ದುಡುಪನಹಳ್ಳಿಯಲ್ಲಿ < 84 ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಾಣ

ಮಾಗಡಿ ತಾಲೂಕು ದುಡುಪನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿಯನ್ನು ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಪರಿಶೀಲಿಸಿದರು. ಮುಖಂಡ ಪುಟ್ಟರಾಜು ಯಾದವ್​, ತಾಪಂ ಸ್ಥಾಯಿಸಮಿತಿ ಮಾಜಿ ಅಧ್ಯಕ್ಷ ಧನಂಜಯ ನಾಯ್ಕ, ವಿಎಸ್ಸೆಸ್ಸೆನ್​ ಮಾಜಿ ಅಧ್ಯಕ್ಷ ಶಿವಮೂರ್ತಿ, ಗ್ರಾಪಂ ಮಾಜಿ ಅಧ್ಯಕ್ಷ ಪ್ರಕಾಶ್​ ಇತರರಿದ್ದರು.

Published on
ಮಾಗಡಿ: ದುಡುಪನಹಳ್ಳಿ ಗ್ರಾಮಸ್ಥರ ದಶಕಗಳ ಕನಸಾಗಿದ್ದ ಬ್ರಿಡ್ಜ್​ ಮತ್ತು ಚೆಕ್​ ಡ್ಯಾಂ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಕೆ.ಕೃಷ್ಣಮೂರ್ತಿ ತಿಳಿಸಿದರು.
ತಾಲೂಕಿನ ದುಡುಪನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ 84 ಲಕ್ಷ ರೂ. ವೆಚ್ಚದ ಸೇತುವೆ ಕಾಮಗಾರಿ ಪರಿಶೀಲಿಸಿದ ಬಳಿಕ ಮಾತನಾಡಿ, ಈ ಭಾಗದ ಜನರು ಮಳೆಗಾಲದಲ್ಲಿ ತುರ್ತು ಸಂದರ್ಭಗಳಲ್ಲಿ ಹರಸಾಹಸ ಪಡಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಬಾಲಕೃಷ್ಣ ಅವರು ಸಾರ್ವಜನಿಕರ ಓಡಾಟಕ್ಕೆ ಬ್ರಿಡ್ಜ್​ ಹಾಗೂ ನೀರು ಸಂಗ್ರಹಣೆಗಾಗಿ ಚೆಕ್​ ಡ್ಯಾಂ ನಿರ್ಮಿಸುತ್ತಿದ್ದು, ಶ್ರೀವೇ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ ಎಂದು ತಿಳಿಸಿದರು.
ಮುಖಂಡ ಪುಟ್ಟರಾಜು ಯಾದವ್​ ಮಾತನಾಡಿ, ತಿಪ್ಪಗೊಂಡನಹಳ್ಳಿ ಜಲಾಶಯದ ನಿರ್ಮಾಣದ ವೇಳೆ ಈ ಭಾಗಕ್ಕೆ ಸ್ಥಳಾಂತರಗೊಂಡು ದಶಕಗಳಿಂದ ಮೂಲ ಸೌಕರ್ಯದಿಂದ ವಂಚಿತವಾಗಿದ್ದ ಗ್ರಾಮಸ್ಥರ ಬಹುದಿನಗಳ ಕನಸಾಗಿದ್ದ ಸೇತುವೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ ಎಂದರು.
ಮುಖಂಡರಾದ ಪುಟ್ಟರಾಜು, ಚಂದ್ರಣ್ಣ, ಯೋಗೇಶ್​ ಕುಮಾರ್​, ಕಂದ್ರೇಗೌಡ, ರಂಗಸ್ವಾಮಿ, ಇಂಜಿನಿಯರ್​ ಮಹೇಶ್​ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net