ಅಮೃತ್ತೂರು ಹೋಬಳಿ ಹೊಸಕೆರೆ ಗ್ರಾಮದ ನವೀನ್ ಕುಮಾರ್ (29) ಮೃತ. ಮಾಗಡಿ ಮೂಲಕ ಸ್ವಗ್ರಾಮ ಹೊಸಕೆರೆ ಗ್ರಾಮಕ್ಕೆ ಭಾನುವಾರ ರಾತ್ರಿ ಬೈಕ್ನಲ್ಲಿ ತೆರಳುವ ವೇಳೆ ಮಾಗಡಿ ತಾಲೂಕಿನ ಕಲ್ಯಾ ಕಾಲನಿಯ ಮಾಯನಾಯ್ಕನ ಹಳ್ಳಿ ಗೇಟ್ ಬಳಿ ಕುಣಿಗಲ್ ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕೆ ರಭಸಕ್ಕೆ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.