ಸಮಸ್ಯೆ ಎದುರಿಸಲು ಆತ್ಮಸ್ಥೆರ್ಯ ಅಗತ್ಯ Confidence is needed to face problems.

ಕುದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋವರ್ಸ್​ ಮತ್ತು ರೇಂಜರ್​ ಟಕಗಳಿಂದ ಆಯೋಜಿಸಿದ್ದ ಕಾರ್ಯಗಾರದಲ್ಲಿ ಪ್ರಾಂಶುಪಾಲರಾಜಕುಮಾರ, ಪ್ರಾಧ್ಯಾಪಕ ಡಾ.ಶ್ರೀನಿವಾಸ್​.ಟಿ.ಎನ್​, ಐಕ್ಯೂಎಸಿ ಸಂಚಾಲಕ ಡಾ.ಕೃಷ್ಣ ಕಾಂಚಿತ್​, ರೋವರ್ಸ್​ ಟಕ ಸಂಚಾಲಕ ಹನುಮಂತಪ್ಪ, ರೇಂರ್ಜಸ್​ ಟಕ ಸಂಚಾಲಕ ಮೋಹನ್​ ಕುಮಾರ್​ .ಬಿ.ಸಿ ಹಾಗೂ ಇತರರಿದ್ದರು.
ಕುದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋವರ್ಸ್​ ಮತ್ತು ರೇಂಜರ್​ ಟಕಗಳಿಂದ ಆಯೋಜಿಸಿದ್ದ ಕಾರ್ಯಗಾರದಲ್ಲಿ ಪ್ರಾಂಶುಪಾಲರಾಜಕುಮಾರ, ಪ್ರಾಧ್ಯಾಪಕ ಡಾ.ಶ್ರೀನಿವಾಸ್​.ಟಿ.ಎನ್​, ಐಕ್ಯೂಎಸಿ ಸಂಚಾಲಕ ಡಾ.ಕೃಷ್ಣ ಕಾಂಚಿತ್​, ರೋವರ್ಸ್​ ಟಕ ಸಂಚಾಲಕ ಹನುಮಂತಪ್ಪ, ರೇಂರ್ಜಸ್​ ಟಕ ಸಂಚಾಲಕ ಮೋಹನ್​ ಕುಮಾರ್​ .ಬಿ.ಸಿ ಹಾಗೂ ಇತರರಿದ್ದರು.
Published on
ಕುದೂರು: ಬದುಕಿನ ಪ್ರತಿ ಹಂತದಲ್ಲೂ ಪೂರ್ವ ನಿಯೋಜಿತ ಯೋಜನೆಗಳು ಸಹಕಾರಿಯಾಗಿದ್ದು, ಸಮಸ್ಯೆಗಳನ್ನು ಎದುರಿಸಲು ವಿದ್ಯಾರ್ಥಿಗಳು ಪೂರ್ವ ಸಿದ್ಧತೆಯೊಂದಿಗೆ ಆತ್ಮಸ್ಥೆ$ರ್ಯದಿಂದ ಇರಬೇಕು ಎಂದು ಕುಣಿಗಲ್​ ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಧ್ಯಾಪಕ ಡಾ.ಶ್ರೀನಿವಾಸ್​.ಟಿ.ಎನ್​. ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ರೋವರ್ಸ್​ ಮತ್ತು ರೇಂಜರ್​ ಟಕದಿಂದ ಆಯೋಜಿಸಿದ್ದ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಕಠಿಣ ಸವಾಲು ಗೆಲ್ಲುವುದು ಸತತ ಪ್ರಯತ್ನದಿಂದ ಸಾಧ್ಯ. ಹಾಗೆಯೇ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಪ್ರಾಯೋಗಿಕ ಚಿಂತನೆ ಅಗತ್ಯ. ಈ ನಿಟ್ಟಿನಲ್ಲಿ ಕಾಲೇಜು ಹಂತದಲ್ಲಿ ರೋವರ್ಸ್​ ಮತ್ತು ರೇಂಜಸ್​ ಟಕಗಳು ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುತ್ತವೆ ಎಂದರು.
ಪ್ರಾಂಶುಪಾಲ ರಾಜಕುಮಾರ.ಡಿ ಮಾತನಾಡಿ, ಕಾಲೇಜು ಹಂತದಲ್ಲಿ ಪುರುಷರಿಗೆ ರೋವರ್ಸ್​ ಮತ್ತು ಮಹಿಳಾ ವಿದ್ಯಾರ್ಥಿಗಳಿಗೆ ರೇಂರ್ಜಸ್​ ತಂಡಗಳನ್ನು ರಚಿಸಿ, ಅವರಲ್ಲಿ ಮೌಲ್ಯಯುವ ಶಿಣ ಶಿಬಿರಗಳು, ಚಾರಣ, ಪ್ರವಾಹ, ಭೂಕಂಪದಂತಹ ಸಂದರ್ಭಗಳಲ್ಲಿ ಆಂತರಿಕ ಯೋಧರನ್ನಾಗಿ ಕಾರ್ಯ ನಿರ್ವಹಿಸಲು ತರಬೇತಿ ನೀಡಿ, ಅಣಿಗೊಳಿಸಲಾಗುತ್ತದೆ. ವಿದ್ಯಾರ್ಥಿಗಳು ಶಿಬಿರಗಳಲ್ಲಿ ಭಾಗವಹಿಸುವುದರಿಂದ ನಾಯಕತ್ವ ಗುಣ, ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಕೌಶಲ ಹಾಗೂ ಸಕಲ ಸಂಕಷ್ಟಕ್ಕೆ ಸ್ಪಂದಿಸುವ ಮನಸ್ಥಿತಿ ಬೆಳೆಸಿಕೊಳ್ಳಬಹುದು. 
ಸಮುದಾಯ ಸೇವೆಗೆ ಪ್ರತಿಫಲದ ಅಪೇೆ ಇಲ್ಲದೆ ದುಡಿಯಿರಿ. ಗಾಂಧೀಜಿ, ಡಾ.ಅಂಬೇಡ್ಕರ್​ ಸವಾಲುಗಳನ್ನು ಮೆಟ್ಟಿಯೇ ಸಾಧಕರಾಗಿದ್ದಾರೆ. ವಿದ್ಯಾರ್ಥಿಗಳು ಸಾಧಕರ ಜೀವನ ಚರಿತ್ರೆ ಅಧ್ಯಯನ ಮಾಡಬೇಕು ಎಂದ ಪ್ರಾಂಶುಪಾಲರು, ದೇಶದ ಎಲ್ಲ ಶಾಲಾ&ಕಾಲೇಜುಗಳಲ್ಲಿ 60 ಲ ವಿದ್ಯಾರ್ಥಿಗಳ ಸ್ಕೌಟ್​, ಗೈಡ್ಸ್​ ಆ್ಯಂಡ್​ ರೋವರ್ಸ್​&ರೇಂರ್ಜಸ್​ಗಳಿದ್ದು ದೇಶದ ಯುವಜನರ ಪಾಲ್ಗೊಳ್ಳುವಿಕೆಯಿಂದ ಭಾರತ ಇನ್ನಷ್ಟು ಬಲಿಷ್ಠವಾಗಲಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net