ಸೋಮನಹಳ್ಳಿ ಟೋಲ್​ನಲ್ಲಿ ಶುಲ್ಕ ವಸೂಲಿಗೆ ಬ್ರೇಕ್​!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಸ್ಥಳಿಯರ ಮನವಿ ಪುರಸ್ಕರಿಸಿದ ಹೈಕೋರ್ಟ್​ > ಪಾಸ್​ ನೀಡಲು ಪ್ಲಾಜಾ ಆಡಳಿತಕ್ಕೆ ಸೂಚನೆ

ಹಾರೋಹಳ್ಳಿ: ಬೆಂಗಳೂರು ಮುಖ್ಯರಸ್ತೆಯ ಸೋಮನಹಳ್ಳಿ ಟೋಲ್​ ಪ್ಲಾಜಾದಲ್ಲಿ ಸ್ಥಳಿಯರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಸಿಬ್ಬಂದಿಗೆ ಹೈಕೋರ್ಟ್​ ಚಾಟಿ ಬೀಸಿದ್ದು, ಸ್ಥಳಿಯರಿಂದ ಶುಲ್ಕ ವಸೂಲಿಗೆ ಬ್ರೇಕ್​ ಹಾಕಿ ಆದೇಶಿಸಿದೆ.
ಸೋಮನಹಳ್ಳಿ ಟೋಲ್​ ಪ್ಲಾಜಾ ಸಿಬ್ಬಂದಿ ನಿಯಮ ಗಾಳಿಗೆ ತೂರಿ ಸ್ಥಳಿಯರಿಂದಲೂ ಹಣ ವಸೂಲಿ ಮಾಡುತ್ತಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಸ್ಥಳಿಯರು ಹಲವು ಬಾರಿ ಪ್ರತಿಭಟಿಸಿದ್ದರು. ಆಗ ಟೋಲ್​ ಸಿಬ್ಬಂದಿ ಆಧಾರ್​ ಕಾರ್ಡ್​ ತೋರಿಸಿ ಹೋಗುವಂತೆ ಸ್ಥಳಿಯರಿಗೆ ನಿಯಮ ಜಾರಿಮಾಡಿದ್ದರು. ಆದರೆ ಕೆಲವೇ ದಿನಗಳಲ್ಲಿ ಹಳೇ ಚಾಳಿಯಂತೆ ಶುಲ್ಕ ವಸೂಲಿ ಮಾಡಲು ಆರಂಭಿಸಿದರು.
ಇದರಿಂದ ಅಸಮಾಧಾನಗೊಂಡ ಸ್ಥಳಿಯರು ಹಾಗೂ ರೈತಪರ, ಕನ್ನಡಪರ ಸಂಟನೆಗಳು ಟೋಲ್​ ಪ್ಲಾಜಾ ಸಿಬ್ಬಂದಿಯ ದುಂಡಾವರ್ತನೆಗೆ ಕಡಿವಾಣ ಹಾಕಬೇಕು ಎಂದು ಹೈಕೋರ್ಟ್​ನಲ್ಲಿ ದಾವೆ ಹೂಡಿದ್ದರು. ವಾದ&ಪ್ರತಿವಾದ ಆಲಿಸಿದ ಹೈಕೋರ್ಟ್​ ನ್ಯಾಯಮೂರ್ತಿ ಸೂರಜ್​ ಗೋವಿಂದರಾಜು, ಸ್ಥಳಿಯರ ಬೇಡಿಕೆಯನ್ನು ಪುರಸ್ಕರಿದೆ. ಕೆಲಸದ ಸ್ಥಳ ಹಾಗೂ ಮನೆಗಳಿಗೆ ತೆರಳಲು ಸ್ಥಳಿಯರಿಗೆ ಸೋಮನಹಳ್ಳಿ ಟೋಲ್​ ಪ್ಲಾಜಾ ಮೂಲಕ ಯಾವುದೇ ಅಡ್ಡಿ ಆತಂಕವಿಲ್ಲದೆ ಪ್ರವೇಶ ಮತ್ತು ನಿರ್ಗಮನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆದೇಶಿಸಿದ್ದಾರೆ.
30 ದಿನಗಳ ಗಡುವು
ಕೋರ್ಟ್​ ಆದೇಶ ಪ್ರತಿ ಪಡೆದ 30 ದಿನಗಳೊಳಗೆ ಸ್ಥಳಿಯರ ದಾಖಲೆ ಪರಿಶೀಲಿಸಿ, ಉಚಿತ ಪಾಸ್​ ವಿತರಣೆ ಪೂರ್ಣಗೊಳಿಸಬೇಕು. ಅರ್ಜಿದಾರರು ಹಾಗೂ ಇತರ ಸ್ಥಳಿಯ ನಿವಾಸಿಗಳು ಅರ್ಜಿ ಸಲ್ಲಿಸಿದ್ದಲ್ಲಿ ಯಾವುದೇ ಟೋಲ್​ ಅಥವಾ ಬಳಕೆದಾರ ಶುಲ್ಕ ವಿಧಿಸದೆ ಉಚಿತ ಪಾಸ್​ಗಳನ್ನು ನೀಡಬೇಕು ಎಂದು ಆದೇಶಿಸಿರುವ ನ್ಯಾಯಾಧೀಶರು ಪಾಸ್​ ವಿತರಣೆವರೆಗೂ ಶುಲ್ಕ ವಸೂಲಿ ಮಾಡದಂತೆ ನಿರ್ದೇಶನ ನೀಡಿದೆ. ನ್ಯಾಯಾಲಯ ಆದೇಶವನ್ನು ಟೋಲ್​ ಸಿಬ್ಬಂದಿ ರ್ನಿಲಸಿ, ಶುಲ್ಕ ವಸೂಲಿ ಮುಂದುವರಿಸಿದರೆ ರಾಷ್ಟ್ರೀಯ ಹೆದ್ದಾರಿ ದರ ನಿಗದಿ ಮತ್ತು ನಿಯಮ&2008ರಡಿ ಟೋಲ್​ ಪ್ಲಾಜಾವನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net