ನಿಲ್ದಾಣದ ಮಧ್ಯದಲ್ಲಿ ಬಸವಳಿದ ಪಯಣಿಗ

ಚನ್ನಪಟ್ಟಣ ಬಸ್ ನಿಲ್ದಾಣದಲ್ಲಿ ಅಪಘಾತಕ್ಕೆ ಒಳಗಾದ ಮಹಿಳೆ.
ಚನ್ನಪಟ್ಟಣ ಬಸ್ ನಿಲ್ದಾಣದಲ್ಲಿ ಅಪಘಾತಕ್ಕೆ ಒಳಗಾದ ಮಹಿಳೆ.
Published on

ಪ್ರಮುಖ ಮುಖ್ಯಾಂಶಗಳು

  • ಬಸ್ ಏರಲು ನಿತ್ಯವೂ ತಳ್ಳಾಟ ನೂಕಾಟ
  • ಚಾಲಕ ಸ್ಪಲ್ಪ ವಿಚಲಿತರಾದರೂ ಅನಾಹುತ ಕಟ್ಟಿಟ್ಟಬುತ್ತಿ
ಚನ್ನಪಟ್ಟಣ
ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಬೆಂಗಳೂರು ಕಡೆಗೆ ಹೋಗುವ ಪ್ರಯಾಣಿಕರು ನಿಲ್ದಾಣದ ಮಧ್ಯಭಾಗದಲ್ಲಿ ನಿಲ್ಲುವುದು ಸಮಸ್ಯೆಗೆ ಕಾರಣವಾಗುತ್ತಿದೆ.
ಹೌದು...ನಗರದ ಸರ್ಕಾರಿ ಬಸ್ ನಿಲ್ದಾಣಕ್ಕೆ ಪ್ರತಿನಿತ್ಯ ಸಾವಿರಾರು ಮಂದಿ ಪ್ರಯಾಣಿಕರು ಬಂದು ಹೋಗುತ್ತಾರೆ. ಅದರಲ್ಲೂ ರಾಮನಗರ, ಬಿಡದಿ, ಕೆಂಗೇರಿ ಹಾಗೂ ಬೆಂಗಳೂರು ಕಡೆಗೆ ಹೋಗಲು ಹೆಚ್ಚಿನ ಜನ ನಿಲ್ದಾಣಕ್ಕೆ ಬರುತ್ತಾರೆ. ನಿಲ್ದಾಣವನ್ನು ಸುಸಜ್ಜಿತವಾಗಿ ನಿರ್ಮಿಸಿದರೂ, ಬೆಂಗಳೂರು ಮಾರ್ಗದ ಕಡೆ ಹೋಗುವ ಪ್ರಯಾಣಿಕರು ನಿಲ್ದಾಣದ ಮಧ್ಯಭಾಗದಲ್ಲಿ ನಿಲ್ಲುವುದು ರೂಢಿಯಾಗಿಬಿಟ್ಟಿದೆ. ನಿಲ್ದಾಣದ ಮಧ್ಯಭಾಗದಲ್ಲಿ ಬಸ್‌ಗಳಿಗಾಗಿ ಪ್ರಯಾಣಿಕರು ಕಾಯುವುದು ಸುರP್ಷÀತೆ ಸೇರಿ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತಿದೆ.
ಕೋಟ್ಯಂತರ ರೂಪಾಯಿ ವ್ಯಯಿಸಿ ಹೈಟೆಕ್ ನಿಲ್ದಾಣ ನಿರ್ಮಿಸಿದರೂ ಬೆಂಗಳೂರು ಮಾರ್ಗದ ಕಡೆಗೆ ಪಯಣ ಮಾಡುವ ಪ್ರಯಾಣಿಕರು ಬಿಸಿಲಿರಲಿ, ಮಳೆಇರಲಿ ನಿಲ್ದಾಣ ಆವರಣದ ಮಧ್ಯಭಾಗದಲ್ಲಿ ನಿಲ್ಲುವುದು ಅನಿವಾರ್ಯವಾಗಿದೆಯೇ ಎಂಬ ಪ್ರಶ್ನೆ ಮೂಡಿಸಿದೆ. ಮಳೆಗಾಲದಲ್ಲಂತೂ ಸಮಸ್ಯೆ ಇನ್ನೂ ಹೇಳತೀರದು.

ಅನಾಹುತ ಕಟ್ಟಿಟ್ಟಬುತ್ತಿ

ಮೈಸೂರಿನಿಂದ ಬರುವ ಬಸ್‌ಗಳು ನಿಲ್ದಾಣಕ್ಕೆ ಎಂಟ್ರಿಯಾದಾಗ ತಿರುವು ಪಡೆಯಬೇಕು. ಈ ತಿರುವಿನ ಒಂದು ಬದಿಯಲ್ಲಿಯೇ ಬಸ್‌ಗಳಿಗಾಗಿ ಪ್ರಯಾಣಿಕರು ಕಾಯುತ್ತಾರೆ. ಇದು ಸುರP್ಷÀತೆಯ ದೃಷ್ಟಿಯಿಂದ ಸಾಕಷ್ಟು ಅನನುಕೂಲ. ಚಾಲಕರು ಅಥವಾ ಪ್ರಯಾಣಿಕರು ಸ್ಪಲ್ಪ ವಿಚಲಿತರಾದರೂ ಅನಾಹುತ ಕಟ್ಟಿಟ್ಟಬುತ್ತಿ. ಈ ಸಮಸ್ಯೆಗೆ ನಿಲ್ದಾಣದ ಜವಾಬ್ದಾರಿ ಹೊಂದಿರುವ ಅಧಿಕಾರಿಗಳು ಕೂಡಲೇ ಪರ್ಯಾಯ ಉಪಾಯ ಮಾಡಲಿ ಎಂಬುದೇ ವಿಜಯವಾಣಿ ಕಳಕಳಿ.

ಬಸ್ ಶೆಲ್ಟರ್ ಸದ್ಬಳಸಿಕೊಳ್ಳಬಹುದಲ್ಲವೇ?

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಬಸ್ ನಿಲ್ದಾಣ ಹೈಟೆಕ್ ಮಾಡಲಾಗಿದೆ. ನಿಲ್ದಾಣದ ಜತೆಗೆ ಹಿಂಬದಿಯಲ್ಲಿ ಬಸ್ ಶೆಲ್ಟರ್ ನಿರ್ಮಿಸಲಾಗಿದೆ. ಈ ಶೆಲ್ಟರ್ ಜಾಗದಲ್ಲಿ ಬೆಂಗಳೂರು ಮಾರ್ಗದ ಬಸ್‌ಗಳು ಕಡ್ಡಾಯ ನಿಲುಗಡೆ ಮಾಡಬೇಕು ಎಂಬ ನಿಯಮ ಜಾರಿಗೊಳಿಸಿದರೆ, ಈ ಸಮಸ್ಯೆಗೆ ಪರಿಹಾರ ನೀಡಬಹುದಾಗಿದೆ. ಈ ಶೆಲ್ಟರ್‌ನಲ್ಲಿ ನೆರಳು ಹಾಗೂ ಆಸನಗಳ ವ್ಯವಸ್ಥೆಯಿದ್ದು, ಈ ಜಾಗದಲ್ಲಿ ಬೆಂಗಳೂರು ಮಾರ್ಗದ ಬಸ್‌ಗಳು ನಿಲ್ಲಿಸಿದರೆ, ಜನತೆ ಬಿಸಿಲು, ಮಳೆ ಯಾವುದೇ ಸಂದರ್ಭದಲ್ಲೂ ಅರಾಮವಾಗಿ ಬಸ್‌ಗಳನ್ನು ಕಾಯಬಹುದಾಗಿದೆ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಂಡರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಮೈಸೂರು ಮಾರ್ಗದಲ್ಲೂ ಇದೇ ಕಥೆ

ಮೈಸೂರು ಮಾರ್ಗದ ಕಡೆಗೆ ಪ್ರಯಾಣ ಬೆಳೆಸುವವರದೂ ಇದೇ ಕಥೆಯಾಗಿದೆ. ಮದ್ದೂರು, ಮಂಡ್ಯ, ಮಳ್ಳವಳ್ಳಿ ಹಾಗೂ ಮೈಸೂರು ಮಾರ್ಗದ ಕಡೆಗೆ ಹೋಗುವವರು ಸಹ ನಿಲ್ದಾಣದ ಎಡಭಾಗದಲ್ಲಿರುವ ಶೌಚಗೃಹದ ಬಳಿ ನಿಲ್ಲುತ್ತಾರೆ. ಬೆಂಗಳೂರು ಮಾರ್ಗದ ಸಮಸ್ಯೆಯಂತೆ ಈ ಮಾರ್ಗದ ಪ್ರಯಾಣಿಕರೂ ಹೈರಾಣಾಗುತ್ತಿz್ದÁರೆ. ನಿಲ್ದಾಣ ಜವಾಬ್ದಾರಿ ಹೊಂದಿರುವ ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸÀಬೇಕಿದೆ.

ಬೆಂಗಳೂರು ಕಡೆಗೆ ಹೋಗುವಾಗ ನಿಲ್ದಾಣದ ಮಧ್ಯಭಾಗದಲ್ಲಿ ಬಸ್‌ಗಳಿಗೆ ಕಾಯಬೇಕು. ಈ ಬಿರುಬಿಸಿಲಿನಲ್ಲಿ ನಿಲ್ಲುವುದು ಸಾಕಷ್ಟು ತ್ರಾಸದಾಯಕ. ಮಳೆಗಾಲದಲ್ಲೂ ಬೇರೆ ರೀತಿಯ ಸಮಸ್ಯೆಯಾಗುತ್ತದೆ. ಬಸ್‌ಗಳು ವೇಗವಾಗಿ ಬಂದಾಗ ಸ್ವಲ್ಪ ಹೆಚ್ಚು ಕಡಿಮೆಯಾದರೆ ಅಪಾಯ ಖಚಿತ. ಬೆಂಗಳೂರು ಮಾರ್ಗದ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿಕೊಡಲಿ.
| ಅಜಯ್ ಪ್ರಯಾಣಿಕ

ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಪ್ರಯಾಣಿಕರ ಅನುಕೂಲಕ್ಕೆ ಬೇಕಾದ ವ್ಯವಸ್ಥೆ ಮಾಡುತ್ತಿವೆ. ಪ್ರಯಾಣಿಕರ ಸುರP್ಷÀತೆಯೇ ನಮ್ಮ ಆದ್ಯತೆಯಾಗಿದೆ. ಬಸ್ ನಿಲುಗಡೆ ವಿಚಾರವಾಗಿ ಸಾರ್ವಜನಿಕರ ಸಹಕಾರ ಸಹ ಮುಖ್ಯ. ಆದಷ್ಟೂ ಬೇಗ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ.
| ಶ್ರೀಕಾಂತ್, ಘಟಕ ವ್ಯವಸ್ಥಾಪಕ ಚನ್ನಪಟ್ಟಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net