯಕ್ಷ ಪ್ರಶ್ನೆ ಆಗಿದೆ.

ಏನಿದು ಯೋಜನೆ?

ರಣಹದ್ದು ಸಂತಾನೋತ್ಪತ್ತಿ ಕೇಂದ್ರ ಸ್ಥಾಪನೆ 15 ವರ್ಷಗಳ ಯೋಜನೆಯಾಗಿದ್ದು, ಪ್ರಸ್ತುತ ಇರುವ ರಣಹದ್ದು ಧಾಮದಿಂದ ಕನಿಷ್ಠ 5 ಕಿ.ಮೀ. ದೂರದಲ್ಲಿ ಸಂತಾನೋತ್ಪತ್ತಿ ಕೇಂದ್ರ ಸ್ಥಾಪನೆ ಮಾಡಬೇಕು ಎಂದು ಯೋಜನಾ ವರದಿಯಲ್ಲಿ ನಮೂದಾಗಿತ್ತು. ಮೊದಲಿಗೆ ಕನಿಷ್ಠ 25 ಜತೆ ಉದ್ದ ಕೊಕ್ಕಿನ ರಣಹದ್ದುಗಳನ್ನು ಸಂತಾನೋತ್ಪತ್ತಿಗಾಗಿ ಬಳಕೆ ಮಾಡಿಕೊಳ್ಳಲು ಯೋಜನೆಯಲ್ಲಿ ವಿವರಿಸಲಾಗಿದೆ. ಸಂತಾನೋತ್ಪತ್ತಿಗೆ ಬಳಕೆ ಮಾಡುವ ರಣಹದ್ದುಗಳನ್ನು ಮತ್ತು ಇವುಗಳಿಂದ ಪಡೆದ ಮರಿಗಳನ್ನು ತಜ್ಞರ ನಿಗಾವಣೆಯಲ್ಲಿ ಇಟ್ಟು ಅವುಗಳ ಚಲನವಲನಗಳನ್ನು ಸಂಪೂರ್ಣ ತಿಳಿದುಕೊಂಡ ಮೇಲೆ ಅವುಗಳನ್ನು ಸ್ವತಂತ್ರಗೊಳಿಸಲಾಗುತ್ತದೆ. ಹೀಗೆ ಮಾಡಲು ಕನಿಷ್ಠ 6-7 ವರ್ಷ ಬೇಕಾಗುತ್ತದೆ.

ಆತಂಕ ಏನು?

ಬನ್ನೇರುಘಟ್ಟದಲ್ಲಿ ಸಂತಾನೋತ್ಪತ್ತಿ ಕೇಂದ್ರ ಆರಂಭ ವಿಳಂಬವಾದಷ್ಟೂ, ಈಗಾಗಲೇ ಅಳಿವಿನಂಚಿನಲ್ಲಿರುವ ಉದ್ದ ಕೊಕ್ಕಿನ ರಣಹದ್ದುಗಳು ಸಂತತಿಯೇ ರಾಮನಗರದಿಂದ ಕಣ್ಮರೆಯಾದರೂ ಅಚ್ಚರಿಪಡಬೇಕಿಲ್ಲ. ಈಗಾಗಲೇ 5-6 ಉದ್ದ ಕೊಕ್ಕಿನ ರಣಹದ್ದುಗಳು ಮಾತ್ರ ಈ ಭಾಗದಲ್ಲಿ ಕಾಣಸಿಗುತ್ತಿದ್ದು, ಕಳೆದ 5 ವರ್ಷದಿಂದ ಜೋಡಿಯೊಂದು ಒಂದು ಮರಿಗೆ ಜನ್ಮ ನೀಡುತ್ತಿರುವುದು ಖುಷಿ ತಂದಿದೆ. ಪರಿಸರದಲ್ಲಿ ಹೊಂದಿರುವ ರಣಹದ್ದುಗಳು ಇದ್ದರಷ್ಟೇ, ಸಂತಾನೋತ್ಪತ್ತಿ ಕೇಂದ್ರದಲ್ಲಿ ಜನ್ಮ ಪಡೆಯುವ ರಣಹದ್ದುಗಳು ಪರಸರಕ್ಕೆ ಹೊಂದಿಕೊಳ್ಳಲು ಸಾಧ್ಯ. ಇದನ್ನು ಅರಣ್ಯ ಇಲಾಖೆ ಗಮನದಲ್ಲಿ ಇಟ್ಟುಕೊಳ್ಳಬೇಕಿದೆ.


ನಿಯಮ ಮೀರಿ ಬನ್ನೇರುಘಟ್ಟದಲ್ಲಿಯೇ ಬ್ರೀಡಿಂಗ್ ಕೇಂದ್ರ ಸ್ಥಾಪಿಸಲಾಗಿದೆ. ಆದರೆ, ಇನ್ನುಕಾರ್ಯಾರಂಭ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಬ್ರೀಡಿಂಗ್ ಕೇಂದ್ರ ಆರಂಭಿಸುವ ಸಲುವಾಗಿ ಸರ್ಕಾರದ ಗಮನ ಸೆಳೆಯಲು ಬನ್ನೇರುಘಟ್ಟದಿಂದ ಸೈಕಲ್ ಜಾಥಾ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
| ಬಿ.ಶಶಿಕುಮಾರ್
ಕಾರ್ಯದರ್ಶಿ, ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net