ರಾಜ್ಯದ ಎಲ್ಲೆಡೆಯಂತೆ ಕನಕಪುರಕ್ಕೂ ಮೀಸಲಾತಿ ರ್ನಿಣಯವಾಗದೆ ನಗರಸಭೆಗೆ ಚುನಾವಣೆ ನಡೆಯುವ ಮುನ್ಸೂಚನೆ ಇಲ್ಲ. ಜನಪ್ರತಿನಿಧಿಗಳ ಆಡಳಿತವಿಲ್ಲದೆ ಅಧಿಕಾರಿಗಳ ಆಡಳಿತ ಜಾರಿಯಲ್ಲಿದ್ದು, ಜನರ ಆಶೋತ್ತರಗಳಿಗೆ ಸ್ಪಂದನೆ ಇಲ್ಲದಂತಾಗಿದೆ. ಮೇಲಧಿಕಾರಿಗಳು ಇಲ್ಲದೆ ಈಗಿನ ಅಧಿಕಾರಿಗಳು ದರ್ಬಾರ್ ನಡೆಸುತ್ತಿದ್ದಾರೆ. ಇ&ಖಾತೆಯೋ, ಇನ್ನೇನೋ ಸೇವೆಗಳಿಗಾಗಿ ನಗರಸಭೆಗೆ ಹೋದರೆ ಕೆಲಸಗಳು ಆಗುತ್ತಿಲ್ಲ. ಹೊಸ ಅಧಿಕಾರಿ ಬರದಿದ್ದರೆ ಪ್ರಭಾರ ಅಧಿಕಾರಿಯನ್ನಾದರೂ ನೇಮಿಸಬೇಕಿತ್ತು, ಅದೂ ಮಾಡದಿದ್ದರೆ ಸರ್ಕಾರಿ ಸೌಲಭ್ಯ ಪಡೆಯುವುದಾದರೂ ಹೇಗೆ ಎಂಬ ಪ್ರಶ್ನೆ ಮೂಡಿದೆ.