ಶಾಸಕರ ಗೃಹ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 600 ಕೋಟಿ ಹಗರಣ, ಬಿಡಿಸಿಸಿ ಬ್ಯಾಂಕ್ ಹಗರಣ ಎಂದು ಎ.ಮಂಜು ಅವರು ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಡಲಿ. ಏ.25ರ ಶನಿವಾರ ಬೆಳಗ್ಗೆ 11 ಗಂಟೆಗೆ ಚಕ್ರಭಾವಿ ವಿಎಸ್ಸೆಸ್ಸೆನ್ ಆವರಣದಲ್ಲಿ ನಾವು ಚರ್ಚೆಗೆ ವೇದಿಕೆ ಸಿದ್ಧಪಡಿಸುತ್ತೇವೆ. ಅಲ್ಲಿಗೆ ದಾಖಲೆಗಳೊಂದಿಗೆ ಬನ್ನಿ. ಒಂದು ವೇಳೆ ಸಮಯಕ್ಕೆ ಬರಲು ಸಾಧ್ಯವಾಗದಿದ್ದರೆ, ನೀವೇ ದಿನಾಂಕ ಮತ್ತು ಸಮಯ ನಿಗದಿಪಡಿಸಿ, ಬಾಲಕೃಷ್ಣ ಅವರನ್ನೇ ಚರ್ಚೆ ಕರೆತರಲು ಸಿದ್ಧರಿದ್ದೇವೆ ಎಂದು ಸವಾಲು ಹಾಕಿದರು.