ಕುದೂರು&ಶಿವಗಂಗೆ ರಸ್ತೆಗೆ ಡಾಂಬರು

ಕುದೂರು&ಶಿವಗಂಗೆ ಮುಖ್ಯ ರಸ್ತೆಯ ಡಾಂಬರೀಕರಣ ಕಾಮಗಾರಿ ಆರಂಭಗೊಂಡಿರುವುದು.
ಕುದೂರು&ಶಿವಗಂಗೆ ಮುಖ್ಯ ರಸ್ತೆಯ ಡಾಂಬರೀಕರಣ ಕಾಮಗಾರಿ ಆರಂಭಗೊಂಡಿರುವುದು.
Published on
ಕುದೂರು: ಕುದೂರು& ಶಿವಗಂಗೆ ಮುಖ್ಯರಸ್ತೆ ಡಾಂಬರೀಕರಣ ಆರಂಭಗೊಂಡಿದೆ. ಈ ರಸ್ತೆ ಡಾಂಬರೀಕರಣಕ್ಕೆ ಭೂಮಿಪೂಜೆ ನೆರವೇರಿಸಿ ನಾಲ್ಕೆದು ತಿಂಗಳೇ ಕಳೆದರೂ ಕಾಮಗಾರಿ ಆರಂಭವಾಗಿರಲಿಲ್ಲ. ಡಿ.12ರಂದು ವಿಜಯವಾಣಿ ಪತ್ರಿಕೆಯಲ್ಲಿ "ರಸ್ತೆಯೆಲ್ಲ ಧೂಳು ಕೇಳೋರಿಲ್ಲ ಗೋಳು' ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಗೊಂಡ ಬಳಿಕ ಎಚ್ಚೆತ್ತುಕೊಂಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, 2 ದಿನಗಳಿಂದ ಶ್ರೀಗಿರಿಪುರ ರಸ್ತೆಯಿಂದ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಕುದೂರು&ಶಿವಗಂಗೆ ಮುಖ್ಯರಸ್ತೆಯ ಡಾಂಬರೀಕರಣ ಕಾಮಗಾರಿ ಕೈಗೊಳ್ಳದೆ ಜಲ್ಲಿ ಹಾಕಿ ಹಾಗೇ ಬಿಟ್ಟಿದ್ದರಿಂದ ವಾಹನ ಸವಾರರು, ಅಂಗಡಿ ವರ್ತಕರು, ರಸ್ತೆ ಅಂಚಿನ ಮನೆಯವರುಗಳು ಧೂಳಿನಿಂದ ನರಳುವಂತಾಗಿತ್ತು.
ಪಟ್ಟಣದ ಹಲವೆಡೆ ಒಳ ಚರಂಡಿ ಬಾಕ್ಸ್​ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಶ್ರೀ ಕಾಮಗಾರಿ ಮುಗಿಸುವಂತೆ ಮಾಗಡಿ ಲೋಕೋಪಯೋಗಿ ಇಲಾಖೆಯ ಎಇಇ ಪುಟ್ಟ ಹನುಮಂತರಾಜು ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net