ಜಮೀನು ವಿವಾದಕ್ಕೆ ಬೆಳೆ ನಾಶ

ಬಿಡದಿ ಸಮೀಪದ ಕಾಕರಾಮನಹಳ್ಳಿಯಲ್ಲಿ ವಿಜಯಕುಮಾರ್​ ಅವರ ಬದನೆ ಹಾಗೂ ಮೆಣಸಿನಕಾಯಿ ಬೆಳೆ ನಾಶವಾಗಿರುವುದು.
ಬಿಡದಿ ಸಮೀಪದ ಕಾಕರಾಮನಹಳ್ಳಿಯಲ್ಲಿ ವಿಜಯಕುಮಾರ್​ ಅವರ ಬದನೆ ಹಾಗೂ ಮೆಣಸಿನಕಾಯಿ ಬೆಳೆ ನಾಶವಾಗಿರುವುದು.
Published on
ಬಿಡದಿ: ಸಮೀಪದ ಕಾಕರಾಮನಹಳ್ಳಿಯಲ್ಲಿ ಜಮೀನು ವಿವಾದದಿಂದಾಗಿ ದಾಯಾದಿಗಳು ಬೆಳೆ ನಾಶ ಮಾಡಿದ್ದಾರೆ.
ಗ್ರಾಮದ ವಿಜಯಕುಮಾರ್​ ಅವರು 1 ಎಕರೆ ಬದನೆ, 1 ಎಕರೆ ಮೆಣಸಿನಕಾಯಿ ಬೆಳೆದಿದ್ದು, ವಿಜಯಕುಮಾರ್​ ಅವರ ಚಿಕ್ಕಪ್ಪ ಪುಟ್ಟಸ್ವಾಮಿ ಹಾಗೂ ದೊಡ್ಡಪ್ಪನ ಮಗ ಗಂಗಾಧರ್​ ಇಬ್ಬರೂ ಸೇರಿ ಮಂಗಳವಾರ ರಾತ್ರಿ ಏಕಾಏಕಿ ತೋಟಕ್ಕೆ ನುಗ್ಗಿ ಬದನೆ ಹಾಗೂ ಮೆಣಸಿನಕಾಯಿ ಬೆಳೆ ನಾಶಮಾಡಿದ್ದಾರೆ ಎನ್ನಲಾಗಿದೆ.
ವಿಜಯ್​ ಅವರ ತಾತ ಭೈರಪ್ಪ ಅವರ ಹೆಸರಿನಲ್ಲಿ ಈ ಜಮೀನಿದ್ದು, ವಿಜಯ್​ ಅವರ ತಂದೆ ರಾಜಣ್ಣ ಸಾವಿನ ಬಳಿಕ 
ಪುಟ್ಟಸ್ವಾಮಿ ಹಾಗೂ ಗಂಗಾಧರ್​ ಜಮೀನು ವಿಚಾರದಲ್ಲಿ ತೊಂದರೆ ನೀಡುತ್ತಿದ್ದಾರೆ ಎಂದು ಬಿಡದಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net