ಉಸಿರುಗಟ್ಟುವ ವಾತಾವರಣ

ಮಾಗಡಿ ಪಟ್ಟಣದ ಬೆಂಗಳೂರು&ಮಾಗಡಿ (ಬಿ.ಕೆ.) ರಸ್ತೆಯ  ಬದಿಯಲ್ಲಿ  ಗ್ಯಾರೇಜ್​ಗಳ ತ್ಯಾಜ್ಯ ಮತ್ತು ಮನೆಗಳ ಕಸದ ರಾಶಿಗೆ ಬೆಂಕಿ ಹಚ್ಚಿರುವುದು.
ಮಾಗಡಿ ಪಟ್ಟಣದ ಬೆಂಗಳೂರು&ಮಾಗಡಿ (ಬಿ.ಕೆ.) ರಸ್ತೆಯ ಬದಿಯಲ್ಲಿ ಗ್ಯಾರೇಜ್​ಗಳ ತ್ಯಾಜ್ಯ ಮತ್ತು ಮನೆಗಳ ಕಸದ ರಾಶಿಗೆ ಬೆಂಕಿ ಹಚ್ಚಿರುವುದು.
Published on
ಮಾಗಡಿ: ಪಟ್ಟಣದ ಬೆಂಗಳೂರು ರಸ್ತೆಯ ಶ್ರೀಗಂಗಾಧರೇಶ್ವರ ಶಾಲೆ ಸಮೀಪದ ಗ್ಯಾರೇಜ್​ ಮತ್ತು ಮನೆಗಳ ತ್ಯಾಜ್ಯದ ರಾಶಿಗೆ ಕಿಡಿಗೇಡಿಗಳು ಬೆಂಕಿ ಹಾಕುವ ಪರಿಣಾಮ ದಟ್ಟ ಹೊಗೆಯಿಂದಾಗಿ ಉಸಿರುಗಟ್ಟುವ ವಾತಾವರಣದಲ್ಲಿ ಜನ ಸಂಚರಿಸುವಂತಾಗಿದೆ.
ಶ್ರೀಗಂಗಾಧರೇಶ್ವರ ಶಾಲೆಯ ಬಳಿ ಇರುವ ಗ್ಯಾರೇಜ್​ಗಳ ಟಯರ್​, ಆಯಿಲ್​ ಮಿಶ್ರಿತ ತ್ಯಾಜ್ಯ ಹಾಗೂ ಸುತ್ತಮುತ್ತಲ ನಿವಾಸಿಗಳು ತಂದು ಸುರಿಯುವ ಕಸದಿಂದ ರಸ್ತೆ ಬದಿಯಲ್ಲಿ ಬೃಹತ್​ ತ್ಯಾಜ್ಯ ರಾಶಿ ಶೇಖರಣೆಯಾಗುತ್ತಿದೆ. ಈ ಕಸದ ರಾಶಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚುತ್ತಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಮತ್ತು ಪಾದಚಾರಿಗಳು ದಟ್ಟ ಹೊಗೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾಗಿದೆ.
ಪುರಸಭೆ ರ್ನಿಲಕ್ಷ$್ಯ:
ಪುರಸಭೆ ಕಸ ಸಂಗ್ರಹಣೆಗೆ ಸರಿಯಾಗಿ ಬರುತ್ತಿಲ್ಲ. ಸಂಗ್ರಹವಾದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ಬಿಡುತ್ತಿದೆ. ಇದರಿಂದ ಮನೆಯಲ್ಲಿ ಕಸ ಇಟ್ಟುಕೊಳ್ಳಲು ಸಾಧ್ಯವಾಗದೆ ರಸ್ತೆ ಬದಿಗೆ ಹಾಕುತ್ತಿದ್ದೇವೆ ಎಂದು ಸ್ಥಳಿಯ ನಿವಾಸಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಸಾರ್ವಜನಿಕರು ಈ ಬಗ್ಗೆ ಪ್ರಶ್ನಿಸಿದರೆ ತ್ಯಾಜ್ಯವನ್ನು ಎಲ್ಲಿ ಹಾಕಬೇಕು? ಎಂಬ ಮರು ಪ್ರಶ್ನೆಗಳು ಎದುರಾಗುತ್ತಿವೆ.
ಅನಾಹುತ ಸಂಭವಿಸಿದರೆ ಹೊಣೆ ಯಾರು?
ಕಸದ ರಾಶಿ ಸಮೀಪದಲ್ಲೇ ಪೆಟ್ರೋಲ್​ ಬಂಕ್​, ಹಲವು ವಾಣಿಜ್ಯ ಮತ್ತು ವಸತಿ ಕಟ್ಟಡಗಳಿವೆ. ಕಸಕ್ಕೆ ಬೆಂಕಿ ಬೆಂಕಿ ಹಾಕಿದಾಗ ಜೋರಾಗಿ ಗಾಳಿ ಬೀಸಿ ಕಿಡಿಗಳು ಹಾರಿದರೆ ಪೆಟ್ರೋಲ್​ ಬಂಕ್​ಗೆ ಬೆಂಕಿ ತಗುಲುವ ಭೀತಿ ಎದುರಾಗಿದೆ. ಒಂದು ವೇಳೆ ಅನಾಹುತ ಸಂಭವಿಸಿದರೆ ಅದಕ್ಕೆ ಜವಾಬ್ದಾರರು ಯಾರು? ಎಂಬುದು ಸಾರ್ವಜನಿಕರ ಪ್ರಶ್ನೆ.
ತಕ್ಷಣದ ಕ್ರಮಕ್ಕೆ ಆಗ್ರಹ
ದಟ್ಟವಾದ ಹೊಗೆಯಿಂದ ವಾಹನ ಸವಾರರಿಗೆ ರಸ್ತೆ ಕಾಣದೆ ಅಪಘಾತಗಳು ಸಂಭವಿಸುತ್ತಿವೆ. ಈ ಕೂಡಲೇ ಪುರಸಭೆ ಎಚ್ಚೆತ್ತು ಕಸ ತೆರವುಗೊಳಿಸಿ, ವೈಜ್ಞಾನಿಕವಾಗಿ ವಿಲೇ ಮಾಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಅನಾಹುತ ಸಂಭವಿಸುವುದರಲ್ಲಿ ಸಂಶಯವಿಲ್ಲ ಎಂದು ನಾಗರಿಕರು ಎಚ್ಚರಿಸಿದ್ದಾರೆ.
"

ವಾಹನ ಸವಾರರು ಮತ್ತು ಪಾದಚಾರಿಗಳು ದಟ್ಟ ಹೊಗೆಯ ನಡುವೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳು ಈ ಹೊಗೆ ಸೇವಿಸುತ್ತ ವಿದ್ಯಾಭ್ಯಾಸ ಮಾಡುವಂತಾಗಿದೆ. ಇನ್ನು ಹೊಗೆಯಯಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚರಿವ ಪರಿಸ್ಥಿತಿಯೂ ವಾಹನ ಸವಾರರಿಗೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net