ಜಿಲ್ಲೆಯ ಸಾಹಿತ್ಯಾಸಕ್ತರ ಆಸಕ್ತಿಯ ಫಲವಾಗಿ ರೂಪುಗೊಂಡ "ಪುಸ್ತಕ ಮಂಥನ' ತಂಡವು ಪ್ರತಿ ತಿಂಗಳು ಕೃತಿಯೊಂದನ್ನು ಆಯ್ಕೆ ಮಾಡಿ, ಅದನ್ನು ಎಲ್ಲರೂ ಕೊಂಡು, ಓದಿ, ನಿಗದಿತ ದಿನದಂದು, ರ್ನಿದಿಷ್ಟ ಸ್ಥಳದಲ್ಲಿ ಒಂದುಗೂಡಿ ವಿಮರ್ಶಿಸುವ ಪರಿಪಾಠವನ್ನು ಮುಂದುವರೆಸಿಕೊಂಡು ಬರಲಾಗಿದೆ. ತಂಡದಲ್ಲಿ ಉಪನ್ಯಾಸಕರು, ಶಿಕ್ಷಕರು, ವಕೀಲರು, ವೈದ್ಯರು, ಆರಕ್ಷಕರು, ರೈತರು, ವರ್ತಕರು, ವಿದ್ಯಾರ್ಥಿಗಳು ಸೇರಿ ಸಾಹಿತ್ಯದಲ್ಲಿ ಆಸಕ್ತಿ ಇರುವ ಸಮಾನ ಮನಸ್ಕರು ಭಾಗವಹಿಸಲಿದ್ದು, ಕಳೆದ 97 ತಿಂಗಳುಗಳಿಂದ ಈ ಮಂಥನ ಆಯೋಜನೆಗೊಳ್ಳುತ್ತಿದೆ. 98ನೇ ಪುಸ್ತಕ ಮಂಥನಕ್ಕೆ ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದ ಬುಕರ್ ಪ್ರಶಸ್ತಿ ವಿಜೇತ ಕನ್ನಡ ಕೃತಿ ಬಾನು ಮುಷ್ತಾಕ್ ವಿರಚಿತ ಎದೆಯ ಹಣತೆ ಕಥಾ ಸಂಕಲನವನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.