₹3 ಕೋಟಿ ವೆಚ್ಚದಲ್ಲಿ ರಾಜಗೋಪುರ ನಿರ್ಮಾಣ

ಮಾಗಡಿ ತಾಲೂಕು ಸಾವನದುರ್ಗ ಸಾವಂದಿ ವೀರಭದ್ರ ಸ್ವಾಮಿ ದೇವಾಲಯದ ರಾಜಗೋಪುರ ನಿರ್ಮಾಣದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಜಡೇದೇವರ ಮಠದ ಇಮ್ಮಡಿ ಬಸವರಾಜ ಸ್ವಾಮೀಜಿ, ಚನ್ನಪಟ್ಟಣ ಬೇವೂರು ಮಠದ  ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಲ್​.ವಿ.ಪರಮಶಿವಯ್ಯ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್​.ಎಂ.ಕೃಷ್ಣಮೂರ್ತಿ ಇತರರು ಇದ್ದರು.
ಮಾಗಡಿ ತಾಲೂಕು ಸಾವನದುರ್ಗ ಸಾವಂದಿ ವೀರಭದ್ರ ಸ್ವಾಮಿ ದೇವಾಲಯದ ರಾಜಗೋಪುರ ನಿರ್ಮಾಣದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಜಡೇದೇವರ ಮಠದ ಇಮ್ಮಡಿ ಬಸವರಾಜ ಸ್ವಾಮೀಜಿ, ಚನ್ನಪಟ್ಟಣ ಬೇವೂರು ಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಲ್​.ವಿ.ಪರಮಶಿವಯ್ಯ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್​.ಎಂ.ಕೃಷ್ಣಮೂರ್ತಿ ಇತರರು ಇದ್ದರು.
Published on
ಮಾಗಡಿ: ಇನ್ನೆರಡು ವರ್ಷದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ರಾಜಗೋಪುರವನ್ನು ನಿರ್ಮಿಸಿ, ಲೋಕಾರ್ಪಣೆಗೊಳಿಸುವುದಾಗಿ ಸಾವನದುರ್ಗ ಸಾವಂದಿ ಶ್ರೀವಿರಭದ್ರ ಸ್ವಾಮಿ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಲ್​.ವಿ.ಪರಮಶಿವಯ್ಯ ಹೇಳಿದರು.
ತಾಲೂಕಿನ ಸಾವನದುರ್ಗ ಸಾವಂದಿ ವೀರಭದ್ರ ಸ್ವಾಮಿ ದೇವಾಲಯದ ರಾಜಗೋಪುರ ನಿರ್ಮಾಣದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ವಿದೇಶಗಳಲ್ಲೂ ಭಕ್ತರನ್ನು ಹೊಂದಿದೆ. ದೇವಾಲಯದ ರಾಜಗೋಪುರ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಪ್ರಯತ್ನಿಸಿದರೂ ಮುಜುರಾಯಿ ಇಲಾಖೆ ಅನುಮತಿ ನೀಡಿರಲಿಲ್ಲ. ಈಗ ಸರ್ಕಾದ ಅಭಿವೃದ್ಧ ಪ್ರಾಧಿಕಾರವು ರಾಜಗೋಪುರ ನಿರ್ಮಾಣಕ್ಕೆ ಅನುಮತಿ ನೀಡಿದ್ದು, ಮುಜರಾಯಿ ಇಲಾಖೆಯಿಂದ ಮಂಜೂರಾತಿ ಪಡೆದು, 3.50 ಕೋಟಿ ರೂ. ವೆಚ್ಚದಲ್ಲಿ 62 ಅಡಿ ಎತ್ತರದ ಬೃಹತ್​ ರಾಜಗೋಪುರ, ರಥ ಹಾಗೂ ದಾಸೋಹ ಭವನ(ಪ್ರತಿನಿತ್ಯ 1 ಸಾವಿರ ಮಂದಿ ಪ್ರಸಾದದ ವ್ಯವಸ್ಥೆ), ಪಾರ್ಕ್​ ನಿರ್ಮಿಸಲಾಗುವುದು ಎಂದರು.
40 ವರ್ಷದಿಂದ ಭಕ್ತರಿಂದ ದೇಣಿಗೆ ರೂಪದಲ್ಲಿ ಸಂಗ್ರಹವಾದ ಹಣದಿಂದ ದಾಸೋಹ ಹಾಗೂ ದೇವಾಲಯವನ್ನು ಅಭಿವೃದ್ಧಿಗೊಳಿಸಿ ಉಳಿದ 1.30 ಕೋಟಿ ರೂ.ಅನ್ನು ರಾಜಗೋಪುರಕ್ಕೆ ಬಳಸಲಾಗುವುದು, ಹೆಚ್ಚುವರಿ ಹಣವನ್ನು ದಾನಿಗಳಿಂದ ಸಂಗ್ರಹಿಸಲಾಗುವುದು ಎಂದು ಪರಮಶಿವಯ್ಯ ಹೇಳಿದರು.
ವಿದ್ವಾನ್​ ಲೋಕೇಶ್​ ಆರಾಧ್ಯ ಮಾತನಾಡಿ, ಹಣ, ನವರತ್ನ, ತಾಮ್ರ, ಬೆಳ್ಳಿ ನೀಡಿದರೆ ಇದನ್ನು ಸಂಗ್ರಹಿಸಿ ರಾಜ ಗೋಪುರ ನಿರ್ಮಾಣದ ತಳಪಾಯಕ್ಕೆ ಹಾಕಲಾಗುವುದು. ರಾಜಗೋಪುರ ನಿರ್ಮಾಣದ ಪೂಜೆಯ ಪ್ರಯುಕ್ತ ಮಂಗಳವಾರ ಸಂಜೆಯಿಂದ ಬುಧವಾರ ಬೆಳಗ್ಗೆವರೆಗೆ ಗಂಗೆ ಪೂಜೆ, ವೀರಗಾಸೆ ಪೂಜೆ, 145 ಕಳಶ ಸ್ಥಾಪನೆ, ನವಗ್ರಹ ಶಾಂತಿ, ಮೃತ್ಯುಂಜಯ ಪೂಜೆ, ಪಂಚಾ ಆಚಾರ್ಯ ಪೂಜೆ, ಅಷ್ಟದಿಕ್ಪಾಲಕರ ಪೂಜೆ, ಏಕದಶ ರುದ್ರರ ಪೂಜೆ, 108 ಕುಂಬಗಳ ಪೂಜೆ, ಹಿಂದು ದೇವತೆಗಳ ಪೂಜೆ, ಹೋಮ, ಹವನ ಸೇರಿ ವೀರಶೈವ ಆಗಮದ ಸಂಪ್ರದಾಯದಂತೆ 40 ಮಂದಿ ಆಗಮಿಕರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಪಿ.ವಿ.ಗೋಪಾಲ ಶೆಟ್ಟಿ, ಎ.ವಿ.ಪಂಚಾಕ್ಷರಿ, ಎಲ್​.ವಿ.ವಿಜಯಕುಮಾರ್​, ನೀಲಾಂಬಿಕೆ, ದೀಪಿಕಾ, ಎಂ.ಸಿ.ಶಿವಣ್ಣ, ಮಹದೇವಯ್ಯ, ಶಿಲ್ಪಿ ಗಣೇಶ್​, ಪಾರುಪತ್ತೆದಾರ ದೇವರಾಜು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net