ಚನ್ನಪಟ್ಟಣಕ್ಕೆ ₹2.76 ಕೋಟಿ ಉಳಿತಾಯ ಬಜೆಟ್​

ಚನ್ನಪಟ್ಟಣ ನಗರಸಭೆ ಸಭಾಂಗಣದಲ್ಲಿ ಅಧ್ಯ ಬಿ.ಎಂ.ನಾಗೇಶ್​ ಪರವಾಗಿ ಲೆಕ್ಕ ಪರೀಕ ಚಂದ್ರು ಬಜೆಟ್​ ಮಂಡಿಸಿದರು. ಉಪಾಧ್ಯ ಲೋಕೇಶ್​, ಸ್ಥಾಯಿ ಸಮಿತಿ ಅಧ್ಯ ಕೋಟೆ ಚಂದ್ರು, ಪೌರಾಯುಕ್ತ ಮಹೇಂದ್ರ ಸೇರಿ ನಗರಸಭೆ ಸದಸ್ಯರು, ಅಧಿಕಾರಿಗಳು ಇದ್ದರು.
ಚನ್ನಪಟ್ಟಣ ನಗರಸಭೆ ಸಭಾಂಗಣದಲ್ಲಿ ಅಧ್ಯ ಬಿ.ಎಂ.ನಾಗೇಶ್​ ಪರವಾಗಿ ಲೆಕ್ಕ ಪರೀಕ ಚಂದ್ರು ಬಜೆಟ್​ ಮಂಡಿಸಿದರು. ಉಪಾಧ್ಯ ಲೋಕೇಶ್​, ಸ್ಥಾಯಿ ಸಮಿತಿ ಅಧ್ಯ ಕೋಟೆ ಚಂದ್ರು, ಪೌರಾಯುಕ್ತ ಮಹೇಂದ್ರ ಸೇರಿ ನಗರಸಭೆ ಸದಸ್ಯರು, ಅಧಿಕಾರಿಗಳು ಇದ್ದರು.
Published on
ಚನ್ನಪಟ್ಟಣ: ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಬುಧವಾರ ಆಯವ್ಯಯ ಸಭೆಯಲ್ಲಿ 2026& 27ನೇ ಸಾಲಿಗೆ 2.76 ಕೋಟಿ ಉಳಿತಾಯ ಬಜೆಟ್​ಅನ್ನು ಅಧ್ಯ ಬಿ.ಎಂ.ನಾಗೇಶ್​ ಪರವಾಗಿ ಲೆಕ್ಕ ಪರೀಕ ಚಂದ್ರು ಮಂಡಿಸಿದರು. ಕೆಲ ವಿಚಾರಕ್ಕೆ ಚರ್ಚೆ ನಡೆಸಿದ ನಂತರ ಪ್ರಸಕ್ತ ಸಾಲಿನ ಬಜೆಟ್​ಗೆ ಅನುಮೋದನೆ ಪಡೆಯಲಾಯಿತು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳು, ತೆರಿಗೆ ಸಂಗ್ರಹಗಳಿಂದ ಹೆಚ್ಚಿನ ಧನ ಸಹಾಯ ನಿರೀಸಿರುವ ಪ್ರಸಕ್ತ ಸಾಲಿನಲ್ಲಿ ವಿವಿಧ ಮೂಲಗಳಿಂದ ಒಟ್ಟು 72.35 ಕೋಟಿ ರೂ. ಆದಾಯ ನಿರೀಸಲಾಗಿದ್ದು, 87.90 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. 2026&27ನೇ ಸಾಲಿನಲ್ಲಿ ರಾಜಸ್ವ ಸ್ವೀಕೃತಿಗಳು 56.34ಕೋಟಿ, ರಾಜಸ್ವ ಪಾವತಿಗಳು 38.53 ಕೋಟಿ, ಬಂಡವಾಳ ಸ್ವೀಕೃತಿ 23.25 ಕೋಟಿ, ಬಂಡವಾಳ ಪಾವತಿಗಳು 55.58 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಅಸಾಧಾರಣ ಸ್ವೀಕೃತಿಗಳು 15.73. ಕೋಟಿ, ಅಸಾಧಾರಣ ಪಾವತಿಗಳು 17.04 ಕೋಟಿ ಎಂದು ಅಂದಾಜಿಸಲಾಗಿದೆ. ಪ್ರಾರಂಭಿಕ ಶುಲ್ಕ 18.59 ಕೋಟಿ ರೂ. ಇದ್ದು, ಎಲ್ಲ ಖರ್ಚು ಕಳೆದು 2.76 ಕೋಟಿ ಉಳಿಕೆಯನ್ನು ತೋರಿಸಲಾಗಿದೆ.
72 ಕೋಟಿ ಆದಾಯ ನಿರೀಕ್ಷೆ
ಆಸ್ತಿ ತೆರಿಗೆಯಿಂದ 6 ಕೋಟಿ ರೂ., ಆಸ್ತಿ ತೆರಿಗೆ ಮೇಲೆ ಸಂಗ್ರಹಿಸಿದ ದಂಡ 3 ಕೋಟಿ ರೂ., ಆಸ್ತಿ ತೆರಿಗೆ ಜತೆಯಲ್ಲಿ ಸಂಗ್ರಹಿಸುವ ಕರಗಳಿಂದ 1.40 ಕೋಟಿ ರೂ., ವಾಣಿಜ್ಯ ಮಳಿಗೆಗಳ ಬಾಡಿಗೆ ಶುಲ್ಕ 50 ಲ, ಬ್ಯಾಂಕ್​ ಬಡ್ಡಿ 40ಲ , ಕಟ್ಟಡ ಪರವಾನಿಗೆ ಶುಲ್ಕ 36.5 ಲ, ಅಭಿವೃದ್ಧಿ ಶುಲ್ಕ 10 ಲ , 15 ಮತ್ತು 16 ನೇ ಹಣಕಾಸು ಯೋಜನೆ ಅನುದಾನ 9 ಕೋಟಿ, ಎಸ್​.ಎಫ್​.ಸಿ. ಮುಕ್ತ ನಿಧಿ ಅನುದಾನ (ಎಸ್​ಸಿಪಿ. ಟಿಎಸ್​ಪಿ) 19 ಲ , ಎಸ್​.ಎಫ್​.ಸಿ. ವೇತನ ಅನುದಾನ 1.30 ಕೋಟಿ, ಎಸ್​ಎಫ್​ಸಿ ಕುಡಿಯುವ ನೀರಿನ ಅನುದಾನ 10 ಲ , ಎಸ್​.ಎಫ್​.ಸಿ. ವಿದ್ಯುತ್​ ಅನುದಾನ 2.70 ಕೋಟಿ, ಸ್ವಚ್ಛ ಭಾರತ್​ ಅನುದಾನ 1.90 ಕೋಟಿ, ಎಸ್​.ಎಫ್​.ಸಿ. ವಿಶೇಷ ಅನುದಾನ 20.07 ಕೋಟಿ ರೂ. ಸೇರಿದಂತೆ ವಿವಿಧ ಮೂಲಗಳಿಂದ 72.08 ಕೋಟಿ ರೂ. ಆದಾಯ ನಿರೀಸಲಾಗಿದೆ.
ಖರ್ಚಿನ ಲೆಕ್ಕವೇನು?
ನಗರದ ಸಮಗ್ರ ಅಭಿವೃದ್ಧಿ ಮತ್ತು ಜನತೆಗೆ ಉತ್ತಮ ಮೂಲಸೌಕರ್ಯ ಒದಗಿಸುವ ಉದ್ದೇಶದಿಂದ ಮಾನವ ಸಂಪನ್ಮೂಲ ವೆಚ್ಚ 7 ಕೋಟಿ ರೂ., ವಾಹನಗಳ ಬಾಡಿಗೆ ಮತ್ತು ಇತರ 35 ಲ, ಕಾನೂನು ಮತ್ತು ವೃತ್ತಿಪರ ವೆಚ್ಚಗಳು 48 ಲ , ಸದಸ್ಯರ ಗೌರವ ಧನ ಹಾಗೂ ಕೌನ್ಸಿಲ್​ ವೆಚ್ಚ 30 ಲ , ಜಾಹೀರಾತು ವೆಚ್ಚ 8 ಲ, ಬೀದಿ ದೀಪಗಳ ನಿರ್ವಹಣೆ ಮತ್ತು ಇತರ 60 ಲ , ಬೀದಿ ದೀಪಗಳ ವಿದ್ಯುತ್​ ಶುಲ್ಕ 2.75 ಕೋಟಿ, ರಸ್ತೆ ಚರಂಡಿ ಇತರ ನಿರ್ವಹಣೆಗಾಗಿ 10 ಲ , ಬೀದಿನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆ, ಆಶ್ರಯತಾಣಗಳ ನಿರ್ಮಾಣ 1.40 ಕೋಟಿ ರೂ., ನ ತ್ಯಾಜ್ಯ ವಿಲೇವಾರಿಗೆ 50 ಲ , ಹೊರಗುತ್ತಿಗೆ ಸೇವೆಗಾಗಿ 1.10 ಕೋಟಿ ರೂ. ಸೇರಿದಂತೆ ಹಲವಾರು ಖರ್ಚಿನ ಲೆಕ್ಕಾಚಾರವನ್ನು ಬಜೆಟ್​ನಲ್ಲಿ ತೋರಿಸಲಾಗಿದೆ.
ವಿಶೇಷ ಘೋಷಣೆಗಳು?
ನಗರ ವ್ಯಾಪ್ತಿಯಲ್ಲಿ ಇರುವ ಶೌಚಗೃಹಗಳ ದುರಸ್ತಿಗೆ ಆದ್ಯತೆ ನೀಡುವ ಜತೆಗೆ 40 ಲ ವೆಚ್ಚದಲ್ಲಿ ಸ್ಯಾನಿಟರಿ ನ್ಯಾಪ್​ಕೀನ್​ ವೆಂಡಿಗ್​ ಮಷಿನ್​ ಆಳವಡಿಕೆ, ುಟ್​ಪಾತ್​ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು 60 ಲ ವೆಚ್ಚದಲ್ಲಿ ಸ್ಲಾಟರ್​ಹೌಸ್​ ನಿರ್ಮಾಣ, ಪೌರ ಕಾರ್ಮಿಕರ ಪ್ರವಾಸಕ್ಕೆ 90 ಲ, ುಡ್​ಕೋರ್ಟ್​ ನಿರ್ಮಾಣ, ನಗರದ ವ್ಯಾಪ್ತಿಯ ರಸ್ತೆಗಳ ಮಧ್ಯೆ ಗಿಡ ನೆಡುವ ಜತೆಗೆ, ಬೊಂಬೆಗಳ ಪ್ರತಿಕೃತಿ ನಿರ್ಮಾಣ ಸೇರಿದಂತೆ ಹೊಸ ಯೋಜನೆಗಳ ಬಗ್ಗೆಯೂ ಬಜೆಟ್​ನಲ್ಲಿ ಉಲ್ಲೆಖಿಸಲಾಗಿದೆ.
ಅನುಷ್ಠಾನಗೊಳ್ಳಲಿ!
ಬಜೆಟ್​ ವಿಚಾರವಾಗಿ ಸಭೆಯಲ್ಲಿ ವಿಸತ ಚರ್ಚೆ ನಡೆಯಿತು. ಈ ವೇಳೆ ಕೆಲಸದಸ್ಯರು ಬಜೆಟ್​ನಲ್ಲಿ ಕೆಲ ಯೋಜನೆಗಳನ್ನು ಪ್ರತಿಬಾರಿಯೂ ಉಲ್ಲೆಖಿಸಲಾಗುತ್ತದೆ. ಆದರೆ, ಅವುಗಳ ಅನುಷ್ಠಾನವೇ ಆಗುವುದಿಲ್ಲ. ಕೇವಲ ತೋರಿಕೆಗಾಗಿ ವಿಷಯಗಳನ್ನು ಸೇರಿಸುವುದು ಬೇಡ ಅವುಗಳು ಪ್ರಾಮಾಣಿಕವಾಗಿ ಅನುಷ್ಠಾನಗೊಳಲಿ ಎಂದು ಸಲಹೆ ನೀಡಿದರು. ನಗರದ ಎಲ್ಲ ವಾರ್ಡ್​ಗಳಲ್ಲಿ ವಾರ್ಡ್​ ಹೆಸರು, ರಸ್ತೆ, ಸದಸ್ಯರ ಮಾಹಿತಿ ನೀಡುವ ಬೋರ್ಡ್​ಗಳನ್ನು ಅಳವಡಿಸಿ, ಬೀದಿನಾಯಿಗಳ ಉಪಟಳಕ್ಕೆ ಕ್ರಮಕೈಗೊಳ್ಳಿ, ುಟ್​ಪಾತ್​ ಸಮಸ್ಯೆ ನಿವಾರಿಸಿ. ಹೀಗೆ ಹಲವಾರು ಸಲಹೆಗಳನ್ನು ಸದಸ್ಯರು ನೀಡಿದರು.
ಸಭೆಯಲ್ಲಿ ನಗರಸಭೆ ಅಧ್ಯ ಬಿ.ಎಂ.ನಾಗೇಶ್​, ಉಪಾಧ್ಯ ಲೋಕೇಶ್​, ಸ್ಥಾಯಿ ಸಮಿತಿ ಅಧ್ಯ ಕೋಟೆ ಚಂದ್ರು, ಪೌರಾಯುಕ್ತ ಮಹೇಂದ್ರ ಸೇರಿ ನಗರಸಭೆ ಸದಸ್ಯರು, ಅಧಿಕಾರಿಗಳು ಇದ್ದರು.
ಸಾಮಾನ್ಯ ಸಭೆಯ ಜಟಾಪಟಿ
ನಗರಸಭೆಯ ಸಾಮಾನ್ಯ ಸಭೆ ಹಾಗೂ ಬಜೆಟ್​ ಎರಡನ್ನೂ ಒಂದೇ ಬಾರಿಗೆ ನಡೆಸಲಾಯಿತು. ಬಜೆಟ್​ಗೂ ಮುನ್ನ ಸಾಮಾನ್ಯ ಸಭೆ ಆರಂಭವಾಯಿತು. ಪ್ರಾರಂಭದಲ್ಲಿಯೇ ಬಿಜೆಪಿ ಸದಸ್ಯೆ ಸುಮಾ ರವೀಶ್​ ನಗರಸಭೆ ಆಡಳಿತ ವೈಖರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನಗರದ ಎಲ್ಲ ವಾರ್ಡ್​ಗೂ ಅನುದಾನ ನೀಡಿ ಕಾಮಗಾರಿಗಳು ಆರಂಭವಾಗಿವೆ. ಆದರೆ, ನಮ್ಮ 15 ವಾರ್ಡ್​ನಲ್ಲಿ ಏಕೆ ಆರಂಭವಾಗಿಲ್ಲ. ಇದಕ್ಕೆ ಉತ್ತರ ಕೊಟ್ಟು ಸಭೆ ಆರಂಭಿಸಿ ಎಂದು ಪಟ್ಟು ಹಿಡಿದರು. ಇನ್ನು ಜಲಮಂಡಳಿ ಹಾಗೂ ಬೀದಿದೀಪಗಳ ಕಳಪೆ ನಿರ್ವಹಣೆ ಬಗ್ಗೆ ಬಹುತೇಕ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್​ನ ಸ್ವಪದವರ ಕಿತ್ತಾಟ ನಡೆಸಿದ್ದು ಸಹ ವಿಶೇಷವಾಗಿತ್ತು. ಸಭೆಗೆ ಕುಡಿಯುವ ನೀರು ತರುವುದು ತಡವಾದ ಹಿನ್ನೆಲೆಯಲ್ಲಿ, ಈ ಸಭೆಯಲ್ಲೆ ನೀರಿಲ್ಲ! ಇನ್ನೂ ಊರಿಗೆ ಯಾವ ಕೊಡುತ್ತೀರಿ ಎಂದು ಕೆಲ ಸದಸ್ಯರು ಕಿಚಾಯಿಸಿದರು.
ಸಾಮಾನ್ಯ ಸಭೆಯ ಬಗ್ಗೆ ಚರ್ಚೆ ಮಾಡಲು ಸಾಕಷ್ಟು ಸಮಯಬೇಕು. ಈ ಹಿನ್ನೆಲೆಯಲ್ಲಿ ಸಾಮಾನ್ಯ ಸಭೆ ಮುಂದೂಡಿ ಬಜೆಟ್​ ಸಭೆ ನಡೆಸಿ ಎಂದು ಬಹುತೇಕ ಸದಸ್ಯರು ಸಲಹೆ ನೀಡಿದರು. ಆದರೆ, ತುರ್ತು ಮಂಜೂರಾತಿ ಬೇಕಾಗಿರುವ ಹಿನ್ನೆಲೆಯಲ್ಲಿ ಅಜೆಂಡಾದಲ್ಲಿರುವ ಒಂದೆರಡು ವಿಷಯಗಳ ಬಗ್ಗೆ ಚರ್ಚೆ ಮಾಡಿ ಉಳಿದ ವಿಷಯಗಳ ಬಗ್ಗೆ ಮತ್ತೊಂದು ಸಭೆ ಮಾಡುವ ತೀರ್ಮಾನ ಮಾಡಲಾಯಿತು.
"

ನಮ್ಮ ಸದಸ್ಯರ ಸಲಹೆ ಹಾಗೂ ಅಧಿಕಾರಿಗಳ ಸಹಕಾರದಿಂದ ಆಯವ್ಯಯ ಮಂಡಿಸಲಾಗಿದೆ. ನಗರದ ಅಭಿವೃದ್ಧಿ ದೃಷ್ಟಿಯಿಂದ ಪ್ರಸಕ್ತ ಸಾಲಿನ ಬಜೆಟ್​ ಸಿದ್ಧಗೊಂಡಿದ್ದು, ಚನ್ನಪಟ್ಟಣದ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಿ ಶ್ರಮಿಸುತ್ತಿದ್ದೇವೆ. ಪತ್ರಕರ್ತರ ಆರೋಗ್ಯ ಭದ್ರತೆಗೂ ಬಜೆಟ್​ನಲ್ಲಿ ಯೋಜನೆ ರೂಪಿಸಿದ್ದೇವೆ.

"

ಇದು ಅಧಿಕಾರಿಗಳ ಬಜೆಟ್​. ಜನರು ಹಾಗೂ ನಗರದ ಅಭಿವೃದ್ಧಿಗೆ ಪೂರಕವಾದ ಯಾವುದೇ ಯೋಜನೆಗಳಿಲ್ಲ. ಅನಗತ್ಯ ಹಣ ಖರ್ಚು ಮಾಡುವುದೇ ದೊಡ್ಡ ಸಾಧನೆ. ಅಧಿಕಾರಿಗಳಿಗೆ ಉಪಯೋಗವಾಗುತ್ತದೆಯೇ ವಿನಾ, ನಗರಾಭಿವೃದ್ಧಿಗೆ ಈ ಬಜೆಟ್​ ಉಪಯೋಗವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net