ಅಡಕೆ ತೋಟಕ್ಕೆ ನುಗ್ಗಿದ ಕಾರು

ಮಾಗಡಿ ತಾಲೂಕು ಕನ್ನಸಂದ್ರ ಸಮೀಪದ ರಾಜಕಾಲುವೆಗೆ ಕಾರು ಬಿದ್ದು ನಜ್ಜುಗುಜ್ಜಾಗಿರುವುದು.
ಮಾಗಡಿ ತಾಲೂಕು ಕನ್ನಸಂದ್ರ ಸಮೀಪದ ರಾಜಕಾಲುವೆಗೆ ಕಾರು ಬಿದ್ದು ನಜ್ಜುಗುಜ್ಜಾಗಿರುವುದು.
Published on
ಕುದೂರು: ಹೋಬಳಿಯ ಕನ್ನಸಂದ್ರ ಸಮೀಪದ ರಾಷ್ಟ್ರೀಯ ಹೆದ್ದಾರಿ&75ರಲ್ಲಿ ಶನಿವಾರ ಮಧ್ಯರಾತ್ರಿ ನೆಲಮಂಗಲ ಕಡೆಯಿಂದ ವೇಗವಾಗಿ ಬಂದ ಕಾರು ಹೈವೇಯಿಂದ ಹಾರಿ ಎಡ ಭಾಗದ ಸರ್ವೀಸ್​ ರಸ್ತೆಗೆ ಬಿದ್ದು, ನಂತರ ಅಡಕೆ ತೋಟಕ್ಕೆ ನುಗ್ಗಿ, ಬಳಿಕ ಜಮೀನು ಪಕ್ಕದ ರಾಜಕಾಲುವೆಗೆ ಬಿದ್ದಿದೆ.
ಕಾರಿನಲ್ಲಿದ್ದ ರಮೇಶ್​ ಮತ್ತು ಅಜ್ಮಲ್​ರಷೀದ್​ ಗಂಭೀರ ಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರು ಅಡಕೆ ತೋಟಕ್ಕೆ ನುಗ್ಗಿದ ಪರಿಣಾಮ 21ಕ್ಕೂ ಹೆಚ್ಚು ಅಡಕೆ ಮರಗಳು ಮುರಿದು ಬಿದ್ದಿವೆ ಎಂದು ತೋಟದ ಮಾಲೀಕ ಗುಡ್ಡತಿಮ್ಮಯ್ಯ ಕುದೂರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಕಾರು ಕೇರಳ ನೋಂದಣಿ ಸಂಖ್ಯೆ ಹೊಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net