ಬೆಂಕಿಗೆ ಕಾರು ಆಹುತಿ

ಮಾಗಡಿ ತಾಲೂಕು ಸೋಲೂರು ಹೋಬಳಿ ಗುಡೇಮಾರನಹಳ್ಳಿ ಹ್ಯಾಂಡ್​ ಪೋಸ್ಟ್​ನ ರಾಷ್ಟ್ರೀಯ ಹೆದ್ದಾರಿ&75ರಲ್ಲಿ ಕಾರು ಬೆಂಕಿಗೆ ಆಹುತಿಯಾಗಿರುವುದು.
ಮಾಗಡಿ ತಾಲೂಕು ಸೋಲೂರು ಹೋಬಳಿ ಗುಡೇಮಾರನಹಳ್ಳಿ ಹ್ಯಾಂಡ್​ ಪೋಸ್ಟ್​ನ ರಾಷ್ಟ್ರೀಯ ಹೆದ್ದಾರಿ&75ರಲ್ಲಿ ಕಾರು ಬೆಂಕಿಗೆ ಆಹುತಿಯಾಗಿರುವುದು.
Published on
ಕುದೂರು: ಬೆಂಗಳೂರು&ಮಂಗಳೂರು ರಾಷ್ಟ್ರೀಯ ಹೆದ್ದಾರಿ&75ರ ಗುಡೇಮಾರನಹಳ್ಳಿ ಹ್ಯಾಂಡ್​ ಪೋಸ್ಟ್​ ಬಳಿ ಶುಕ್ರವಾರ ರಾತ್ರಿ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ತಣವೇ ಪ್ರಯಾಣಿಕರು ಕೆಳಗಿಳಿದ ಕಾರಣ ಅದೃಷ್ಟವಶಾತ್​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಕುಣಿಗಲ್​ ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಎಚ್ಚೆತ್ತುಕೊಂಡ ಸವಾರರು ಕಾರಿನಿಂದ ಹೊರಬಂದಿದ್ದಾರೆ. ನೋಡನೋಡುತ್ತಿದ್ದಂತೆ ಬೆಂಕಿ ಇಡೀ ಕಾರನ್ನು ಆವರಿಸಿಕೊಂಡಿತು. ಮಾಹಿತಿ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ, ಬೆಂಕಿ ನಂದಿಸಿದರಾದರೂ ಅಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟುಹೋಗಿತ್ತು.
ಕುದೂರು ಪೊಲೀಸರು ಸ್ಥಳ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net