ಪ್ರೀತಿಗೆ ಪಾಲಕರ ಅಡ್ಡಿ ಬಾಲಕ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಚನ್ನಪಟ್ಟಣ: ಪಾಲಕರು ಪ್ರೀತಿಗೆ ಅಡ್ಡಿಪಡಿಸಿದರು ಎಂಬ ಕಾರಣಕ್ಕೆ ನಗರದ ರಾಜಾಕೆಂಪೇಗೌಡ ಬಡಾವಣೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ 15 ವರ್ಷದ ಬಾಲಕ ಚಿಕಿತ್ಸೆ ಲಿಸದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ.
ಬಿಡದಿ ಹಣ್ಣಿನ ಅಂಗಡಿ ಮಾಲೀಕರೊಬ್ಬರ ಮಗ ತನ್ಮಯ್​ ಅದೇ ಪಟ್ಟಣದ 26 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದ. ವಿಷಯ ತಿಳಿದ ಬಾಲಕನ ಪಾಲಕರು, ನಿಮ್ಮಿಬ್ಬರ ನಡುವೆ ವಯಸ್ಸಿನ ಅಂತರವಿದ್ದು, ಇದು ಸರಿಯಲ್ಲ ಎಂದು ಬುದ್ಧಿ ಹೇಳಿದ್ದಲ್ಲದೇ ಇಬ್ಬರೂ ಸಂಪರ್ಕಿಸದಂತೆ ರ್ನಿಬಂಧ ಹಾಕಿದ್ದರು. ಪೊಲೀಸ್​ ಠಾಣೆಗೂ ದೂರು ನೀಡಿ, ಮಗನ ತಂಟೆಗೆ ಬಾರದಂತೆ ಯುವತಿಗೆ ಎಚ್ಚರಿಕೆ ಕೊಡಿಸಿದ್ದರು. ಇಬ್ಬರ ನಡುವಿನ ಸಂಪರ್ಕವನ್ನು ಬಾಲಕನ ಪಾಲಕರು ರ್ನಿಬಂಧಿಸಿದರೂ ಸಾಮಾಜಿಕ ಜಾಲತಾಣದ ಮೂಲಕ ಮತ್ತೆ ಬಾಲಕ ಮತ್ತು ಯುವತಿ ಸಂಪರ್ಕದಲ್ಲಿದ್ದರು.
ಇದಾದ ಬಳಿಕ ಮನೆ ಬಿಟ್ಟು ಹೋಗಿದ್ದ ತನ್ಮಯ್​ ಚನ್ನಪಟ್ಟಣದ ಸ್ನೇಹಿತನ ಮನೆಯಲ್ಲಿ 25 ದಿನಗಳಿಂದ ವಾಸವಿದ್ದ. ಈ ಬಗ್ಗೆ ಪಾಲಕರಿಗೂ ತಿಳಿಸಿದ್ದ. ಈ ನಡುವೆ ಏ.29ರಂದು ಸಂಜೆ ತಾಯಿಗೆ ದೂರವಾಣಿ ಕರೆಮಾಡಿ, ನಮ್ಮ ಪ್ರೀತಿಗೆ ನೀವು ರ್ನಿಬಂಧ ಹೇರಿದ್ದು, ನಾನು ಏನಾದರೂ ಮಾಡಿಕೊಂಡು ಸಾಯುತ್ತೇನೆ ಎಂದು ಹೇಳಿ ವಿಷಸೇವಿಸಿದ್ದ. ತನ್ಮಯ್​ನನ್ನು ಸ್ನೇಹಿತರು ಕೂಡಲೇ ಚನ್ನಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬಾಲಕನ ಪಾಲಕರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೇ 3ರ ಸಂಜೆಯೇ ಕೊನೆಯುಸಿರೆಳೆದಿದ್ದಾನೆ. ಬುಧವಾರ ಚನ್ನಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕ ಟನೆ ಬೆಳಕಿಗೆ ಬಂದಿದೆ.
ಮಾಲೀಕನ ಮಗನೇ ಬುಟ್ಟಿಗೆ?
ಬಾಲಕ ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ, ಈತನ ತಂದೆ ಬಿಡದಿ ನಗರದಲ್ಲಿ ಹಣ್ಣಿನ ಅಂಗಡಿ ಇಟ್ಟಿದ್ದರು. ಅಂಗಡಿಯಲ್ಲಿ ಯುವತಿಯನ್ನು ಕೆಲಸಕ್ಕೆ ಇಟ್ಟುಕೊಂಡಿದ್ದರು. ಶಾಲೆ ಮುಗಿಸಿ ಬಿಡುವಿನ ಸಮಯದಲ್ಲಿ ಅಂಗಡಿ ಬಳಿ ಬರುತ್ತಿದ್ದ ಬಾಲಕ ಅಂಗಡಿಯ ಕೆಲಸದಾಕೆಯ ಪ್ರೀತಿಗೆ ಬಿದ್ದಿದ್ದ. ಓದುವ ವಯಸ್ಸಿನಲ್ಲಿ ಅಲ್ಲದೇ ಸಾಕಷ್ಟು ವಯಸ್ಸಿನ ಅಂತರವಿದ್ದರೂ ಪ್ರೀತಿ ಎಂಬ ಬಲೆಗೆ ಬಿದ್ದು ಬಾಲಕ ಇಹಲೋಕ ತ್ಯಜಿಸಿದ್ದಾನೆ. ಮಗನ ಸಾವಿಗೆ ಆತನ ಪ್ರೇಯಸಿಯೇ ಕಾರಣ. ಚಿಕ್ಕ ಹುಡುಗನಿಗೆ ಇಲ್ಲ ಸಲ್ಲದ್ದನ್ನು ಹೇಳಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸಿದ್ದಾಳೆ ಎಂದು ಆರೋಪಿಸಿ ಆಕೆಯ ವಿರುದ್ಧ ಬಾಲಕನ ಪಾಲಕರು ಚನ್ನಪಟ್ಟಣ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net