ಜೋಡಿ ಕೊಲೆ ಪ್ರಕರಣ ಬಾರಿ ಸದ್ದು ಮಾಡಿತ್ತು. ಪೊಲೀಸರಿಗೆ ಈ ಪ್ರಕರಣ ಕಠಿಣ ಸವಾಲಾಗಿತ್ತು. ಇತ್ತೀಚೆಗಷ್ಟೇ ಠಾಣೆಗೆ ವರ್ಗಾವಣೆಯಾಗಿದ್ದ ಸಿಪಿಐ ವಿಜಯ್ ಕುಮಾರ್ ಈ ಪ್ರಕರಣದ ಆರೋಪಿ ಪತ್ತೆಗೆ ಹೆಚ್ಚಿನ ಮುತುವರ್ಜಿ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ರವಿಕುಮಾರ್ ಗುಜರಾತ್ ರಾಜ್ಯದಲ್ಲಿ ಇರುವುದು ಗೊತ್ತಾಗುತ್ತಿದಂತೆ, ವಿಜಯ್ ಕುಮಾರ್ ನೇತೃತ್ವದಲ್ಲಿ ಪಿಎಸ್ಐಗಳಾದ ಅಣ್ಣಯ್ಯ, ಏಕಾಂಬರೇಶ್ವರ, ಸಿಬ್ಬಂದಿ ಲಿಂಗರಾಜು, ಕಾಂತರಾಜು, ಅನ್ವರ್ ಒಳಗೊಂಡ ವಿಶೇಷ ತಂಡ ಗುಜರಾತ್ಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.