ರಸ್ತೆಯಲ್ಲಿಯೇ ಪುಂಡಾಟ ನಡೆಸಿದ ಕರಡಿ ಸೆರೆ

ಸಿಂಗರಾಜಪುರ&ಕೋಡಂಬಳ್ಳಿ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ಪುಂಡಾಟ ನಡೆಸುತ್ತಿದ್ದ ಕರಡಿಯನ್ನು ಅರಣ್ಯ ಅಧಿಕಾರಿಗಳು ಸೆರೆ ಹಿಡಿದು, ಬನ್ನೇರುಟ್ಟ ಜೈವಿಕ ಉದ್ಯಾನವನಕ್ಕೆ ರವಾನಿಸಿದ್ದಾರೆ.
ಸಿಂಗರಾಜಪುರ&ಕೋಡಂಬಳ್ಳಿ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ಪುಂಡಾಟ ನಡೆಸುತ್ತಿದ್ದ ಕರಡಿಯನ್ನು ಅರಣ್ಯ ಅಧಿಕಾರಿಗಳು ಸೆರೆ ಹಿಡಿದು, ಬನ್ನೇರುಟ್ಟ ಜೈವಿಕ ಉದ್ಯಾನವನಕ್ಕೆ ರವಾನಿಸಿದ್ದಾರೆ.
Published on
ಚನ್ನಪಟ್ಟಣ: ತಾಲೂಕಿನ ಸಿಂಗರಾಜಪುರ&ಕೋಡಂಬಳ್ಳಿ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ಪುಂಡಾಟ ನಡೆಸುತ್ತಿದ್ದ ಕರಡಿಯನ್ನು ಅರಣ್ಯ ಅಧಿಕಾರಿಗಳು ಸೆರೆ ಹಿಡಿದು, ಬನ್ನೇರುಟ್ಟ ಜೈವಿಕ ಉದ್ಯಾನವನಕ್ಕೆ ರವಾನಿಸಿದ್ದಾರೆ.
ಮಾರ್ಗದ ಕಣಿವೆದೊಡ್ಡಿ ದಂಡಿನ ಮಾರಮ್ಮನ ದೇವಸ್ಥಾನ ಬಳಿ ಸುಮಾರು 40ರ ವಯಸ್ಸಿನ ಹೆಣ್ಣು ಕರಡಿ ಬೆಳಗ್ಗೆ 6 ಗಂಟೆ ವೇಳೆ ರಸ್ತೆಯಲ್ಲಿ ಸಂಚರಿಸುವ ಬೈಕ್​ ಸವಾರರ ಮೇಲೆ ಏಕಾಏಕಿ ದಾಳಿ ಮಾಡಿದೆ. ಈ ವೇಳೆ ಬೈಕ್​ ಸವಾರ ಬೈಕ್​ ಬಿಟ್ಟು ತಪ್ಪಿಸಿಕೊಂಡು ಓಡಿ ಹೋದರೂ ಬೈಕ್​ ಮೇಲೆ ರೋಷ ತೋರಿದ ಕರಡಿ, ಚಕ್ರ ಮತ್ತು ಸೀಟ್​ ಅನ್ನು ಕಿತ್ತುಹಾಕಿದೆ. ಅಲ್ಲದೇ ಇದೇ ಸಮಯದಲ್ಲಿ ಬಂದ ಸರಕು ಸಾಗಣೆ ವಾಹನದ ಮೇಲೂ ಎರಗಲು ಯತ್ನಿಸಿದೆ. ಸುಮಾರು ಹೊತ್ತು ರಸ್ತೆಯಲ್ಲಿಯೇ ಕುಳಿತು ಪುಂಡಾಟ ನಡೆಸುತ್ತಿದ್ದ ಕರಡಿ ಜನ ಎಷ್ಟೇ ಕೂಗಾಡಿದರೂ ಸ್ವಲ್ಪವೂ ಸ್ಥಳದಿಂದ ಕದಲಿಲ್ಲ. ಪರಿಣಾಮ ಸ್ಥಳದಲ್ಲಿ ಸಾಕಷ್ಟು ಮಂದಿ ನೆರೆದರು. ಒಂದು ಹಂತದಲ್ಲಿ ಜನರತ್ತಲೂ ಕರಡಿ ನುಗ್ಗಿದಾಗ ಬೈಕ್​ಗಳನ್ನು ಅಲ್ಲಲ್ಲೇ ಬಿಟ್ಟು ಜನ ಚೆಲ್ಲಾಪಿಲ್ಲಿಯಾದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕರಡಿಯನ್ನು ಸೆರೆ ಹಿಡಿದಿದ್ದು, ಪಶು ವೈದ್ಯರಿಂದ ಚಿಕಿತ್ಸೆ ಕೊಡಿಸಿ, ಮೇಲಾಧಿಕಾರಿಗಳ ಸೂಚನೆ ಮೇರೆಗೆ ಕರಡಿಯನ್ನು ಬನ್ನೇರುಟ್ಟ ಜೈವಿಕ ಉದ್ಯಾನವನಕ್ಕೆ ರವಾನಿಸಿದ್ದಾರೆ.
ರಾಮನಗರ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಣಾಧಿಕಾರಿ ರಾಮಕೃಷ್ಣಪ್ಪ, ಸಹಾಯಕ ಅರಣ್ಯ ಸಂರಣಾಧಿಕಾರಿಗಳಾದ ಪುಟ್ಟಮ್ಮ, ಚೈತ್ರಾ, ಕನಕಪುರ ವಲಯ ಅಧಿಕಾರಿ ರವಿ, ರಾಮನಗರ ವಲಯ ಅರಣ್ಯಾಧಿಕಾರಿ ಮಹಮದ್​ ಮನ್ಸೂರ್​ ಹಾಗೂ ಚನ್ನಪಟ್ಟಣ ವಲಯ ಅರಣ್ಯಾಧಿಕಾರಿ ಮಲ್ಲೆಶ್​ ಸ್ಥಳದಲ್ಲಿದ್ದರು.
ಇಬ್ಬರಿಗೆ ಗಾಯ
ಕರಡಿ ಸೆರೆ ಹಿಡಿಯುವ ವೇಳೆ ಉಪ ವಲಯ ಅರಣ್ಯಾಧಿಕಾರಿ ಮುತ್ತುನಾಯಕ್​ ಹಾಗೂ ರೈತ ದೊಡ್ಡಯ್ಯ ಗಾಯಗೊಂಡಿದ್ದು, ಇಬ್ಬರೂ ನಗರದ ಬಿ.ಜೆ.ಲಿಂಗೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಯಾವುದೇ ಹೆಚ್ಚಿನ ಸಮಸ್ಯೆಯಾಗಿಲ್ಲ ಎಂದು ತಿಳಿದುಬಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net