

ರೇಷ್ಮೆ ಮಾರುಕಟ್ಟೆಯಲ್ಲಿ ಸಾಕಷ್ಟು ಸುಧಾರಣಾ ಕ್ರಮ ಕೈಗೊಳ್ಳಲಾಗಿದೆ. ದಿನದಿಂದ ದಿನಕ್ಕೆ ದ್ವಿತಳಿ ಮತ್ತು ಮಿಶ್ರತಳಿ ಗೂಡು ದರದಲ್ಲಿ ಏರಿಕೆ ಕಾಣುತ್ತಿದೆ. ದರ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ರೇಷ್ಮೆ ತರುವ ರೈತರಿಗೆ ಯಾವುದೇ ರೀತಿ ಸಮಸ್ಯೆ ಆಗದಂತೆ ಮಾರುಕಟ್ಟೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ಕಳೆದ 20 ವರ್ಷಗಳಿಂದಲೂ ಸಿಬಿ ರೇಷ್ಮೆ ಬೆಳೆಯುತ್ತಿದ್ದೆ. ಕೂಲಿ ಕಾರ್ಮಿಕರ ಕೊರತೆಯಿಂದ ಕಳೆದ ವರ್ಷದಿಂದ ದ್ವಿತಳಿ (ಸಿಎಸ್ಆರ್) ರೇಷ್ಮೆಯತ್ತ ಮುಖ ಮಾಡಿದೆ. 120 ಮೊಟ್ಟೆ ಚಾಕಿ ಹುಳುವಿಗೆ 102 ಕೆಜಿ ರೇಷ್ಮೆ ಉದ್ಪಾದನೆಯಾಗಿದ್ದು, ಕೆಜಿಗೆ 905 ರೂ. ದರ ಸಿಕ್ಕಿದೆ. ನಾನು, ನನ್ನ ಕುಟುಂಬ ಶ್ರಮಪಟ್ಟಿದ್ದಕ್ಕೂ ಸಾರ್ಥಕ ಎನಿಸಿದೆ.