ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯ ಹನುಮಂತನಗರದ ಆಂಜನೇಯಸ್ವಾಮಿ ದೇವಾಲಯದ ಸಮೀಪವಿರುವ ಮುನಿರಾಜು ಅವರು ಕೆಲಸದ ನಿಮಿತ್ತ ಹೊರಹೋಗಿದ್ದರು. ಪತ್ನಿ ಮುನಿರತ್ನ ಪಕ್ಕದ ಅಂಗಡಿಗೆ ಹೋಗಿದ್ದರು. ಈ ವೇಳೆ ಮನೆಗೆ ಬೀಗ ಹಾಕಿರಲಿಲ್ಲ. ಈ ವೇಳೆ ಆರೋಪಿ, ಮನೆಗೆ ನುಗ್ಗಿ ಬೀರುವಿನ ಲಾಕರ್ ಒಡೆದು ಚಿನ್ನಾಭರಣಗಳೊಂದಿಗೆ ಪರಾರಿಯಾಗುತ್ತಿದ್ದ. ಮುನಿರತ್ನ ಅವರು ಅಂಗಡಿಯಿಂದ ವಾಪಸ್ ಬಂದಾಗ ಆರೋಪಿ ಮನೆಯಿಂದ ಹೊರಬರುತ್ತಿರುವುದು ಕಂಡುಬಂದಿದೆ.