ಮುಖ್ಯಪೇದೆ ಬೀರಪ್ಪಗೆ ಸಿಎಂ ಪದಕ

ಮಾಗಡಿ ಠಾಣೆಯ ಮುಖ್ಯಪೇದೆ ಬೀರಪ್ಪ
ಮಾಗಡಿ ಠಾಣೆಯ ಮುಖ್ಯಪೇದೆ ಬೀರಪ್ಪ
Published on
ಮಾಗಡಿ: ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮತ್ತು ಸಂಕೀರ್ಣ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ತೋರಿದ ಅಪ್ರತಿಮ ಸೇವೆಗಾಗಿ ಮಾಗಡಿ ಠಾಣೆಯ ಮುಖ್ಯಪೇದೆ ಬೀರಪ್ಪ 2026ನೇ ಸಾಲಿನ ಪ್ರತಿಷ್ಠಿತ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.
ಮೂಲತ ದಾವಣಗೆರೆಯವರಾದ ಬೀರಪ್ಪ 2015ನೇ ಬ್ಯಾಚ್​ನಲ್ಲಿ ಪೊಲೀಸ್​ ಇಲಾಖೆಗೆ ಸೇರ್ಪಡೆಗೊಂಡರು. ಅಂದಿನಿಂದ ಇಂದಿನವರೆಗೆ ಇಲಾಖೆಯ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಐದು ವರ್ಷಗಳಿಂದ ಮಾಗಡಿ ಠಾಣೆಯಲ್ಲಿ ಮುಖ್ಯಪೇದೆಯಾಗಿರುವ ಇವರು ಈ ಹಿಂದೆ ತಾವರೆಕೆರೆ ಠಾಣೆಯಲ್ಲೂ ಸೇವೆ ಸಲ್ಲಿಸಿದ್ದಾರೆ.
ಜಟಿಲ ಅಪರಾಧ ಪ್ರಕರಣಗಳ ತನಿಖೆಯಲ್ಲಿ ಹಿರಿಯ ಅಧಿಕಾರಿಗಳಿಗೆ ಬೆನ್ನೆಲುಬಾಗಿ ನಿಂತು, ತಾಂತ್ರಿಕ ಮತ್ತು ಪ್ರಾಯೋಗಿಕ ಾನ ಬಳಸಿ ಆರೋಪಿಗಳ ಪತ್ತೆಯಲ್ಲಿ ಬೀರಪ್ಪ ಪ್ರಮುಖ ಪಾತ್ರ ವಹಿಸಿದ್ದಾರೆ. ಏ.2ರಂದು ಬೆಂಗಳೂರಿನ ಕೋರಮಂಗಲದ ಪೊಲೀಸ್​ ಮೈದಾನದಲ್ಲಿ ಆಯೋಜಿಸಲಾಗಿರುವ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೀರಪ್ಪಗೆ ಪದಕ ಪ್ರದಾನ ಮಾಡಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net