ತುಂಬೇನಹಳ್ಳಿಯಲ್ಲಿ ಆನೆ ದಾಳಿಗೆ ಬೆಳೆ ನಾಶ

 ಕೈಲಾಂಚ ಹೋಬಳಿ ತುಂಬೇನಹಳ್ಳಿಯಲ್ಲಿ ಆನೆಗಳ ದಾಳಿಯಿಂದ ನಾಶವಾದ ರೈತರ ಫಸಲು ವೀಕ್ಷಣೆ ನಡೆಸುತ್ತಿರುವ ವಲಯ ಅರಣ್ಯಾಧಿಕಾರಿ ಮಹಮ್ಮದ್​ ಮನ್ಸೂರ್​. ಅರಣ್ಯ ರಕ್ಷಕ ಶಾಂತಕುಮಾರ್​ ಇದ್ದರು.
ಕೈಲಾಂಚ ಹೋಬಳಿ ತುಂಬೇನಹಳ್ಳಿಯಲ್ಲಿ ಆನೆಗಳ ದಾಳಿಯಿಂದ ನಾಶವಾದ ರೈತರ ಫಸಲು ವೀಕ್ಷಣೆ ನಡೆಸುತ್ತಿರುವ ವಲಯ ಅರಣ್ಯಾಧಿಕಾರಿ ಮಹಮ್ಮದ್​ ಮನ್ಸೂರ್​. ಅರಣ್ಯ ರಕ್ಷಕ ಶಾಂತಕುಮಾರ್​ ಇದ್ದರು.
Published on
ಕೈಲಾಂಚ: ಹೋಬಳಿಯ ಹುಣಸನಹಳ್ಳಿ ಗ್ರಾಪಂ ವ್ಯಾಪ್ತಿಯ ತುಂಬೇನಹಳ್ಳಿಯಲ್ಲಿ ಮೂರು ಆನೆಗಳು ಸೋಮವಾರ ರಾತ್ರಿ ದಾಳಿ ನಡೆಸಿ ಮೋಹನ್​ಕುಮಾರ್​, ರವಿಶಂಕರ್​ ಅವರ ಸಫೋಟ ಮರಗಳು, ಮಲ್ಲೇಗೌಡ ಅವರ ಬೋರ್​ವೆಲ್​, ಬಸವರಾಜು ಅವರ ಅಡಕೆ, ಕೇತೋಹಳ್ಳಿಯ ಶಂಕರ್​ ಅವರ ಸೋಲಾರ್​ ಪರಿಕರ ನಾಶಪಡಿಸಿವೆೆ.
ಕಳೆದ ತಿಂಗಳಿಂದ ಹಂದಿಗೊಂದಿ ಅರಣ್ಯದಲ್ಲಿ ಬೀಡು ಬಿಟ್ಟಿರುವ ಎರಡು, ಮೂರು, ಒಂಟಿ ಆನೆಗಳು ಅರಣ್ಯದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಓಡಾಟ ನಡೆಸುತ್ತಾ ರೈತರ ಜಮೀನನಲ್ಲಿ ಬೆಳೆದ ತೆಂಗು, ಮಾವಿನ ಮರ, ತೋಟದ ಬೆಳೆ, ಬೋರ್​ವೆಲ್​ ನಾಶಪಡಿಸುತ್ತಿದೆ.
ಹೆಚ್ಚಾಗಿ ತೆಂಗು ಮರಗಳನ್ನೇ ನೆಲಕಚ್ಚಿಸುತ್ತಿದೆ. ಕಷ್ಟಪಟ್ಟು ಜೀವನಕ್ಕಾಗಿ ಮಾವು, ತೆಂಗು, ಪಪ್ಪಾಯಿ ತೋಟ ಬೆಳೆಸಲಾಗಿತ್ತು ಆನೆಗಳು ಕ್ಷಣಾರ್ಧದಲ್ಲಿ ಇಷ್ಟು ವರ್ಷ ಬೆಳೆಸಿದ ಮರಗಳನ್ನು ನೆಲಕ್ಕುರುಳಿಸಿ ನಾಶ ಮಾಡಿವೆ. ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಮಹಮ್ಮದ್​ ಮನ್ಸೂರ್​ ಭೇಟಿ ನೀಡಿ ಪರಿಶೀಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net