ಗ್ರಾಮದ ಭಾಗ್ಯಾ ಮತ್ತು ಪುಟ್ಟಲಿಂಗೇಗೌಡ ದಂಪತಿ ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಸೀಮೆಹಸುವಿನ ಕರು ಮೇಲೆ ಭಾನುವಾರ ತಡರಾತ್ರಿ ಚಿರತೆ ದಾಳಿ ಮಾಡಿ ಕರುವಿನ ಕುತ್ತಿಗೆ ಹಾಗೂ ಹಿಂಭಾಗವನ್ನು ಸಂಪೂರ್ಣ ತಿಂದಿದೆ. ವಿಷಯ ತಿಳಿದು ಸೋಮವಾರ ಬೆಳಗ್ಗೆ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.