ಬಿಡದಿಗೆ ₹75.82 ಲ ಉಳಿತಾಯ ಬಜೆಟ್​

ಬಿಡದಿಯ ಖಾಸಗಿ ರೆಸಾರ್ಟ್​ನಲ್ಲಿ ಪುರಸಭಾ ಅಧ್ಯೆ ಭಾನುಪ್ರಿಯಾ ಸಂಪತ್​ಕುಮಾರ್​ ಆಯವ್ಯಯ ಮಂಡನೆ ಮಾಡಿದರು.
ಬಿಡದಿಯ ಖಾಸಗಿ ರೆಸಾರ್ಟ್​ನಲ್ಲಿ ಪುರಸಭಾ ಅಧ್ಯೆ ಭಾನುಪ್ರಿಯಾ ಸಂಪತ್​ಕುಮಾರ್​ ಆಯವ್ಯಯ ಮಂಡನೆ ಮಾಡಿದರು.
Published on
ಬಿಡದಿ: ಪಟ್ಟಣದ ಖಾಸಗಿ ರೆಸಾರ್ಟ್​ನಲ್ಲಿ 2026&27ನೇ ಸಾಲಿನ ಪುರಸಭೆ ಬಜೆಟ್​ ಮಂಡಿಸಲಾಗಿದ್ದು, ಅಧ್ಯೆ ಭಾನುಪ್ರಿಯಾ ಸಂಪತ್​ಕುಮಾರ್​ 75.82 ಲ ರೂಪಾಯಿ ಉಳಿತಾಯ ಬಜೆಟ್​ ಮಂಡಿಸಿದರು.
ಅಧ್ಯರಾದ ಬಳಿಕ ಭಾನುಪ್ರಿಯಾ ಮಂಡಿಸಿದ ಚೊಚ್ಚಲ ಬಜೆಟ್​ ಇದಾಗಿದ್ದು, ಸರ್ವ ಸದಸ್ಯರ ಸಹಕಾರ ಕೋರಿದ ಕಾರಣ ಯಾವುದೇ ಚರ್ಚೆ ಮಾಡದೆ ಸರ್ವ ಸದಸ್ಯರು ಸಹಮತ ಸೂಚಿಸಿದರು. ಒಟ್ಟು 36.75 ಕೋಟಿ ಆದಾಯ ನಿರೀೆ ಮಾಡಿದ್ದು, 35.99 ಕೋಟಿ ವೆಚ್ಚ ತಗಲುವ ಅಂದಾಜು ಮಾಡಲಾಗಿದೆ. 16ನೇ ಹಣಕಾಸು ಯೋಜನೆ ಅಡಿಯಲ್ಲಿ 3.66 ಕೋಟಿ ಹಂಚಿಕೆ ಮಾಡಲಾಗಿ, ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.
16ನೇ ಹಣಕಾಸಿನ ಅನುದಾನ
ಎಸ್​ಎ್​ಸಿ ವಿಶೇಷ ಅನುದಾನದಲ್ಲಿ 60 ಲ ರೂ.ಬಿಡುಗಡೆ ಮಾಡುವ ನಿರೀೆ ಇಟ್ಟುಕೊಳ್ಳಲಾಗಿದೆ. ಎಸ್​ಎ್​ಸಿ ಮುಕ್ತನಿಧಿ ಯೋಜನೆಯಡಿಯಲ್ಲಿ 9 ಲ ಅನುದಾನವನ್ನು ಸರ್ಕಾರದಿಂದ ಹಂಚಿಕೆ ಮಾಡಲಾಗಿದೆ. ಎಸ್​ಎ್​ಸಿ/ ಟಿಎಸ್​ಪಿ ಯೋಜನೆಗೆ 3 ಲ ಅನುದಾನ ಬಿಡುಗಡೆ ಮಾಡುವ ನಿರೀೆ ಇಟ್ಟುಕೊಳ್ಳಲಾಗಿದೆ.
ಪಾರ್ಕ್​ಗಳ ಅಭಿವೃದ್ಧಿಗೆ ಒತ್ತು
ರಸ್ತೆ ಬದಿ ಅಲಂಕಾರಿಕ ಗಿಡಗಳು ಹಾಗೂ ಪಾರ್ಕ್​ಗಳ ಅಭಿವೃದ್ಧಿಗೆ ಬಜೆಟ್​ನಲ್ಲಿ ಒತ್ತು ನೀಡಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಗಿಡಗಳನ್ನು ನೆಟ್ಟು ರಸ್ತೆ ಸೌಂದರೀಕರಣಗೊಳಿಸಲು ಹಾಗೂ ಪಾರ್ಕ್​ಗಳ ನಿರ್ವಹಣೆಗಾಗಿ 10 ಲ ರೂಪಾಯಿ ಮೀಸಲಿಡಲಾಗಿದೆ. ಪಾರ್ಕ್​ಗಳ ಅಭಿವೃದ್ಧಿಗೆ ತಲಾ 1 ಕೋಟಿ ಮೀಸಲಿರಿಸಲಾಗಿದೆ. ಉಳಿದಂತೆ ಪುರಸಭೆ ಹೊಸ ಕಟ್ಟಡ, ವಾಣಿಜ್ಯ ಸಂಕೀರ್ಣ, ಪ್ರಯಾಣಿಕರ ತಂಗುದಾಣ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳಿಗೆ 4 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಪುರಸಭಾ ವ್ಯಾಪ್ತಿಯಲ್ಲಿ ಯೋಗಶಾಲೆ, ತರಬೇತಿ ಶಾಲೆ ನಿರ್ಮಾಣಕ್ಕಾಗಿ 75 ಲ ಹಾಗೂ ಶವ ಸಂಸ್ಕಾರ ಸಹಾಯಧನಕ್ಕಾಗಿ 5 ಲಗಳನ್ನು ಮೀಸಲಿಡಲಾಗಿದೆ.
ಉಪಾಧ್ಯೆ ಆಯಿಷಾ ಖಲೀಲ್​, ಸ್ಥಾಯಿ ಸಮಿತಿ ಅಧ್ಯ ದೇವರಾಜು, ಮಾಜಿ ಅಧ್ಯ ಹರಿಪ್ರಸಾದ್​ ಸದಸ್ಯರಾದ ನಾಗರಾಜು, ರಾಕೇಶ್​ಕುಮಾರ್​, ಸೋಮಶೇಖ, ನವೀನ್​ಕುಮಾರ್​, ಹೊಂಬಯ್ಯ, ರಾಮಚಂದ್ರಯ್ಯ, ಮನು, ಪದ್ಮಾವತಿ ಬೆಟ್ಟಸ್ವಾಮಿ, ಮಂಜುಳಾ, ಲಲಿತಾ, ಮಹಿಮಾ, ಸರಸ್ವತಮ್ಮ, ಯಲ್ಲಮ್ಮ, ಮುಖ್ಯಾಧಿಕಾರಿ ಮೀನಾ ಉಪಸ್ಥಿತರಿದ್ದರು.
36 ಕೋಟಿ ಆದಾಯದ ನಿರೀೆ
ಪುರಸಭೆಗೆ ಆದಾಯ ಮೂಲವಾಗಿರುವ ಆಸ್ತಿ ತೆರಿಗೆಯಿಂದ 800 ಲ, ಖಾತಾ ವರ್ಗಾವಣೆ, ಖಾತಾ ನಕಲು ಹಾಗೂ ಇತರ ಆದಾಯ ಮೂಲಗಳಿಂದ 39 ಲ, ನೂತನ ಬಡಾವಣೆಗಳ ಅಭಿವೃದ್ಧಿ ಶುಲ್ಕ 275 ಲ, ವಾಣಿಜ್ಯ ಸಂಕೀರ್ಣಗಳ ಬಾಡಿಗೆ 15 ಲ ರೂ., ಜಾಹೀರಾತು ಶುಲ್ಕದಿಂದ 10 ಲ ರೂ., ಅಂಗಡಿ ಮಳಿಗೆಗಳಿಂದ ವ್ಯಾಪರ ಪರವಾನಗಿಯಿಂದ 60 ಲ, ಹೊಸ ಕಟ್ಟಡಗಳ ಪರವಾನಗಿಯಿಂದ 65 ಲ, ರಸ್ತೆ ಅಗೆತದಿಂದ 800 ಲ ರೂ.ಗಳ ಆದಾಯವನ್ನು ನಿರೀೆ ಮಾಡಲಾಗಿದೆ.
ವಿವಿಧ ಯೋಜನೆಗೆ ಮೀಸಲಿಟ್ಟ ಹಣ
ಕ್ರೀಡೆ, ಸಾಂಸತಿಕ, ಸಾಹಿತ್ಯ ಚಟುವಟಿಕೆಗಳ ಪೋತ್ಸಾಹಕ್ಕಾಗಿ 25 ಲ ರೂ., ಹೊರ ಗುತ್ತಿಗೆ ಕಾರ್ಮಿಕರ ವೇತನಕ್ಕಾಗಿ 50 ಲ, ಪೌರಕಾರ್ಮಿಕರ ಸುರತಾ ಸಾಮಗ್ರಿ ಖರೀದಿಗಾಗಿ 10 ಲ, ಪೌರ ಕಾರ್ಮಿಕರ ಬೆಳಗಿನ ಉಪಾಹಾರಕ್ಕಾಗಿ 12 ಲ, ಹೊರಗುತ್ತಿಗೆ ಚಾಲಕರು, ಲೋಡರ್ಸ್​, ಚಾಲಕರ ವೇತನಕ್ಕಾಗಿ 45 ಲ, ಮನೆಯ ಕಸ ವಿಂಗಡಣೆಯ ಕಸದ ಬುಟ್ಟಿ ಖರೀದಿಗೆ 10 ಲ, ಪೌರ ಕಾರ್ಮಿಕರ ಆರೋಗ್ಯ ವಿಮೆಗಾಗಿ 25 ಲ, ನತ್ಯಾಜ್ಯ ನಿರ್ವಹಣೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು 15 ಲ, ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಎಬಿಸಿ ಕಾರ್ಯಕ್ರಮಕ್ಕಾಗಿ 45 ಲ ನ ತ್ಯಾಜ್ಯ ನಿರ್ವಹಣಾ ಟಕಗಳ ನಿರ್ವಹಣೆಗಾಗಿ 150 ಲ, ವಿದ್ಯುತ್​ ಚಿತಾಗಾರ ನಿರ್ವಹಣೆ ಹಾಗೂ ಅಭಿವೃದ್ಧಿಗಾಗಿ 1.50 ಕೋಟಿ ರೂ., ಪಾದಚಾರಿ ಮಾರ್ಗ ಅಭಿವೃದ್ಧಿಗೆ 8.50 ಕೋಟಿ ರೂ., ಕೊಳವೆ ಬಾವಿ, ಶುದ್ಧ ಕುಡಿಯುವ ನೀರಿನ ಟಕ ನಿರ್ವಹಣೆಗೆ 4.20 ಕೋಟಿ ರೂ. ಮೀಸಲಿಡಲಾಗಿದೆ.
ವಿದ್ಯಾರ್ಥಿ ವೇತನ ನೀಡಿ
ಬಜೆಟ್​ ನಂತರ ನಡೆದ ಚರ್ಚೆಯಲ್ಲಿ ಎಸ್​.ಎ್​.ಸಿ ಮುಕ್ತ ನಿಧಿಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ತಾರತಮ್ಯ ಮಾಡದೆ ನೀಡಿ ಎಂದು 4ನೇ ವಾರ್ಡ್​ ಜೆಡಿಎಸ್​ ಸದಸ್ಯ ಕೆ.ಎನ್​. ರಮೇಶ್​ ತಾಕೀತು ಮಾಡಿದರು. ನಾವು ಸಹಿ ಹಾಕಿ ಕಳುಹಿಸುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡದೆ ಕಡೆಗಣನೆ ಮಾಡಲಾಗುತ್ತದೆ, ಯಾವುದೇ ತಾರತಮ್ಯ ಮಾಡಬೇಡಿ ಎಂದು ಮನವಿ ಮಾಡಿದರು.
"

ಪುರಸಭಾ ವ್ಯಾಪ್ತಿಯಲ್ಲಿನ ವಾರ್ಡ್​ಗಳ ಅಭಿವೃದ್ಧಿಗೆ ಬಜೆಟ್​ನಲ್ಲಿ ಒತ್ತು ನೀಡಲಾಗಿದೆ. ಪಾರ್ಕ್​ ಹಾಗೂ ಸಾಂಸತಿಕ ಚಟುವಟಿಕೆಗಳಿಗೆ ಒತ್ತು ನೀಡಲಾಗಿದೆ. ಸಂಸದ ಡಾ.ಸಿ.ಎನ್​.ಮಂಜುನಾಥ್​, ಶಾಸಕ ಬಾಲಕೃಷ್ಣ, ಮಾಜಿ ಶಾಸಕ ಮಂಜುನಾಥ್​ ಹಾಗೂ ಸರ್ವ ಸದಸ್ಯರ ಸಹಕಾರದಿಂದ ಬಜೆಟ್​ ಮಂಡಿಸಲಾಗಿದೆ.

"

ಬಜೆಟ್​ನಲ್ಲಿ ಯಾವುದೇ ಜನಪರ ಯೋಜನೆ ೂಷಣೆ ಮಾಡಿಲ್ಲ. ಸರ್ಕಾರದಿಂದ ಬರುವ ಅನುದಾನವನ್ನು ರಸ್ತೆ ಚರಂಡಿಗೆ ಮೀಸಲಿಟ್ಟಿದ್ದಾರೆ. ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಯಾವುದೇ ಹೊಸ ಯೋಜನೆ ೂಷಿಸಿಲ್ಲ. ಹೊಸ ಕಲ್ಪನೆಯೊಂದಿಗೆ ಯೋಜನೆಗಳನ್ನು ರೂಪಿಸಿ ಬಜೆಟ್​ ಮಂಡಿಸಬೇಕಿತ್ತು. ಇದೊಂದು ನಿರಾಶದಾಯಕ ಬಜೆಟ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net