ಹೌದು..., ಯಾವುದೇ ಸರಕನ್ನು ಗರಿಷ್ಠ ಮಾರಾಟ ದರಕ್ಕಿಂತ (ಎಂಆರ್‌ಪಿ ) ಹೆಚ್ಚು ಶುಲ್ಕ ವಿಧಿಸಿ, ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ.ಮಾರಾಟವಷ್ಟೇ ಅಲ್ಲ, ನಿದಿತ ದರಕ್ಕಿಂತ ಹೆಚ್ಚಿನ ಹಣ ನೀಡುವುದೂ ಅಪರಾಧವೇ. ಆದರೆ, ನಗರದ ಸರ್ಕಾರಿ ಬಸ್ ನಿಲ್ದಾಣ ಸೇರಿ ವಿವಿಧ ಹೆದ್ದಾರಿಯಲ್ಲಿರುವ ಕೆಲವು ಅಂಗಡಿ ಮಳಿಗೆಗಳಲ್ಲಿ ಕೆಲ ಚಿಲ್ಲರೆ ವ್ಯಾಪಾರಿಗಳು, ವಸ್ತುಗಳಿಗೆ ಗ್ರಾಹಕರಿಂದ ಗರಿಷ್ಠ ಚಿಲ್ಲರೆ ಬೆಲೆಗಿಂತ ಹೆಚ್ಚಿನ ಹಣ ಪಡೆಯುತ್ತಿದ್ದಾರೆ ಎಂಬುದು ಹಲವರ ಆರೋಪವಾಗಿದೆ.