ಅಪಘಾತದಲ್ಲಿ ದಂಪತಿ ಸಾವು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಹಾರೋಹಳ್ಳಿ: ನೆಲಗುಳಿ ಗ್ರಾಪಂ ವ್ಯಾಪ್ತಿಯ ಸಾಧನಪಾಳ್ಯ ಗೇಟ್​ ಬಳಿ ದ್ವಿಚಕ್ರ ವಾಹನ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ದಂಪತಿ ಮೃತಪಟ್ಟಿದಾರೆ.
ಆಂಧ್ರ ಮೂಲದ ವಿನೋದ್​ ಕುಮಾರ್​ ಚಾರ್ಲ್ಸ್​(28), ಪತ್ನಿ ಶೇಕ್​ ಜುಬೇದಾ (25) ಮೃತರು.
ದಂಪತಿ ಗಾರೆ ಕೆಲಸ ಮಾಡುತ್ತಿದ್ದು, ಎಂದಿನಂತೆ ಜಿಗಣಿ ಬಳಿ ಕೆಲಸಕ್ಕೆ ಹೋಗುತ್ತಿದ್ದಾಗ ಬೆಂಗಳೂರು ಮುಖ್ಯರಸ್ತೆಯಲ್ಲಿ ದಿಂಡುಗಲ್ಲು ತುಂಬಿಕೊಂಡು ಬರುತ್ತಿದ್ದ ಲಾರಿ ಡಿಕ್ಕಿಯಾಗಿ ವಿನೋದ್​ ಸ್ಥಳದಲ್ಲೇ ಕೊನೆಯುಸಿರೆಳೆದರೆ, ಶೇಕ್​ ಜುಬೇದಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಉಸಿರು ಚೆಲ್ಲಿದ್ದಾರೆ.
ಅಪಘಾತದ ರಭಸಕ್ಕೆ ಬೈಕ್​ ಸಂಪೂರ್ಣ ನಜ್ಜು ಗುಜ್ಜಾಗಿದೆ. ಕಗ್ಗಲಿಪುರ ಇನ್​ಸ್ಪೆಕ್ಟರ್​ ನಂಜೇಗೌಡ ಮತ್ತು ತಂಡ ಸ್ಥಳ ಪರಿಶೀಲಿಸಿದೆ. ಕಗ್ಗಲಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net