ಕೆಬ್ಬಳ್ಳಿ ಗ್ರಾಮದ ಸುನಿತಾ ಅಲಿಯಾಸ್ ಜ್ಯೋತಿ ಎಂಬುವವರು ಈ ಹಿಂದೆ ಬೆಂಗಳೂರಿನಲ್ಲಿ ಸಾಲ ಮಾಡಿಕೊಂಡು ತೊಂದರೆಗೊಳಗಾಗಿದ್ದ ನಾಗೇಂದ್ರ, ಕವಿತಾ ದಂಪತಿಯನ್ನು ಕೋಡಿಹಳ್ಳಿಗೆ ಕರೆತಂದು ಬಾಡಿಗೆ ಮನೆಯಲ್ಲಿ ಇರಿಸಿದ್ದರು. ನಂತರದ ದಿನಗಳಲ್ಲಿ ದಂಪತಿ ದುಡಿದು ಕೂಡಿಟ್ಟಿದ್ದ ಹಣವೂ ಅಲ್ಲದೇ ಬೇರೆಯವರಿಂದ ಸಾಲ ಕೊಡಿಸುವಂತೆ ನಾಗೇಂದ್ರ ಹಾಗೂ ಕವಿತಾಗೆ ಹೆದರಿಸುತ್ತಿದ್ದರು. ಇದೇಕಾರಣಕ್ಕೆ ಹಲವರಿಂದ 72 ಲಕ್ಷ ರೂ. ಸಾಲವಾಗಿ ಪಡೆದು, ಸುನಿತಾ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಿರುವುದಾಗಿ ಪೊಲೀಸ್ ವಿಚಾರಣೆ ವೇಳೆ ದಂಪತಿ ಬಾಯ್ಬಿಟ್ಟಿದ್ದು, ಹೇಳಿಕೆ ಆಧರಿಸಿ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಕೆಬ್ಬಳ್ಳಿ ಸುನಿತಾಗೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ ಎನ್ನಲಾಗಿದೆ.