ರೇಷ್ಮೇಸಿಮೆಗೆ ಚನ್ನಪಟ್ಟಣ ಪ್ರಥಮ ಗ್ರಾಮೀಣ ಮಕ್ಕಳು ಮೇಲುಗೈ

ಟಾಪರ್​ಗಳು
ಟಾಪರ್​ಗಳು
Published on
ಚನ್ನಪಟ್ಟಣ: ಎಸ್ಸೆಸ್ಸೆಲ್ಸಿ ಪರೀೆಯಲ್ಲಿ ಶೇ.95.03 ಫಲಿತಾಂಶ ದಾಖಲಿಸುವ ಮೂಲಕ ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದೆ.
ತಾಲೂಕಿನಲ್ಲಿ ಒಟ್ಟು 2,678 ವಿದ್ಯಾರ್ಥಿಗಳು ಪರೀೆ ಎದುರಿಸಿದ್ದು, ಈ ಪೈಕಿ 2,545 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅದರಲ್ಲಿ ಗ್ರಾಮೀಣ ಭಾಗದ ಶೇ.96 ವಿದ್ಯಾರ್ಥಿಗಳು ಹಾಗೂ ನಗರ ಭಾಗದ ಶೇ.91ವಿದ್ಯಾರ್ಥಿಗಳು ಇದ್ದಾರೆ. ಕನ್ನಡದಲ್ಲಿ ಶೇ.94, ಆಂಗ್ಲ ಮಾಧ್ಯಮದಲ್ಲಿ ಶೇ.94 ಹಾಗೂ ಉರ್ದುನಲ್ಲಿ ಶೇ.95 ಫಲಿತಾಂಶ ಬಂದಿದೆ. ಇನ್ನೂ ಈ ಬಾರಿ 8 ಸರ್ಕಾರಿ ಶಾಲೆಗಳು, 7 ಅನುದಾನಿತ ಶಾಲೆಗಳು, 10 ಅನುದಾನ ರಹಿತ ಹಾಗೂ 3 ವಸತಿ ಶಾಲೆಗಳು ಸೇರಿದಂತೆ 28 ಶಾಲೆಗಳು ನೂರರಷ್ಟು ಫಲಿತಾಂಶ ದಾಖಲಿಸಿವೆ.
ಶೇ.100 ಫಲಿತಾಂಶ ದಾಖಲಿಸಿದ ಸರ್ಕಾರಿ ಶಾಲೆಗಳು!
ಮಾಕಳಿ, ಸೋಗಾಲ, ಜೆ.ಬ್ಯಾಡರಹಳ್ಳಿ, ಮಂಕುಂದ, ಹೊನ್ನಾಯಕನಹಳ್ಳಿ, ಆದರ್ಶ ವಿದ್ಯಾಲಯ ಮತ್ತಿಕೆರೆ ಶೆಟ್ಟಿಹಳ್ಳಿ, ಕೃಷ್ಣಾಪುರ, ತಗಚಗೆರೆ ಶಾಲೆಗಳು, ವಸತಿ ಶಾಲೆಗಳಾದ ಡಾ.ಬಿ.ಆರ್​.ಅಂಬೇಡ್ಕರ್​ ಬಾಲಕಿಯರ ವಸತಿ ಶಾಲೆ, ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆ ಹೊನ್ನನಾಯಕನಹಳ್ಳಿ , ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಹೊನ್ನಾಯಕನಹಳ್ಳಿ ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿವೆ.
ಪ್ರಥಮ ಭಾಷೆಯಲ್ಲಿ ಸಾಧನೆ!
ಪ್ರಥಮ ಭಾಷೆ ಕನ್ನಡದಲ್ಲಿ ಡಾ.ಬಿ.ಆರ್​.ಅಂಬೇಡ್ಕರ್​ ವಸತಿ ಶಾಲೆಯ ವಿದ್ಯಾರ್ಥಿ ಖುಷಿ ಎಚ್​. ನ್ಯೂ ಡಾನ್​ ಬಾಸ್ಕೋ ಪ್ರೌಢಶಾಲೆಯ ವಿದ್ಯಾರ್ಥಿನಿ ಇಂದು ಕೆ.ಪಿ., ಬೇವೂರು ಸಿದ್ದರಾಮೇಶ್ವರ ಶಾಲೆ ವಿದ್ಯಾರ್ಥಿನಿ ಜೀವಿತಾ, ಸುಳ್ಳೇರಿ ಮಹದೇಶ್ವರ ಗ್ರಾಮಾಂತರ ಶಾಲೆಯ ಲೇಖನಾ ಜಿ.ಎಸ್​. ಸೇರಿದಂತೆ ಒಟ್ಟು 4 ವಿದ್ಯಾರ್ಥಿಗಳು 125 ಅಂಕ ಗಳಿಸುವ ಮೂಲಕ ಉತ್ತಮ ಸಾಧನೆಗೈದಿದ್ದಾರೆ.
ತಾಲೂಕಿನ ಟಾಪರ್​ಗಳು!!!
1. ವಿಂದ್ಯಾ ಎಸ್​.
617(ಶೇ.98.7), ಸೇಂಟ್​ ಆನ್ಸ್​ ಬಾಲಕಿಯರ ಪ್ರೌಢಶಾಲೆ ಅಪ್ಪಗೆರೆ
&ಪ್ರಥಮ
2. ಖುಷಿ ಎಚ್​.
615(98.4) ಡಾ.ಬಿ.ಆರ್​.ಅಂಬೇಡ್ಕರ್​ ಬಾಲಕಿಯರ ವಸತಿ ಶಾಲೆ
&ದ್ವೀತಿಯ
3. ಖುಷಿ ಶ್ರೀನಿವಾಸ್​&613 (98), ಸರ್ಕಾರಿ ಆದರ್ಶ ವಿದ್ಯಾಲಯ ಮತ್ತಿಕೆರೆ ಶೆಟ್ಟಿಹಳ್ಳಿ
&ತೃತೀಯ
4. ಆಶಿಕಾ ಎ.&613 (98) ನ್ಯೂ ಡಾನ್​ ಬಾಸ್ಕೋ ಪ್ರೌಢಶಾಲೆ
&ತೃತೀಯ
5. ಪಂಚಮಿ ಎನ್​.&608(97.2), ಸರ್ಕಾರಿ ಆದರ್ಶ ವಿದ್ಯಾಲಯ ಮತ್ತಿಕೆರೆ ಶೆಟ್ಟಿಹಳ್ಳಿ
& ನಾಲ್ಕನೇ ಸ್ಥಾನ)
6. ಸಂಪ್ರೀತಾ ಜಿ.ಆರ್​.&606 (96.9) ಸೆಂಟ್​ ಆನ್ಸ್​ ಬಾಲಕಿಯರ ಪ್ರೌಢಶಾಲೆ
& 5ನೇ ಸ್ಥಾನ
7.ದ್ರುತಿ ಎಸ್​. ಗೌಡ &605 (96.8) ಆದರ್ಶ ವಿದ್ಯಾಲಯ ಮತ್ತಿಕೆರೆ ಶೆಟ್ಟಿಹಳ್ಳಿ
& 6ನೇ ಸ್ಥಾನ
8. ಕವನಾ ಬಿ.ಎಸ್​.&605 (96.8) ಆದರ್ಶ ವಿದ್ಯಾಲಯ ಮತ್ತಿಕೆರೆ ಶೆಟ್ಟಿಹಳ್ಳಿ
& 6ನೇ ಸ್ಥಾನ
9. ಕೋಕಿಲ ವಿ.&604 (96.6)ಸೇಂಟ್​ ಆನ್ಸ್​ ಬಾಲಕಿಯರ ಪ್ರೌಢಶಾಲೆ ಅಪ್ಪಗೆರೆ
& 7ನೇ ಸ್ಥಾನ
10. ಚಿರಾಗ್​ ಗೌಡ ಸಿ.ಡಿ.& 604 (96.6) ಸಿಂಗ್​ ಫೀಲ್ಡ್​ ಪಬ್ಲಿಕ್​ ಸ್ಕೂಲ್​
& 7ನೇ ಸ್ಥಾನ
ತಹಸೀಲ್ದಾರ್​ ಪ್ರಯತ್ನಕ್ಕೆ ಯಶ!
ತಹಸೀಲ್ದಾರ್​ ಬಿ.ಎನ್​.ಗಿರೀಶ್​ ಕರ್ತವ್ಯದ ನಡುವೆ ಎಸ್ಸೆಸ್ಸೆಲ್ಸಿ ಪರೀೆ ಸಂಬಂಧಿಸಿದಂತೆ ಮನೆಮನೆಗೆ ಭೇಟಿ ಸೇರಿ ಪರೀಾ ಪ್ರೇರಣಾ ಕಾರ್ಯಾಗಾರಗಳನ್ನು ನಿರಂತರವಾಗಿ ರೂಪಿಸಿದ್ದರು. ಇವರಿಗೆ ಶಿಣಾ ಇಲಾಖೆ ಹಾಗೂ ಶಿಕರು ಸಹ ಸಾಥ್​ ನೀಡಿದ್ದರು. ತಹಸೀಲ್ದಾರ್​ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ, ಸ್ಥೆರ್ಯ ಮತ್ತು ಮಾರ್ಗದರ್ಶನ ನೀಡುವ ಸಲುವಾಗಿ ಸಂಪನ್ಮೂಲ ವ್ಯಕ್ತಿಗಳಿಂದ ವಿಷಯ ಕಾರ್ಯಾಗಾರ ಜತೆಗೆ ಮುಖ್ಯಶಿಕರು ಹಾಗೂ ಸಹ ಶಿಕರಿಗೂ ಕಾರ್ಯಗಾರಗಳನ್ನು ಆಯೋಜಿಸಲಾಗಿತ್ತು. ಅವರ ಶ್ರಮದ ಪರಿಣಾಮ ತಾಲೂಕು ಎಸ್ಸೆಸ್ಸೆಲ್ಸಿ ಪರೀೆಯಲ್ಲಿ ಈ ಬಾರಿ ಗುಣಾತ್ಮಕ ಫಲಿತಾಂಶ ಪಡೆಯಲು ಸಾಧ್ಯವಾಯಿತು ಎಂದು ಬಿಇಒ ರಾಮಲಿಂಗಯ್ಯ ಹಾಗೂ ಪರೀಾ ತಾಲೂಕು ನೋಡಲ್​ ಅಧಿಕಾರಿ ಯೋಗೇಶ್​ ಚಕ್ಕೆರೆ ಅಭಿಪ್ರಾಯಪಟ್ಟಿದ್ದಾರೆ.
ಕೈಹಿಡಿದ ವಿದ್ಯಾರ್ಥಿ ಮಿತ್ರ!!
ತಾಲೂಕಿನಲ್ಲಿ ವಿಜಯವಾಣಿ ಪತ್ರಿಕೆಯ ವಿದ್ಯಾರ್ಥಿ ಮಿತ್ರ ಸಂಚಿಕೆ ಪೂರೈಕೆಯಾಗುತ್ತಿದ್ದ ಬಹುತೇಕ ಶಾಲೆಗಳಲ್ಲಿ ಉತ್ತಮ ಫಲಿತಾಂಶ ದಾಖಲಾಗಿದ್ದು, ವಿದ್ಯಾರ್ಥಿ ಮಿತ್ರ ವಿದ್ಯಾರ್ಥಿಗಳ ಕೈ ಹಿಡಿಯುವಲ್ಲಿ ಯಶಸ್ವಿಯಾಗಿದೆ.
"

ಎಸ್ಸೆಸ್ಸೆಲ್ಸಿ ಪರೀೆಯಲ್ಲಿ ಉತ್ತೀರ್ಣರಾಗಿರುವ ಎಲ್ಲ ವಿದ್ಯಾರ್ಥಿಗಳಿಗೂ ಶುಭಾಶಯ. ಪರೀೆಯಲ್ಲಿ ೇಲಾಗಿರುವ ವಿದ್ಯಾರ್ಥಿಗಳು ಎದೆಗುಂದಬಾರದು. ಜೀವನದ ಬಂಡಿಯಲ್ಲಿ ಯಶಸ್ಸು ಗಳಿಸಲು ಪರೀೆಯೇ ಅಂತಿಮವಲ್ಲ ಹಾಗೂ ಮಾನದಂಡವೂ ಅಲ್ಲ. ಅನುರ್ತೀಣರಾಗಿರುವ ವಿದ್ಯಾರ್ಥಿಗಳು ಮತ್ತೆ ಇರುವ ಅವಕಾಶವನ್ನು ಬಳಸಿಕೊಳ್ಳಬೇಕು.

"

ಪರೀೆಯಲ್ಲಿ ಶೇ.95 ವಿದ್ಯಾರ್ಥಿಗಳು ಉತ್ತೀರ್ಣರಾಗಿರುವ ಮೂಲಕ ಜಿಲ್ಲೆಯಲ್ಲಿ ಚನ್ನಪಟ್ಟಣ ತಾಲೂಕು ಪ್ರಥಮ ಸ್ಥಾನದಲ್ಲಿರುವುದು ಸಂತಸದ ವಿಷಯ. ಇಂತಹ ಅದ್ಭುತ ಸಾಧನೆ ಮಾಡಲು ಸಹಕರಿಸಿದ ಪ್ರತಿಯೊಬ್ಬರಿಗೂ ವಂದನೆಗಳು. ಶಿಣವೊಂದೇ ಸಮಾಜದ ಅಭಿವೃದ್ಧಿಗೆ ಇರುವ ರಹದಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net