ಬೆಂಗಳೂರಿನ ಕೆ.ಆರ್.ಪುರಂನ ಅರುಣ್ (45) ಮೃತ. ಅರುಣ್ ಅವರು ಸಾತನೂರು ಕಡೆಗೆ ಹೋಗುತ್ತಿದ್ದಾಗ ಲಾರಿ ಎದುರಿಗೆ ಬಂದಿದೆ ಎನ್ನಲಾಗಿದ್ದು, ಮರಣೋತ್ತರ ಪರೀೆಗಾಗಿ ಮೃತದೇಹವನ್ನು ಹಾರೋಹಳ್ಳಿ ಸಮೀಪದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಜಿಲ್ಲಾ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ, ಡಿವೈಎಸ್ಪಿ ಗಿರಿ, ಸಾತನೂರು ಸಬ್ಇನ್ಸ್ಪೆಕ್ಟರ್ ಸಮಂತ್ ಭೇಟಿ ನೀಡಿ ಪರಿಶೀಲಿಸಿ, ಎರಡೂ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.