ಗುರುವಾರ ರಾತ್ರಿ 7&30ರ ಸಮಯದಲ್ಲಿ ಮನೆ ಮುಂದೆ ಕಟ್ಟಿದ್ದ ಕರುವನ್ನು ಚಿರತೆ ಎಳೆದುಕೂಂಡು ಹೋಗಿ ತಿಂದಿದೆ ಎಂದು ಮಾಲೀಕ ರಾಜಶೇಖರ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಸುಗ್ಗನಹಳ್ಳಿ ಸಮೀಪದ ಹೊನ್ನಾಪುರದ ಶ್ರೀಧರ್ ಅವರ ಮೇಕೆಯನ್ನು ಚಿರತೆ ಹೊತ್ತೊಯ್ದ ಟನೆ ಮಾಸುವ ಮುನ್ನವೇ ಟನೆ ನಡೆದಿದೆ. ಹೋಬಳಿಯ ಹುಲಿಕಲ್, ಮಲ್ಲಪ್ಪನಹಳ್ಳಿ, ಬೀಚನಹಳ್ಳಿ, ಹೊನ್ನಾಪುರ ಸೇರಿದಂತೆ ವಿವಿಧ ಕಡೆಗಳಲ್ಲಿ ಹಗಲಿನ ವೇಳೆಯಲ್ಲಿಯೂ ಚಿರತೆ ಕಾಣಿಸಿಕೊಳ್ಳುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ಚಿರತೆ ಹಾವಳಿ ತಡೆಗೆ ಗ್ರಾಮಗಳಲ್ಲಿ ಅರಣ್ಯ ಅಧಿಕಾರಿಗಳು ಬೋನು ಅಳವಡಿಸಿದ್ದಾರೆ.