₹79 ಲಕ್ಷ ವೆಚ್ಚದಲ್ಲಿ ಬೇಕುಪ್ಪೆ ಗ್ರಾಪಂ ಕಟ್ಟಡ ನಿರ್ಮಾಣ New Gram Panchayat Building

ಕನಕಪುರ ತಾಲೂಕು ಟಿ.ಬೇಕುಪ್ಪೆ ಗ್ರಾಪಂ ನೂತನ ಕಟ್ಟಡವನ್ನು ಮಾಜಿ ಸಂಸದ ಡಿ.ಕೆ.ಸುರೇಶ್​ ಉದ್ಘಾಟಿಸಿದರು. ಅಧ್ಯೆ ಶಾಂತಿಬಾಯಿ, ಉಪಾಧ್ಯೆ ಶಿಲ್ಪಾ, ತಾಲೂಕು ಪಂಚಾಯಿತಿ ಅಧಿಕಾರಿ ಅವಿನಾಶ್​, ಜಿಪಂ ಎಇಇ ಚಂದ್ರಶೇಖರ್​, ಪಿಡಿಒ ಶೀನಿವಾಸ್​, ಕಾರ್ಯದರ್ಶಿ ಮಹಶ್ವೇರ ಹಾಗೂ ಇತರರಿದ್ದರು.

Published on
ಕನಕಪುರ: ತಾಲೂಕಿನ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಸಜ್ಜಿತ ಗ್ರಾಮ ಪಂಚಾಯಿತಿ ಕಟ್ಟಡ ಹಾಗೂ ಸಭಾಂಗಣ ನಿರ್ಮಾಣವಾಗಿರುವುದು ಸಂತಸ ತಂದಿದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್​ ಹೇಳಿದರು.
ತಾಲೂಕಿನ ಕಸಬಾ ಹೋಬಳಿ ಟಿ.ಬೇಕುಪ್ಪೆ ಗ್ರಾಮ ಪಂಚಾಯಿತಿ ನೂತನ ಕಟ್ಟಡ, ಗ್ರಂಥಾಲಯ ಹಾಗೂ ಸಂಜೀವಿನಿ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, 79 ಲಕ್ಷ ರೂ. ವೆಚ್ಚದಲ್ಲಿ ಗುಣಮಟ್ಟದ ಗ್ರಾಪಂ ಕಟ್ಟಡ ನಿರ್ಮಿಸಲಾಗಿದ್ದು, ಅಧಿಕಾರಿಗಳು ಹಾಗೂ ಸದಸ್ಯರು ಸಾರ್ವಜನಿಕರಿಗೆ ಉತ್ತಮ ಆಡಳಿತ ನೀಡುವ ಮೂಲಕ ಜನರ ಸಮಸ್ಯಗಳಿಗೆ ಶ್ರೀವೇ ಪರಿಹಾರ ನೀಡಬೇಕು ಎಂದರು.
ಮುಖಂಡರಾದ ಎಂ.ಡಿ.ವಿಜಯದೇವ್​, ಕೆ.ಎನ್​.ದಿಲೀಪ್​, ಹೊರಳಗಲ್ಲು ರಮೇಶ್​, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಎಸ್​.ಜೆ.ನಾಗರಾಜು, ಮುತ್ತುರಾಜು ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net