ಮಾಗಡಿ ಹೊಸಪೇಟೆ ನಿವಾಸಿ ಅರ್ಜುನ್ (29) ಮೃತ. ಹಿಂಬದಿ ಸವಾರ ಸಂತೋಷ್ ಗಾಯಗೊಂಡವ. ಇಬ್ಬರೂ ಯುವಕರು ಕಾರ್ಯನಿಮಿತ್ತ ನೆಲಮಂಗಲಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಕುಣಿಗಲ್ ಕಡೆಯಿಂದ ವೇಗವಾಗಿ ಬಂದ ಲಾರಿ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ತಾಗಿದ ಪರಿಣಾಮ ಇಬ್ಬರೂ ಸವಾರರು ನೆಲಕ್ಕೆ ಬಿದ್ದಿದ್ದು, ಈ ವೇಳೆ ಅರ್ಜುನ್ ತಲೆಯ ಮೇಲೆ ಲಾರಿಯ ಚಕ್ರ ಹರಿದು ಸ್ಥಳದಲ್ಲೆ ಉಸಿರು ಚೆಲ್ಲಿದ್ದಾನೆ. ರಸ್ತೆಯ ಎಡಭಾಗಕ್ಕೆ ಬಿದ್ದ ಸಂತೋಷ್ ಗಾಯಗೊಂಡಿದ್ದಾನೆ. ಕುದೂರು ಪೊಲೀಸರು ಸ್ಥಳ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.