ಚಿರತೆ ದಾಳಿಗೆ ಕರು ಬಲಿ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಕೈಲಾಂಚ: ರಾಮನಗರ ತಾಲೂಕು ಕವಣಾಪುರ ಗ್ರಾಮದ ಸಿದ್ದರಾಜು ಅವರ ಕರು ಚಿರತೆ ದಾಳಿಗೆ ಬಲಿಯಾಗಿದೆ.
ರೈತ ಸಿದ್ದರಾಜು ಅವರು ಶುಕ್ರವಾರ ಕೊಟ್ಟಿಗೆಯಲ್ಲಿ ಕರುವನ್ನು ಕಟ್ಟಿಹಾಕಿದ್ದರು. ಆದರೆ ತಡರಾತ್ರಿ ಕರುವಿನ ಮೇಲೆ ಚಿರತೆ ದಾಳಿ ಮಾಡಿದೆ. ಬೇರೆ ಹಸುಗಳು ಗಾಬರಿಗೊಳಗಾಗಿ ಅತ್ತಿಂದಿತ್ತ ಓಡಾಡುತ್ತಿದ್ದ ಶಬ್ದ ಕೇಳಿ ಮನೆಯವರು ಬಾಗಿಲು ತೆಗೆದು ನೋಡಿದಾಗ ಚಿರತೆ ಸ್ಥಳದಿಂದ ಕಾಲ್ಕಿತ್ತಿದೆ.
ದನದ ಕೊಟ್ಟಿಗೆಗೆ ತೆಂಗಿನ ಗರಿ ಕಟ್ಟಿದ್ದ ಕಾರಣ ಚಿರತೆ ಸುಲಭವಾಗಿ ಒಳನುಗ್ಗಿ ಕರುವನ್ನು ಬಲಿ ಪಡೆದಿದೆ ಎನ್ನಲಾಗಿದ್ದು, ಅರಣ್ಯ ಇಲಾಖೆಗೆ ಸಿದ್ದರಾಜು ದೂರು ನೀಡಿದ್ದಾರೆ. ಬನ್ನಿಕುಪ್ಪೆ ಪಶು ಆಸ್ಪತ್ರೆಯ ವೈದ್ಯಾಧಿಕಾರಿಗಳು ಕರುವಿನ ಮರಣೋತ್ತರ ಪರೀೆ ನಡೆಸಿದರು.
ಗ್ರಾಮ ಪಕ್ಕದ ಗುಡ್ಡದಲ್ಲಿ ಚಿರತೆಗಳಿದ್ದು, ಸಂಜೆ ಹಾಗೂ ಬೆಳಗಿನ ಸಮಯ ಗ್ರಾಮದೊಳಗೆ ನುಗ್ಗುತ್ತಿವೆ. ರಾತ್ರಿ ಮನೆಯಿಂದ ಹೊರಬರದಂತಹ ಸ್ಥಿತಿ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ಬೋನು ಇಟ್ಟು, ಅವುಗಳನ್ನು ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net