₹ 49.99 ಲಕ್ಷ ವೆಚ್ಚದಲ್ಲಿ ಕ್ಲಾಕ್​ ಟವರ್​ ನಿರ್ಮಾಣ

ರಾಮನಗರದ ವಾಟರ್​ ಟ್ಯಾಂಕ್​ ಸರ್ಕಲ್​ ಬಳಿ ಕ್ಲಾಕ್​ ಟವರ್​ ನಿರ್ಮಾಣಕ್ಕೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಭೂಮಿಪೂಜೆ ನೆರವೇರಿಸಿದರು. ಆಯುಕ್ತ ಡಾ.ಜಯಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷದ್​, ಸದಸ್ಯರಾದ ಮಹಾಲ್ಮ, ಗೂಳಿಗೌಡ, ಪವಿತ್ರಾ, ಪಾರ್ವತಮ್ಮ, ನರಸಿಂಹ, ಸೋಮಶೇಖರ್​, ಸಮದ್​ ಇತರರು ಇದ್ದರು.
ರಾಮನಗರದ ವಾಟರ್​ ಟ್ಯಾಂಕ್​ ಸರ್ಕಲ್​ ಬಳಿ ಕ್ಲಾಕ್​ ಟವರ್​ ನಿರ್ಮಾಣಕ್ಕೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಭೂಮಿಪೂಜೆ ನೆರವೇರಿಸಿದರು. ಆಯುಕ್ತ ಡಾ.ಜಯಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷದ್​, ಸದಸ್ಯರಾದ ಮಹಾಲ್ಮ, ಗೂಳಿಗೌಡ, ಪವಿತ್ರಾ, ಪಾರ್ವತಮ್ಮ, ನರಸಿಂಹ, ಸೋಮಶೇಖರ್​, ಸಮದ್​ ಇತರರು ಇದ್ದರು.
Published on
ರಾಮನಗರ: ನಗರದ ವಾಟರ್​ ಟ್ಯಾಂಕ್​ ಸರ್ಕಲ್​ನಲ್ಲಿ ನಗರಸಭೆ ನಿಧಿಯಿಂದ 49.99 ಲಕ್ಷ ರೂ. ವೆಚ್ಚದಲ್ಲಿ ಕ್ಲಾಕ್​ ಟವರ್​ ನಿರ್ಮಿಸಲಾಗುತ್ತಿದ್ದು, ಈಗಾಗಲೇ ಈ ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್​ ಪ್ರಕ್ರಿಯೆ ಮುಗಿದು, ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು.
ನಗರದ ವಾಟರ್​ ಟ್ಯಾಂಕ್​ ವೃತ್ತದಲ್ಲಿ ಕ್ಲಾಕ್​ ಟವರ್​ಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅಧ್ಯಕ್ಷರು, ಜಿಲ್ಲಾ ಕೇಂದ್ರ ರಾಮನಗರವನ್ನು ಮಾದರಿ, ಸುಂದರ ನಗರವನ್ನಾಗಿಸುವ ನಿಟ್ಟಿನಲ್ಲಿ 2026&27ನೇ ಸಾಲಿನ ಯೋಜನೆಯಡಿ ನಗರದ ಪ್ರಮುಖ ನಾಲ್ಕು ವೃತ್ತಗಳ ಸೌಂದರೀಕರಣಕ್ಕೆ ಚಾಲನೆ ನೀಡಲಾಗಿದ್ದು, ವಾಟರ್​ ಟ್ಯಾಂಕ್​ ಸರ್ಕಲ್​ನಲ್ಲಿ ಆಕರ್ಷಕ ಕ್ಲಾಕ್​ ಟವರ್​ (ಗಡಿಯಾರ ಗೋಪುರ) ನಿರ್ಮಾಣಗೊಳ್ಳಲಿದೆ.
ಕೆಂಗಲ್​ ಹನುಮಂತಯ್ಯ ವೃತ್ತದಲ್ಲಿ ಹನುಮಂತಯ್ಯ ಅವರ ಪ್ರತಿಮೆ, ಸುತ್ತಲಿನ ಪ್ರದೇಶದ ಸೌಂದರೀಕರಣ, ರೈಲ್ವೆ ನಿಲ್ದಾಣ ವೃತ್ತವನ್ನು ಆಧುನಿಕ ವಿನ್ಯಾಸದೊಂದಿಗೆ ಅಭಿವೃದ್ಧಿಗೊಳಿಸುವುದು ಮತ್ತು ಕೆಂಪೇಗೌಡ ವೃತ್ತವನ್ನು ನಗರದ ಪ್ರವೇಶ ದ್ವಾರದಂತೆ ಕಂಗೊಳಿಸಲಿರುವ ಸರ್ಕಲ್​ಆಗಿ ಅಭಿವೃದ್ಧಿಪಡಿಸಲಾಗುವುದು ಎಂದರು. ನಗರಸಭೆ ಆಯುಕ್ತ ಡಾ.ಜಯಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷದ್​, ಸದಸ್ಯರಾದ ಮಹಾಲ್ಮ ಗೂಳಿಗೌಡ, ಪವಿತ್ರಾ, ಪಾರ್ವತಮ್ಮ, ನರಸಿಂಹ, ಸೋಮಶೇಖರ್​ ಇತರರು ಇದ್ದರು.
"

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ "ಐ ಲವ್​ ರಾಮನಗರ' ನಾಮಫಲಕ ಅಳವಡಿಕೆ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಇದು ನಗರಕ್ಕೆ ಬರುವ ಪ್ರವಾಸಿಗರು ಹಾಗೂ ಸ್ಥಳಿಯರಿಗೆ ಹೊಸ ಸೆಲ್ಫಿ ಪಾಯಿಂಟ್​ ಆಗಿ ಗಮನ ಸೆಳೆಯಲಿದೆ.

— > ಕೆ.ಶೇಷಾದ್ರಿ ಅಧ್ಯಕ್ಷ, ನಗರಸಭೆ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net