ಇತರರಿಗೆ ತೊಂದರೆ ನೀಡದಿರುವುದೇ ಸಾಧನೆ

ಮಾಗಡಿ ಪಟ್ಟಣ ಸಮೀಪದ ಜಡೇದೇವರ ಮಠದಲ್ಲಿ ಶ್ರೀಮಠದ ಇಮ್ಮಡಿ ಬಸವರಾಜ ಸ್ವಾಮೀಜಿ ಅವರ ಜನ್ಮವರ್ಧಂತಿ ಆಚರಣೆ ಪ್ರಯುಕ್ತ ಭಕ್ತರು ಸನ್ಮಾನಿಸಿದರು. ರಾಜ್ಯ ಕಟ್ಟಡ ಮತ್ತು ಅಸಂಟಿತ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಡಾ.ಪ್ರಸನ್ನ ಗೌಡ, ವೀರಶೈವ ಮುಖಂಡ ಉದ್ಯಮಿ ಸಿದ್ದಲಿಂಗ ಮೂರ್ತಿ, ಬೆಂಗಳೂರು ಎಚ್​.ನಾಗರಾಜು, ಎನ್​.ಎಸ್​.ಗೀತಾ, ವೀರಶೈವ ಬ್ಯಾಂಕ್​ ನಿರ್ದೇಶಕ ಎಂ.ಎಸ್​.ಸಿದ್ದಲಿಂಗೇಶ್ವರ್​ ಇದ್ದರು.

Published on
ಮಾಗಡಿ: ಹುಟ್ಟು&ಸಾವು ನಿಶ್ಚಿತ. ಭೂಮಿಯ ಮೇಲೆ ಜನಿಸಿದ ಮೇಲೆ ಸಮಾಜಕ್ಕೆ ಅಳಿಲು ಸೇವೆಯನ್ನಾದರೂ ಮಾಡಬೇಕು. ಸೇವೆ ಮಾಡಲು ಸಾಧ್ಯವಾಗದಿದ್ದರೂ ಸರಿ, ಇತರರಿಗೆ ತೊಂದರೆ ನೀಡದೆ ಬದುಕುವುದೇ ದೊಡ್ಡ ಸಾಧನೆ ಎಂದು ಜಡೆದೇವರ ಮಠದ ಪೀಠಾಧ್ಯಕ್ಷ ಶ್ರೀ ಇಮ್ಮಡಿ ಬಸವರಾಜ ಸ್ವಾಮೀಜಿ ನುಡಿದರು.
ಪಟ್ಟಣದ ಸಮೀಪದ ಜಡೇದೇವರ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಜನ್ಮವರ್ಧಂತಿಯಲ್ಲಿ ಭಕ್ತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಠಗಳು ಸಮಾಜದ ಶಕ್ತಿ ಕೇಂದ್ರಗಳು. ಅದರಲ್ಲೂ ರಾಜ್ಯದ ಮಠಗಳು ನೀಡುವ ಅನ್ನ, ಅಕ್ಷರ ಮತ್ತು ವಸತಿ ದಾಸೋಹದಿಂದ ಲಾಂತರ ಮಕ್ಕಳು ಇಂದು ದೇಶ&ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಶಕ್ತಿಯನ್ನು ಮಠಗಳು ಅನಾದಿಕಾಲದಿಂದಲೂ ಕಾಪಾಡಿಕೊಂಡು ಬಂದಿವೆ ಎಂದರು.
ರಾಜ್ಯ ಕಟ್ಟಡ ಮತ್ತು ಅಸಂಟಿತ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಡಾ.ಪ್ರಸನ್ನ ಗೌಡ ಮಾತನಾಡಿ, ಮಠಗಳು ಮಾಡುತ್ತಿರುವ ಸಾಮಾಜಿಕ ಸೇವೆಯನ್ನು ಯಾವುದೇ ಸರ್ಕಾರಗಳು ಮಾಡಲು ಸಾಧ್ಯವಿಲ್ಲ ಎಂದರು.
ಮುಖಂಡರಾದ ಎಚ್​.ಉಮೇಶ್​, ಮಧು, ಎಚ್​.ಎನ್​.ಶಾಂತಾ, ಚಂದ್ರಪ್ಪ, ಟಿಎಪಿಸಿಎಂಎಸ್​ ಅಧ್ಯಕ್ಷ ಶಿವಪ್ರಸಾದ್​, ನಾಗರುದ್ರ ಶರ್ಮ, ಚಂದ್ರಶೇಖರ್​, ಉಮಾಶಂಕರ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net