ಕೆಂಗಲ್ ಹನುಮಂತಯ್ಯ ಅವರ ಹೆಸರು ಚಿರಸ್ಥಾಯಿಯಾಗಿಸಲು ಪ್ರಶಸ್ತಿ

ಸಿಎಂ ಲಿಂಗಪ್ಪ ಅವರಿಗೆ ಪೌರ ಸನ್ಮಾನ ಮಾಡಲಾಯಿತು.
ಸಿಎಂ ಲಿಂಗಪ್ಪ ಅವರಿಗೆ ಪೌರ ಸನ್ಮಾನ ಮಾಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ರಾಮನಗರ ಕನ್ನಡ ಹಬ್ಬ
  • ಸಿಎಂ ಲಿಂಗಪ್ಪಗೆ ಪೌರ ಸನ್ಮಾನ
  • ಗುರುಕಿರಣ್ ತಂಡದಿಂದ ಸಂಗೀತ ಕಾರ್ಯಕ್ರಮ

ರಾಮನಗರ: ವಿಶೇಷ ವಾಸ್ತು ಶಿಲ್ಪವನ್ನು ಹೊಂದಿರುವ ವಿಧಾನಸೌಧವನ್ನು ಕಟ್ಟಿರುವಕೆಂಗಲ್​ ಹನುಮಂತಯ್ಯನವರು ರಾಮನಗರದ ಮಣ್ಣಿನ ಮಗನಾಗಿದ್ದು ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ಅವರಹೆಸರಲ್ಲೇ ಸಾಧಕರಿಗೆ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.

ನಗರಸಭೆವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ ಹಮ್ಮಿಕೊಳ್ಳಲಾಗಿದ್ದರಾಮನಗರ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆಂಗಲ್​ ಹನುಮಂತಯ್ಯ ರಾಮನಗರದವರು, ಇಲ್ಲಿಂದಶಾಸಕರಾಗಿ ಆಯ್ಕೆಯಾಗಿದ್ದ ಸಂದರ್ಭದಲ್ಲಿಯೇ ಅವರು ದೇಶಕ್ಕೆ ವಿಭಿನ್ನವಾದ ಆಕರ್ಷಣೀಯವಾದ ವಿಧಾನಸೌಧವನ್ನುನಿರ್ಮಾಣ ಮಾಡಿದರು. ಇಷ್ಟು ಮಾತ್ರವಲ್ಲದರೆ ಅವರೊಬ್ಬರ ಧೀಮಂತ ನಾಯಕ. ಕ್ಲೋಸ್​ಪೇಟೆಯನ್ನು ರಾಮನಗರಎಂದು ನಾಮಕರಣ ಮಾಡಿದ್ದೇ ಅವರು ಎಂದರು.

ಲಿಂಗಪ್ಪ ಅವರ 6 ದಶಕ ನಿಸ್ವಾರ್ಥ ಸೇವೆಯನ್ನು ಗುರ್ತಿಸಿ, ಪೌರ ಸನ್ಮಾನಮಾಡಲಾಗಿದೆ. 1968ನೇ ಇಸವಿಯಿಂದ ಗ್ರಾ ಪಂ ಸದಸ್ಯರಾಗಿ, ತಾಲೂಕು ಬೋರ್ಡ್​ ಸದಸ್ಯರಾಗಿ, ಭೂ ನ್ಯಾಯ ಮಂಡಳಿ ಸದಸ್ಯರಾದ ಕೆಲಸ ಮಾಡಿದ್ದಾರೆ. ಇವರ ಅವಧಿಯಲ್ಲಿಎರಡು ಸಾವಿರ ಮಂದಿಗೆ 3 ಸಾವಿರ ಮಂದಿಗೆ ಜಮೀನು ಮಂಜೂರು ಮಾಡಿಕೊಟ್ಟಿದ್ದಾರೆ. ಸಾವಿರಾರು ಮಂದಿಗೆನಿವೇಶನ ನೀಡುವ ಮೂಲಕ ಸೂರು ಕಲ್ಪಸಿದ್ದಾರೆ ಎಂದು ಬಣ್ಣಿಸಿದರು.

ಸಂಸದ ಡಾ.ಸಿ.ಎನ್​ ಮಂಜುನಾಥ್​ ಮಾತನಾಡಿ, ಕನ್ನಡ ಹಬ್ಬ ದಸರಾ ಹಬ್ಬದಂತೆಕಾಣುತ್ತಿದೆ. ಸಿ.ಎಂ.ಲಿಂಗಪ್ಪ ಅವರು ಓರ್ವ ಆದರ್ಶ ರಾಜಕಾರಣಿ. ಸೋಲು ಗೆಲುವನ್ನು ಸಮಾನತೆಯಿಂದ ಸ್ವೀಕರಿಸಿದವ್ಯಕ್ತಿ. ಅವರು ರಾಜಕಾರಣಿ ಮಾಡುವುದಕ್ಕಿಂತ ರಾಷ್ಟ್ರಕಾರಣ ಮಾಡಿದರು. ಅವರು ರಾಜಕಾರಣಿಯಂತೆ ತಮ್ಮಮುಂದಿನ ಗೆಲುವಿನ ಬಗ್ಗೆ ಯೋಚನೆ ಮಾಡದೆ, ರಾಷ್ಟ್ರಕಾರಣಿಯಂತೆ ಭವಿಷ್ಯದ ಜನಾಂಗದ ಒಳಿತಿಗಾಗಿ ದುಡಿದರುಎಂದು ಬಣ್ಣಿಸಿದರು.

ಕನ್ನಡ ಕಣ್ಮರೆಯಾಗುತ್ತಿದೆ. ಕನ್ನಡ ಎಂದು ನಮ್ಮ ಕಣ್ಣಿಗೆ ಹಾಕುವ ಕನ್ನಡವಾಗಿರದೇ,ಕನ್ನಡವೇ ಕಣ್ಣಾಗಬೇಕು. ಆಗ ಮಾತ್ರ ಭಾಷೆ ಉಳಿದು ಬೆಳೆಯಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿಮಾತನಾಡಿದ ಎಚ್​.ಎ.ಇಕ್ಬಾಲ್​ ಹುಸೇನ್​, ಯಾವುದೇ ನಗರಸಭೆ ಮಾಡಲು ಸಾಧ್ಯವಾಗದ ಕೆಲಸವನ್ನು ರಾಮನಗರನಗರಸಭೆ ಅಧ್ಯಕ್ಷರಾದ ಕೆ.ಶೇಷಾದ್ರಿ ಅವರ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆದಿದೆ.ಇದೊಂದು ಇತಿಹಾಸ ಪುಟದಲ್ಲಿ ಸೇರಬೇಕಾಗಿರುವ ಕಾರ್ಯಕ್ರಮ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್​.ಎಂ.ರೇವಣ್ಣ,ಜಿಲ್ಲಾಧ್ಯಕ್ಷ ಕೆ.ರಾಜು, ಜಿಬಿಡಿಎ ಅಧ್ಯಕ್ಷ ಗಾಣಕಲ್​ ನಟರಾಜ್​, ಬಮೂಲ್​ ನಿರ್ದೇಶಕ ಪಿ.ನಾಗರಾಜು,ನಗರಸಭೆ ಆಯುಕ್ತ ಡಾ.ಜಯಣ್ಣ, ಐಎಎಸ್​ ಅಧಿಕಾರಿಯಾಗಿದ್ದ ದಿವಂಗತ ಶಿವರಾಂ ಅವರ ಪತ್ನಿ ವಾಣಿ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಲಿಂಗಪ್ಪ ಅವರಿಗೆ ಪೌರ ಸನ್ಮಾನ ನೀಡುವ ಜತೆಗೆ, ವಿವಿಧ ಕ್ಷೇತ್ರಗಳಲ್ಲಿಸಾಧನೆ ಮಾಡಿದ ರಾಮನಗರದ 17 ಮಂದಿ ಸಾಧಕರಿಗೆ ಕೆಂಗಲ್​ ಹನುಮಂತಯ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನುಸಹ ಸನ್ಮಾನಿಸಲಾಯಿತು.

ರಂಜಿಸಿದ ಗುರುಕಿರಣ್​ ತಂಡ

ರಾಮನಗರ ಕನ್ನಡ ಹಬ್ಬದ ಅಂಗವಾಗಿ ಖ್ಯಾತ ಸಂಗೀತ ನಿರ್ದೇಶಕ ಗುರು ಕಿರಣ್​ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಂಗೀತ ರಸ ಸಂಜೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ವೇದಿಕೆ ಕಾರ್ಯಕ್ರಮತಡವಾದ ಕಾರಣ ಸಂಗೀತ ಕಾರ್ಯಕ್ರಮವೂ ಸಹ ವಿಳಂಭವಾಯಿತು. ಇದರ ಹೊರತಾಗಿಯೂ ಚಳಿಯ ನಡುವೆಯೇ ಗಾಯಕರಾದರಾಜೇಶ್​ ಕೃಷ್ಣ, ಅನುರಾಧ ಭಟ್​, ಗಣೇಶ್​ ಭಟ್​, ಮಂಗ್ಲೀ ಸೇರಿದಂತೆ ಹಲವರು ಕಂಠ ಮಾಧುರ್ಯವನ್ನುರಾಮನಗರದ ಜನತೆ ಆಸ್ವಾದಿಸಿದರು.

ಹಲವಾರು ದಶಕಗಳ ಕಾಲ ರಾಜಕೀಯದಲ್ಲಿ ಇದ್ದರೂ ಎಂದೂ ನನ್ನ ಕ್ಷೇತ್ರ ಜನರಿಗೆ ಸೇವೆಯಿಂದ ದೂರವಾಗಲಿಲ್ಲ. ಸೇವೆಯನ್ನುನಾನು ನಿರ್ವಂಚನೆಯಿಂದ ಮಾಡಿದ್ದೇನೆ. ಅದು ಕರ್ತವ್ಯವಷ್ಟೇ ಆಗಿತ್ತು.

ಸಿ.ಎಂ.ಲಿಂಗಪ್ಪ,

ಮಾಜಿ ಶಾಸಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net