ಜು.24ರಂದು ಸಂಜೆ ಬಂದ ಖಚಿತ ಮಾಹಿತಿಯ ಮೇರೆಗೆ ಪೊಲೀಸ್ ಇನ್ಸ್ಪೆಕ್ಟರ್ ಶಿವರಾಜ್ ನೇತೃತ್ವದ ತಂಡ ದಾಳಿ ನಡೆಸಿ ನಾರಾಯಣಹಳ್ಳಿಯ ಸುರೇಂದ್ರ (28) ಎಂಬಾತನನ್ನು ಬಂಧಿಸಿದೆ. ಗೋಪಿ (30), ವೆಂಕಟೇಶ್ (45) ಹಾಗೂ ಆಂಜಿನಪ್ಪ (38) ಪರಾರಿಯಾಗಿದ್ದಾರೆ. 57,070 ರೂ. ನಗದು ವಶಪಡಿಸಿಕೊಂಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.