ಕ್ಯಾಂಪಸ್‌ನಲ್ಲಿಯೇ 650 ಹಾಸಿಗೆಗಳ ಸಾಮರ್ಥ್ಯದ ಜನರಲ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ವಿವಿ ಮತ್ತು ಆಸ್ಪತ್ರೆ ನೌಕರರಿಗೆ ವಸತಿ ಗೃಹಗಳು, ಕಾಲೇಜು ಸಭಾಂಗಣ, ಕ್ರೀಡಾ ಸಂಕೀರ್ಣ ಸೇರಿದಂತೆ ಇತರ ಮೂಲಸೌಕರ್ಯ ಒಳಗೊಂಡ ಯೋಜನೆಗೆ ಟೆಂಡರ್ ಕರೆಯಲು ಸಿದ್ಧತೆ ನಡೆಯುತ್ತಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುವಾರ್ ಅವರು ಈ ಕುರಿತು ಸೂಚನೆ ನೀಡಿದ್ದಾರೆ, ವಿವಿ ಸಿಂಡಿಕೇಟ್ ಸಭೆಯೂ ಒಪ್ಪಿದೆ. ಸದ್ಯ ವಿವಿ ಬಿಡುಗಡೆ ವಾಡಿರುವ 600 ಕೋಟಿ ವೆಚ್ಚದಲ್ಲಿ ಆಡಳಿತ ಭವನ ಮತ್ತು ವೈದ್ಯಕೀಯ ಕಾಲೇಜು ವಾತ್ರ ನಿರ್ಮಾಣವಾಗುತ್ತಿದೆ. ಹಾಗಾಗಿ, ವಿವಿ ಕೈಗೊಂಡಿರುವ ಕ್ರಮಗಳ ಕುರಿತು ಸಂಸದ ಡಾ. ಸಿ.ಎನ್. ಮಂಜುನಾಥ್ ಅವರಿಗೆ ಪತ್ರ ಬರೆಯಲಾಗುವುದು ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಸಿ. ಭಗವಾನ್ ಮಾಹಿತಿ ನೀಡಿದ್ದಾರೆ.